ದರ್ಶನ್‌ ಡೆವಿಲ್‌ ಸಿನಿಮಾಗೆ ರಚನಾ ರೈ ಹೀರೋಯಿನ್‌, ಇಲ್ಲಿವೆ ಕುಡ್ಗದ ಬೆಡಗಿಯ ಮುದ್ದಾದ ಫೋಟೋಸ್‌!

Published : May 17, 2024, 06:54 PM IST

ಸ್ಯಾಂಡಲ್‌ವುಡ್‌ ಸ್ಟಾರ್‌ ದರ್ಶನ್‌ ಅವರ ಮುಂದಿನ ಸಿನಿಮಾ ಡೆವಿಲ್‌ ದಿ ಹೀರೋಗೆ ಹೀರೋಯಿನ್‌ ಘೋಷಣೆಯಾಗಿದೆ. ಕರ್ನಾಟಕದ ರಚನಾ ರೈ ಈ ಸಿನಿಮಾಗೆ ಹೀರೋಯಿನ್‌ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.  

PREV
117
ದರ್ಶನ್‌ ಡೆವಿಲ್‌ ಸಿನಿಮಾಗೆ ರಚನಾ ರೈ ಹೀರೋಯಿನ್‌, ಇಲ್ಲಿವೆ ಕುಡ್ಗದ ಬೆಡಗಿಯ ಮುದ್ದಾದ ಫೋಟೋಸ್‌!

ಸ್ಯಾಂಡಲ್‌ವುಡ್‌ ಸ್ಟಾರ್‌ ದರ್ಶನ್‌ ನಟನೆಯ ಹೊಸ ಸಿನಿಮಾದ ಹೀರೋಯಿನ್‌ ಘೋಷಣೆಯಾಗಿದೆ. ಮಿಲನ ಪ್ರಕಾಶ್‌ ನಿರ್ದೇಶನದ ಸಿನಿಮಾ ಇದಾಗಿದೆ.
 

217

ಮೇ 10 ರಂದು ಚಿತ್ರದ ಫರ್ಸ್ಟ್‌ ಲುಕ್‌ ಅನ್ನು ಸಿನಿಮಾ ತಂಡ ರಿಲೀಸ್‌ ಮಾಡಿತ್ತು. ಅದಕ್ಕೂ ಮುನ್ನ ಸಿನಿಮಾದಲ್ಲಿ ದರ್ಶನ್‌ ಲುಕ್‌ ಹೇಗಿರಲಿದೆ ಎನ್ನುವ ವಿವರವನ್ನೂ ನೀಡಿತ್ತು.
 

317

ಡೆವಿಲ್‌ ದ ಹೀರೋ ಸಿನಿಮಾ ಘೋಷಣೆ ಆದ ದಿನದಿಂದಲೂ ದರ್ಶನ್‌ ಫ್ಯಾನ್ಸ್‌ ವಲಯದಲ್ಲಿ ಸಿನಿಮಾದ ಅಪ್‌ಡೇಟ್‌ಗಳ ಕುರಿತಾಗಿ ಸಿಕ್ಕಾಪಟ್ಡೆ ಕುತೂಹಲಗಳಿದ್ದವು.
 

417

ಕಾಟೇರ ಚಿತ್ರದ ದೊಡ್ಡ ಮಟ್ಟದ ಯಶಸ್ಸಿನ ಬಳಿಕ ದರ್ಶನ್‌ ನಟನೆಯ ಮುಂದಿನ ಚಿತ್ರ ಡೆವಿನ್‌ ದ ಹೀರೋವನ್ನು ಘೋಷಣೆ ಮಾಡಲಾಗಿತ್ತು.
 

517


ಪುನೀತ್‌ ರಾಜ್‌ಕುಮಾರ್‌ ಅವರ ಮಿಲನ ಚಿತ್ರದಿಂದ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡಿದ್ದ ಮಿಲನ ಪ್ರಕಾಶ್‌ ಈ ಹಿಂದೆ ದರ್ಶನ್‌ ನಟನೆಯ ತಾರಕ್‌ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

617

ಇತ್ತೀಚೆಗೆ ಚಿತ್ರದ ಕುರಿತಾಗಿ ಸಾಕಷ್ಟು ಅಪ್‌ಡೇಟ್‌ಗಳನ್ನು ನೀಡಿದ್ದ ಸಿನಿಮಾ ತಂಡ, ಶುಕ್ರವಾರ ಬಹುಮುಖ್ಯವಾದ ಅಪ್‌ಡೇಟ್‌ ಅನ್ನು ಹಂಚಿಕೊಂಡಿದೆ.

717


ಕರ್ನಾಟಕದ ಕರಾವಳಿಯ ರಚನಾ ರೈ ಈ ಸಿನಿಮಾದಲ್ಲಿ ದರ್ಶನ್‌ಗೆ ಹೀರೋಯಿನ್‌ ಆಗಿ ನಟಿಸಲಿದ್ದಾರೆ ಎಂದು ಸಿನಿಮಾ ತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.

817

ರಚನಾ ರೈ ಈ ಸಿನಿಮಾಗೆ ನಾಯಕಿಯಾಗುತ್ತಾರೆ ಎಂದು ಕಳೆದ ಕೆಲವು ತಿಂಗಳುಗಳಿಂದಲೇ ಸುದ್ದಿ ಹಬ್ಬಿತ್ತು. ಆದರೆ, ಇದನ್ನು ಚಿತ್ರ ತಂಡ ಅಧಿಕೃತವಾಗಿ ತಿಳಿಸಿರಲಿಲ್ಲ.

917

ಇದಕ್ಕೂ ಮುನ್ನ ತುಳು ಸಿನಿಮಾ ಸರ್ಕಸ್‌ನಲ್ಲಿ ನಟಿಸಿದ್ದ ರಚನಾ ರೈ, ಬಳಿಕ ಧನ್ವೀರ್‌ ಗೌಡ ಅವರ ವಾಮನ ಚಿತ್ರದಲ್ಲಿಯೂ ನಟಿಸಿದ್ದರು.

1017

'ವೆಲ್‌ಕಮ್‌ ಆನ್‌ ಬೋರ್ಡ್‌, ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ. ರಚನಾ ರೈ ಸ್ವಾಗತ' ಎಂದು ಸಿನಿಮಾದ ನಿರ್ಮಾಣ ಸಂಸ್ಥೆಯಾದ ಜೈ ಮಾತಾ ಕಂಬೈನ್ಸ್‌ ತನ್ನ ಸೋಶಿಯಲ್‌ ಮೀಡಿಯಾ ಪುಟದಲ್ಲಿ ಫೋಟೋದ ಜೊತೆ ಅಪ್‌ಡೇಟ್‌ ಹಂಚಿಕೊಂಡಿದೆ.

1117


ಡೆವಿಲ್‌ ಸಿನಿಮಾದ ಮೊದಲ ಹಂತದ ಶೂಟಿಂಗ್‌ ಈಗಾಗಲೇ ಮುಕ್ತಾಯಗೊಂಡಿದ್ದು, 2ನೇ ಹಂತದ ಶೂಟಿಂಗ್‌ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ.

1217

'ಡೆವಿಲ್‌: ದ ಹೀರೋ; ಮಾಸ್‌ ಎಂಟರ್‌ಟೇನರ್‌ ಸಿನಿಮಾ ಆಗಿರುವ ಸಾಧ್ಯತೆ ಇದ್ದು, ಮುಂದಿನ ಅಕ್ಟೋಬರ್‌ ವೇಳೆ ತೆರೆಗೆ ಅಪ್ಪಳಿಸುವ ಸಾಧ್ಯತೆ ಇದೆ.

1317

ಡೆವಿಲ್‌: ದ ಹೀರೋ ಸಿನಿಮಾದ ಛಾಯಾಗ್ರಹಣವನ್ನು ಸುಧಾಕರ್‌ ನಿವರ್ಹಿಸಲಿದ್ದು, ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ ಮಾಡಲಿದ್ದಾರೆ.

1417

ಇದು ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ನಟನೆಯ 57ನೇ ಸಿನಿಮಾ ಇದಾಗಿದೆ. ಕಳೆದ ವರ್ಷದ ನವೆಂಬರ್‌ 2 ರಂದು ಸಿನಿಮಾ ಲಾಂಚ್‌ ಆಗಿತ್ತು.

1517

ರಚನಾ ರೈ ಮೂಲತಃ ಬ್ಯಾಡ್ಮಿಂಟನ್‌ ಪ್ಲೇಯರ್‌ ಕೂಡ ಆಗಿದ್ದು, ಕೆಲವೊಂದು ಟೂರ್ನಮೆಂಟ್‌ಗಳಲ್ಲಿಯೂ ಆಡಿದ್ದಾರೆ ಎಂದು ವರದಿಯಾಗಿದೆ.

1617

ಡೆವಿಲ್ ಸಿನಿಮಾದ ಶೂಟಿಂಗ್  ಈಗಾಗಲೇ ಭರ್ಜರಿಯಾಗಿ ಮುಕ್ತಾಯ ಕಂಡಿದೆ. ನಟ ದರ್ಶನ್‌ ಕೂಡ ತಮ್ಮ ಭಾಗದ ಒಂದಷ್ಟು ಕೆಲಸವನ್ನು ಮಾಡಿ ಮುಗಿಸಿದ್ದಾರೆ. 

1717

ಶೂಟಿಂಗ್ ಟೈಮ್‌ನಲ್ಲಿಯೇ ದರ್ಶನ್‌ ಪೆಟ್ಟು ಕೂಡ ಮಾಡಿಕೊಂಡಿದ್ದರು. ಇದರಿಂದಾಗಿ ಕೆಲ ಕಾಲ ರೆಸ್ಟ್ ತೆಗೆದುಕೊಂಡಿದ್ದರು. ಈ ಕಾರಣಕ್ಕೆ ಸಿನಿಮಾ ರಿಲೀಸ್ ಸ್ವಲ್ಪ ಮುಂದೆ ಹೋದ್ರು ಹೋಗಬಹುದು ಎನ್ನಲಾಗಿದೆ.

Read more Photos on
click me!

Recommended Stories