ಸಪ್ತಮಿ ಗೌಡ ಪ್ರೀತಿಯ ಸಿಂಬಾ ಗುಂಡು ಇನ್ನಿಲ್ಲ; ಫೋಟೋ ಹಂಚಿಕೊಂಡು ಕಣ್ಣೀರಿಟ್ಟ ನಟಿ

Published : Mar 11, 2025, 04:19 PM ISTUpdated : Mar 11, 2025, 04:29 PM IST

ತಮ್ಮ ಪ್ರೀತಿಯ ಶ್ವಾನ ನೆನೆದು ಪತ್ರ ಬರೆದ ಸಪ್ತಮಿ ಗೌಡ. ಸಿಂಬಾ ಗುಂಡು ಇಲ್ಲದೆ ಜೀವನ ಎಷ್ಟು ಕಷ್ಟ ಅಂತ ಗೊತ್ತಿರಲಿಲ್ಲ ಎಂದ ನಟಿ....

PREV
19
ಸಪ್ತಮಿ ಗೌಡ ಪ್ರೀತಿಯ ಸಿಂಬಾ ಗುಂಡು ಇನ್ನಿಲ್ಲ; ಫೋಟೋ ಹಂಚಿಕೊಂಡು ಕಣ್ಣೀರಿಟ್ಟ ನಟಿ

ಕನ್ನಡ ಚಿತ್ರರಂಗದ ನಟ ಸಪ್ತಮಿ ಗೌಡ ಸುಮಾರು 15 ವರ್ಷಗಳಿಂದ ಮನೆಯಲ್ಲಿ ಸಾಕುತ್ತಿದ್ದ ಶ್ವಾನ ಮಾರ್ಚ್‌ 10ರಂದು ಕೊನೆಯುಸಿರೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮುದ್ದು ಮರಿಯ ಫೋಟೋ ಹಂಚಿಕೊಂಡಿದ್ದಾರೆ.

29

'ಸಿಂಬಾ. ಬೆಸ್ಟ್‌ ಬಾಯ್‌ ಎವರ್. 16-04-2010 ರಿಂದ 10-03-2025' ಎಂದು ಬರೆದುಕೊಂಡು ಸಿಂಗಾ ಜೊತೆ ಇದುವರೆಗೂ ಕ್ಲಿಕ್ ಮಾಡಿಕೊಂಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

39

'ನನಗೆ ಏನ್ ಅನಿಸುತ್ತಿದೆ ತಿಳಿಯುತ್ತಿಲ್ಲ. ನಮ್ಮ ಸಿಂಬಾ ಗುಂಡು ಇಲ್ಲದೆ ನಾವು ಬದುಕಬೇಕು ದಿನನಿತ್ಯ ನಡೆಸಬೇಕು ಎಂದು ನಾವು ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ'

49

'ನಾನು ಸದಾ ಸಿಂಬ ಗುಂಡು ಬಗ್ಗೆ ಯೋಚನೆ ಮಾಡುತ್ತಿದ್ದೆ ಆದರೆ ಈಗ ಅವನಿಲ್ಲ ನಮ್ಮ ಸುತ್ತಲು ಸದಾ ಇಲ್ಲದೆ ನಾವು ಬದುಕುವುದು ಹೇಗೆ'

59

'ನಮ್ಮ ಮನೆಗೆ ಸಿಂಬ ಗುಂಡು ಬಂದಾಗ ನಡೆಯುವುದಕ್ಕೂ ಗೊತ್ತಿರಲಿಲ್ಲ ಆದರೂ ಕಲಿತು ನಡೆದು ನಮ್ಮೆಲ್ಲರ ಮನಸಿನೊಳಗೆ ನಡೆದುಕೊಂಡ ಬಂದೆ'

69

'ನೀನು ಭೇಟಿ ಮಾಡಿರುವ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿಗೂ ಹತ್ತಿರವಾಗಿರುವೆ. ನನ್ನ ಜೀವನದ ಪ್ರಮುಖ ಘಟಗಳಲ್ಲಿ ನನ್ನೊಟ್ಟಿಗೆ ಇದ್ದೆ. ಅದ್ಭುತ ನೆನಪುಗಳನ್ನು ಕೊಟ್ಟಿರುವೆ'

79

'ನಾವು ಸದಾ ನೆನೆಪು ಇಟ್ಟಿಕೊಳ್ಳುವ ತಕ್ಷಣಗಳನ್ನು ಸೃಷ್ಟಿ ಮಾಡಿರುವೆ. ನಾನು ನಿನ್ನ ಕಿವಿಯಲ್ಲಿ ಸದಾ ಹೇಳುತ್ತಿದ್ದ ಮಾತುಗಳನ್ನು ನೆನಪಿಸಿಕೋ ಸಿಂಬಾ'

89

'ಮುಂದೊಂದು ದಿನ ನಿನ್ನನ್ನು ಭೇಟಿ ಮಾಡಿದಾಗ ಬಾಲ ಅಲ್ಲಾಡಿಸು, ಕಿವಿಗಳನ್ನು ನೆಟ್ಟಗೆ ಮಾಡಿಕೊಂಡು ಬಾ. ಕಾಕರ ಕೊಟ್ಟಿಲ್ಲ ಅಂತ ಕೋಪ ಮಾಡಿಕೊಳ್ಳಬೇಡ'

99

'ಮುಂದೊಂದು ದಿನ ನಿನಗೆ ಕೈ ತುಂಬಾ ಗೊಂಬೆ, ತಿಂಡಿ ಹಾಗೂ ಪ್ರೀತಿ ಸಿಗುವಂತೆ ನಾನು ನೋಡಿಕೊಳ್ಳುತ್ತೀನಿ' ಎಂದು ಸಪ್ತಮಿ ಗೌಡ ಭಾವುಕರಾಗಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories