ಎಳ್ಳು ಬೆಲ್ಲ ತಿಂದು ಮುದ್ದು- ಮುದ್ದಾಗಿ ಮಾತನಾಡೋಣ: ಸಂಕ್ರಾಂತಿ ಹಬ್ಬಕ್ಕೆ ರಿಷಬ್ ಶೆಟ್ಟಿ ಮಕ್ಕಳ ವಿಶ್!

First Published | Jan 16, 2024, 3:00 AM IST

ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಅದ್ಧೂರಿಯಾಗಿ, ಸಂತಸದಿಂದ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಸ್ಯಾಂಡಲ್‌ವುಡ್‌ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕುಟುಂಬ ಕೂಡಾ ವರ್ಷದ ಪ್ರತಿಯೊಂದು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. 
 

ಮಕರ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ರಿಷಬ್ ಶೆಟ್ಟಿ ಕುಟುಂಬ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಫೋಟೋ ಹಂಚಿಕೊಂಡಿದ್ದಾರೆ. ರಣ್ವಿತ್ ಮತ್ತು ರಾಧ್ಯಾ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಎಳ್ಳು ಬೆಲ್ಲ ತಿಂದು ಮುದ್ದು- ಮುದ್ದಾಗಿ ಮಾತನಾಡೋಣ.. ನಮ್ಮಿಂದ ತಮ್ಮೆಲ್ಲರಿಗೂ ಮಕರ ಸಂಕ್ರಾತಿಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಕೆಂಪು ಬಣ್ಣದ ಡ್ರೆಸ್‌ನಲ್ಲಿ ಪ್ರಗತಿ, ವೈಟ್ ಆಂಡ್ ಪರ್ಪಲ್‌ ಕಲರ್ ಡ್ರೆಸ್‌ನಲ್ಲಿ ರಣ್ವಿತ್ ಮತ್ತು ಸೀರೆಯಲ್ಲಿ ರಾಧ್ಯಾ ಮಿಂಚುತ್ತಿದ್ದಾರೆ. 

Tap to resize

ಫೋಟೋಸ್ ನೋಡಿದ ನೆಟ್ಟಿಗರು ರಿಷಬ್​ ಶೆಟ್ಟಿ ಕುಟುಂಬಕ್ಕೆ ಸಂಕ್ರಾತಿ ಹಬ್ಬದ ಶುಭಾಶಯಗಳು, ಚಂದ ಚಂದ ಮುದ್ದು ಮಣಿಗಳು! ಥೇಠ್ ಅಮ್ಮನ ಹಾಗೇ, ರಿಷಬ್ ಸರ್ ಎಲ್ಲಿ ಅಂತೆಲ್ಲಾ ಕಾಮೆಂಟ್ ಹಾಕುವುದರ ಜೊತೆಗೆ ಕಾಂತರಾ 2 ಚಿತ್ರದ ಅಪ್ಡೇಟ್ ಬಗ್ಗೆ ಕೇಳಿದ್ದಾರೆ.

ಕಾಂತಾರ ಪ್ರೀಕ್ವೆಲ್​ ಕೆಲಸದಲ್ಲಿ ನಟ ರಿಷಬ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ಕಾಂತಾರ ಸಿನಿಮಾವನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ರಿಷಬ್ ಶೆಟ್ಟಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಎರಡು ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೊಸ ವರ್ಷಾರಂಭದ ಸಂದರ್ಭದಲ್ಲಿ ನಟ-ನಿರ್ದೇಶಕ ರಿಷಬ್​ ಶೆಟ್ಟಿ ನೇಮೋತ್ಸವದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದರು. ಏನೇ ಎದುರಾದರೂ ಕುಗ್ಗಬೇಡ ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ದೈವ ಆಭಯ ನೀಡಿತ್ತು.

ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಕೂಡ ಇತ್ತೀಚಿಗೆ ಸಖತ್ ಸುದ್ದಿಯಲ್ಲಿದ್ದಾರೆ. ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಗತಿ ಕೂಡ ರಿಷಬ್ ಶೆಟ್ಟಿಯ ಅನೇಕ ಸಿನಿಮಾಗಳಿಗೂ ಅವರೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.

Latest Videos

click me!