ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಫೇಮಸ್ ಆಗಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಇದೀಗ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಪೋಟೋಗಳು ವೈರಲ್ ಆಗಿವೆ.
27
ಸಿಂಪಲ್ ಕುರ್ತಾ ತೊಟ್ಟ ಮೇಘಾ ಶೆಟ್ಟಿ ಸಖತ್ ಸ್ಮೈಲ್ ನೀಡಿದ್ದಾರೆ. ಜೊತೆಗೆ ನೀವು ಆಯ್ಕೆ ಮಾಡುವ ಕೇಶ ವಿನ್ಯಾಸದ ಶೈಲಿ ಯಾವುದು ಅಂತ ಕ್ಯಾಪ್ಷನ್ ಕೊಟ್ಟಿದ್ದಾರೆ. ವಿವಿಧ ರೀತಿಯ ಕೇಶ ವಿನ್ಯಾಸದ ಶೈಲಿ ಫೋಟೋಗಳನ್ನು ಮೇಘಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
37
ಮೇಘಾ ಶೆಟ್ಟಿ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಲೈಕ್ಗಳ ಸುರಿಮಳೆ ಗೈದಿದ್ದಾರೆ. ಸೂಪರ್, ನೈಸ್, ಯಾಮಾರಿ ಮನಸ್ಸು ಕೊಟ್ಬಿಟ್ಟೆ ಕಣ್ರೀ, ಬ್ಯೂಟಿಫುಲ್ ಎಂದು ಕಾಮೆಂಟ್‌ಗಳನ್ನು ಹಾಕಿದ್ದಾರೆ.
47
ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಖ್ಯಾತಿ ಗಳಿಸಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಅನುಗಾಗಿ ಎಷ್ಟೋ ಜನ ಧಾರಾವಾಹಿ ನೋಡ್ತಾ ಇದ್ದರು.
57
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮೇಘಾ ಚಂದನವನ ಪ್ರವೇಶಿಸಿದರು. ನಂತರ ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದರು.
67
ಇತ್ತೀಚೆಗಷ್ಟೇ ಧನ್ವೀರ್ ಗೌಡ ಅಭಿನಯದ ಕೈವ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಮೇಘಾ ಶೆಟ್ಟಿ, ಸದ್ಯ ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರದಲ್ಲಿ ನಟಿಸುತ್ತಿದ್ದಾರೆ.
77
ಕಿರುತೆರೆ ಹಾಗೂ ಬೆಳ್ಳಿತೆರೆ ನಟಿ ಮೇಘಾ ಶೆಟ್ಟಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ಸುಮಾರು 12 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.