ಮಾವನ ಮಗನ ಜೊತೆ ಗೌರಿ ಶ್ರುತಿ… ಜೋಡಿ ಚೆನ್ನಾಗಿದೆ ಅಂತಿದ್ದಾರೆ ಜನ, ಆದ್ರೆ ಇವ್ರು ಮಾತ್ರ…

Published : Oct 07, 2024, 05:00 PM ISTUpdated : Oct 07, 2024, 05:05 PM IST

ನಟಿ ಶ್ರುತಿ ಮಗಳು ಗೌರಿ ಹಾಗೂ ನಟ ಶರಣ್ ಮಗ ಹೃದಯ್ ಇಬ್ಬರು ಜೊತೆಯಾಗಿ ಫೋಟೊ ತೆಗೆಸಿಕೊಂಡಿದ್ದು, ನೆಟ್ಟಿಗರು ಜೋಡಿ ಚೆನ್ನಾಗಿದೆ ಅಂತಿದ್ದಾರೆ. ಆದ್ರೆ ಇಬ್ಬರದ್ದು ಅಕ್ಕ- ತಮ್ಮನ ಸಂಬಂಧ.

PREV
17
ಮಾವನ ಮಗನ ಜೊತೆ ಗೌರಿ ಶ್ರುತಿ… ಜೋಡಿ ಚೆನ್ನಾಗಿದೆ ಅಂತಿದ್ದಾರೆ ಜನ, ಆದ್ರೆ ಇವ್ರು ಮಾತ್ರ…

ಸ್ಯಾಂಡಲ್’ವುಡ್ ಜನಪ್ರಿಯ ನಟಿ ಶ್ರುತಿ (Shruthi Krishna) ಮಗಳು ಗೌರಿ ಈಗಾಗಲೇ ಸೋಶಿಯಲ್ ಮೀಡಿಯಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ಸುದ್ದಿಯಾಗುತ್ತಲೇ ಇರುತ್ತಾರೆ. ಜೊತೆಗೆ ತಮ್ಮ ಹಾಡಿನ ಮೂಲಕವೂ ಗೌರಿ ಜನಮನ ಗೆದ್ದಿದ್ದಾರೆ. ಜೊತೆಗೆ ತಮ್ಮ ಸಿಂಪ್ಲಿಸಿಟಿ, ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. 

27

ಇದೀಗ ಗೌರಿ ಶ್ರುತಿ (Gowri Shruthi) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಹುಡುಗನ ಜೊತೆ ಕೈಕೈಹಿಡಿದು, ಹೆಗಲ ಮೇಲೆ ಕೈ ಹಾಕಿ ಫೋಟೊ ತೆಗೆಸಿಕೊಂಡಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಜೋಡಿ ಚೆನ್ನಾಗಿದೆ ಎಂದು ಹೇಳ್ತಿದ್ದಾರೆ ನೆಟ್ಟಿಗರು. 
 

37

ಅಷ್ಟಕ್ಕೂ ಗೌರಿ ಶ್ರುತಿ ಜೊತೆ ಕಾಣಿಸಿಕೊಂಡ ಈ ಹುಡುಗ ಬೇರೆ ಯಾರೂ ಅಲ್ಲ ನಟ ಶರಣ್ ಪುತ್ರ ಅಂದ್ರೆ ಶ್ರುತಿ ಅವರ ಅಣ್ಣನ ಮಗ ಅಂದ್ರೆ ಗೌರಿಯವರ ಮಾವನ ಮಗ ಹೃದಯ್ ಶರಣ್ (Hruday Sharan). ಗೌರಿ ತಮ್ಮ ಮುದ್ದಿನ ಮಾವನ ಮಗನ ಜೊತೆ ಫೋಟೊ ತೆಗೆಸಿಕೊಂಡು ಪೋಸ್ಟ್ ಮಾಡಿದ್ದು, ಇದಕ್ಕೆ ತರಹೇವಾರಿ ಕಾಮೆಂಟ್ ಗಳು ಬರುತ್ತಿವೆ. 

47

ಕೆಲವರು ಯಾರಿವರು ಎಂದು ಕೇಳಿದ್ರೆ, ಇನ್ನೂ ಕೆಲವರು ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ. ಯಾವಾಗ ಮದ್ವೆ ಅಂತಾನೂ ಕೇಳ್ತಿದ್ದಾರೆ. ಇನ್ನೂ ಕೆಲವರು ಹುಡುಗ ಚೆನ್ನಾಗಿದ್ದಾರೆ ಎಂದಿದ್ದಾರೆ. ಇನ್ನೂ ಕೆಲವರು ಅತ್ತೆ ಮಗಳ ಜೊತೆ ಮಾವನ ಮಗ ಅಂತಾನೂ ಕಾಮೆಂಟ್ ಮಾಡಿದ್ದಾರೆ. 
 

57

ಶರಣ್, ಶ್ರುತಿ ಎಲ್ಲರದ್ದೂ ಕೂಡು ಕುಟುಂಬ ಅಂತಾನೆ ಹೇಳಬಹುದು, ಬೇರೆ ಬೇರೆಯಾಗಿದ್ರೂ ಎಲ್ಲರೂ ಹೆಚ್ಚಾಗಿ ಜೊತೆಯಾಗಿಯೇ ಕಂಡು ಬರ್ತಾರೆ. ಎಲ್ಲಾ ಕಡೆ ಜೊತೆಯಾಗಿಯೇ ಟ್ರಾವೆಲ್ ಮಾಡ್ತಾರೆ. ಗೌರಿ ಮತ್ತು ಹೃದಯ್ ಕೂಡ ಅಷ್ಟೇ. ಇಬ್ಬರದ್ದು ಅಕ್ಕ- ತಮ್ಮನ ಸಂಬಂಧ ಅಂತ ಹೇಳಬಹುದು. 

67

ಹೌದು ಶ್ರುತಿ ಪುತ್ರಿ ಗೌರಿ ಮನೆಯ ಹಿರಿಯ ಮೊಮ್ಮಗಳು, ಹೃದಯ್ ಗೌರಿಗಿಂತ ತುಂಬಾನೆ ಚಿಕ್ಕವರು. ಗೌರಿ ಹೃದಯ್ ಅವರನ್ನ ತಮ್ಮ ಅಂತಾನೇ ಕರೆಯೋದು. ಗೌರಿ ಈ ಹಿಂದೆಯೂ ಸೋಶಿಯಲ್ ಮೀಡಿಯಾದಲ್ಲಿ ಹೃದಯ್ ಜೊತೆಗಿನ ಫೋಟೊ ವಿಡಿಯೋಗಳನ್ನು ಶೇರ್ ಮಾಡಿದ್ದರು. ಹೃದಯ ಹುಟ್ಟುಹಬ್ಬಕ್ಕೂ ವಿಶ್ ಮಾಡಿ ನನ್ನ ಪುಟ್ಟ ತಮ್ಮ ಅಂತ ಹೇಳಿದ್ದರು. 
 

77

ಅಷ್ಟೇ ಅಲ್ಲ ರಕ್ಷಾ ಬಂಧನದಂದೂ ಸಹ ಹೃದಯ್ ಗೆ ಗೌರಿ ರಾಖಿ ಕೂಡ ಕಟ್ಟಿದ್ದರು. ಆದ್ರೆ ಜನರು ಮಾತ್ರ ಇವರಿಬ್ಬರು ಮಾವ-ಅತ್ತೆಯ ಮಗಳು ಆಗಿರೋದ್ರಿಂದ ಏನೆಲ್ಲಾ ಜೋಡಿ ಚೆನ್ನಾಗಿದೆ ಅಂತ ಕಾಮೆಂಟ್ ಮಾಡ್ತಿದ್ದಾರೆ. ಮಾವನ ಮಗ ಅಂತ ಮದ್ವೆ ಆಗಬೇಕು ಅಂತೇನು ಇಲ್ಲ ಅಲ್ವಾ? ಅಕ್ಕ -ತಮ್ಮ ಕೂಡ ಆಗಬಹುದು ಏನಂತೀರಾ? 
 

click me!

Recommended Stories