ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಶಿವಣ್ಣ ನಿವಾಸದಲ್ಲಿ ತೆಲಗು ನಟ Allu Arjun!

Suvarna News   | Asianet News
Published : Feb 03, 2022, 06:13 PM ISTUpdated : Feb 03, 2022, 06:39 PM IST

ಬೆಂಗಳೂರಿಗೆ ಆಗಮಿಸಿ ಹ್ಯಾಟ್ರಿಕ್ ಹೀರೋ ಮತ್ತು ಪವರ್ ಸ್ಟಾರ್ ನಿವಾಸಕ್ಕೆ ಭೇಟಿ ಕೊಟ್ಟ ತೆಲಗು ಸ್ಟೈಲಿಷ್ ಸ್ಟಾರ್. 

PREV
17
ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಶಿವಣ್ಣ ನಿವಾಸದಲ್ಲಿ ತೆಲಗು ನಟ Allu Arjun!

ತಮಿಳು ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಇಂದು ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ್ದು, ಅಪ್ಪು ನಿವಾಸಕ್ಕೆ ಭೇಟಿ ನೀಡಿದ್ದಾರೆ. 

27

ಬೆಂಗಳೂರಿನ ಹೆಚ್‌ಎಎಲ್‌ ಏರ್‌ಪೋರ್ಟ್‌ಗೆ (HAL Airport) ತಮ್ಮ ಪ್ರೈವೇಟ್‌ ಜೆಟ್‌ ಮೂಲಕ ಆಗಮಿಸಿದ ಅಲ್ಲು, ಸೀದಾ ಶಿವಣ್ಣರ (Dr Shivarajkumar) ಮನೆಗೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ. 

37

ನಾಗಾವಾರದಲ್ಲಿರುವ ಶಿವರಾಜ್‌ಕುಮಾರ್‌ ಅವರ ನಿವಾಸಕ್ಕೆ ಭೇಟಿ ನೀಡಿ ಕೆಲವು ಗಂಟೆಗಳ ಕಾಲ ಸಮಯ ಕಳೆದಿದ್ದಾರೆ. ಮಾತುಕತೆಯಲ್ಲಿ ಗೀತಾ ಶಿವರಾಜ್‌ಕುಮಾರ್‌ ಕೂಡ ಭಾಗಿಯಾಗಿದ್ದರು. 

47

ಆನಂತರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸದಾಶಿವ ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀ,ಡಿ ಅಶ್ವಿನಿ ಅವರೊಂದಿಗೆ ಮಾತನಾಡಿದ್ದಾರೆ. 

57

ಎರಡೂ ಕುಟುಂಬಸ್ಥರನ್ನು ಮಾತನಾಡಿಸಿದ ನಂತರ ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅಲ್ಲು ಫೋಟೋ ಹಂಚಿಕೊಂಡಿದ್ದಾರೆ. 

67

ಅಲ್ಲು ಅರ್ಜುನ್ ಆಗಮಿಸುತ್ತಿರುವ ವಿಚಾರ ಕೇಳಿ ಪುನೀತ್‌ ನಿವಾಸದ ಬಳಿ ಹಲವು ಅಭಿಮಾನಿಗಳು ಆಗಮಿಸಿದ್ದರು. ಹೀಗಾಗಿ ಪೊಲೀಸರು ಕೂಡ ಆಗಮಿಸಿದ್ದರು. 

77

'My Humble respects To Puneeth Garu . My respect to Rajkumar garu’s family , friends , well wishers & fans' ಎಂದು ಅಲ್ಲು ಬರೆದುಕೊಂಡಿದ್ದಾರೆ.

Read more Photos on
click me!

Recommended Stories