ಕೊರೋನಾ ವಾರಿಯರ್ ಆದ ನಿರ್ಮಾಪಕರ ಪುತ್ರಿ; 'ಸೌಂದರ್ಯ'ವತಿ ಹೇಗಿದ್ದಾಳೆ ನೋಡಿ!

First Published | Aug 6, 2020, 4:06 PM IST

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಜಗದೀಶ್‌ ಪುತ್ರಿ ಕಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್ ವಾರಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಫೀವರ್ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿರುವ ನಿರ್ಮಾಪಕ ಜಗದೀಶ್ ಪುತ್ರಿ ಸೌಂದರ್ಯ.
ಕಿಮ್ಸ್ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿರುವ ಸೌಂದರ್ಯ.
Tap to resize

ಕಳೆದ ಒಂದು ವಾರದಿಂದ ಫೀವರ್ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
'ಕೊರೋನಾ ಮಧ್ಯೆ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆಯಾಗುತ್ತಾದೆ. ಸಹಜವಾಗಿ ಅಪ್ಪ ಅಮ್ಮ ಭಯ ಪಡ್ತಿದ್ದಾರೆ ಯಾಕಂದ್ರೆ ಮನೆಯಲ್ಲಿ ಅಜ್ಜಿ ಇದ್ದಾರೆ ನನಗೂ ಅವ್ರನ್ನ ನೆನಸಿಕೊಂಡ್ರೆ ಭಯ ಆಗತ್ತೆ' ಎಂದಿದ್ದಾರೆ.
ನಾವೆಲ್ಲರೂ 'ಎರಡು ಶಿಫ್ಟ್‌ನಲ್ಲಿ ಕೆಲಸ ಮಾಡ್ತಿದ್ದೀವಿ ಸತತ ನಾಲ್ಕು ಗಂಟೆ ಕಾಲ ಪಿಪಿ ಕಿಟ್ ಧರಿಸಿರಬೇಕು. ಇದರಿಂದ ಉಸಿರಾಡೋಕೂ ಕಷ್ಟ ಆಗುತ್ತೆ , ನೀರು ಕುಡಿಯುವಂತಿಲ್ಲ , ಬ್ರೇಕ್ ಕೂಡ ತೆಗೆದುಕೊಳ್ಳಲು ಆಗಲ್ಲ' ಎಂದು ಕೊರೋನಾ ವಾರಿಯರ್ಸ್ ಗಳಿಗೆ ಆಗುವ ಕಷ್ಟವನ್ನು ಹೇಳಿಕೊಂಡಿದ್ದಾರೆ.
ಆದ್ರೆ ಇದು ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡಿರೋ ಕೆಲಸ ಹಾಗಾಗಿ ಕಷ್ಟ ಪಟ್ಟು ಮಾಡ್ತಿದ್ದೀನಿ ಎಂದ ಸೌಂದರ್ಯ.
'ಆರಂಭದ ದಿನಗಳಲ್ಲಿ ಮನೆಯಲ್ಲಿ ತುಂಬಾ ಭಯ ಪಟ್ಟರು. ಕೋರೋನಾ ಸೋಂಕಿತರ ಸೇವೆ ಮಾಡಲು ಕಳುಹಿಸುವುದಿಲ್ಲ ಅಂತ ಹೇಳಿದ್ರು ಹಾಗೂ ಈ ಬಗ್ಗೆ ಕಾಲೇಜ್ ಅವ್ರ ಬಳಿ ಮಾತಾಡೋಕು ರೆಡಿ ಇದ್ರು ಆದ್ರೆ ನನಗೆ ಅವ್ರರನ್ನು ನನ್ನ ಫ್ರೊಫೆಷ್ನಲ್ ವಿಷಯಗಳಿಗೆ ಇನ್ವಾಲ್ ಮಾಡಿಕೊಳ್ಳೋಕೆ ಇಷ್ಟ ಇರಲಿಲ್ಲ' .
'ಹಾಗಾಗಿ ನಾನೇ ಅವ್ರಿಗೆ ಕನ್ವೀನ್ಸ್ ಮಾಡಿದೆ. ಇದೇ ಕಾರಣದಿಂದ ನಾನು ಮನೆಗೂ ಹೋಗದೆ ಇಲ್ಲೇ ದುಡಿಯುತ್ತಿದ್ದೇನೆ .
'ಹಬ್ಬ ಅಥವಾ ಬೇರೆ ಏನಾದ್ರು ಸ್ಪೆಷಲ್ ಪ್ರೋಗ್ರಾಂ ಇದ್ರೆ ಮಾತ್ರ ಮನೆಗೆ ಹೋಗ್ತಿನಿ ಸದ್ಯ ಸದಾಶಿವನಗರದ ಪ್ಲಾಟ್ ನಲ್ಲಿ ಉಳಿದುಕೊಂಡಿದ್ದೇನೆ'
'ಫೋಟೋ ಶೂಟ್ ಮಾಡಿಸಿದಾಗ ಸಿನಿಮಾಗೆ ಬರ್ತಾರೆ ಅಂತ ಸುದ್ದಿ ಆಗಿತ್ತು ಆದ್ರೆ ನನಗೆ ಸಿನಿಮಾ ಇಷ್ಟ ಇಲ್ಲ. ಸಿನಿಮಾ ಏನಿದ್ರು ಅಪ್ಪ ಮತ್ತು ತಮ್ಮನಿಗೆ ಅಷ್ಟೇ .ನನಗೆ ಡಾಕ್ಟರ್ ಆಗಿ ಜನರ ಸೇವೆ ಮಾಡಬೇಕು ಅನ್ನೋ ಆಸೆ ಇದೆ.ಅದನ್ನೇ ಮಾಡುತ್ತೇನೆ' ಎಂದು ಸೌಂದರ್ಯ ಮಾತನಾಡಿದ್ದಾರೆ.

Latest Videos

click me!