ಸದ್ಯ ‘ರೈಡರ್’ (Rider) ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ನಟ ನಿಖಿಲ್ ಕುಮಾರ್ (Nikhil Kumaraswamy) ತಮ್ಮ ಐದನೇ ಚಿತ್ರದ ಶೂಟಿಂಗ್‌ಗೆ ಚಾಲನೆ ಕೊಟ್ದಿದ್ದಾರೆ.
ಮಂಜು ಅಥರ್ವ (Manju Atharva) ನಿರ್ದೇಶನದ ಚಿತ್ರ ಇದಾಗಿದೆ. ಸದ್ಯದ ಮಾಹಿತಿ ಪ್ರಕಾರ ಚಿತ್ರಕ್ಕೆ ‘ಯದುವೀರ್’ ಅಥವಾ ‘ಯುವರಾಜ’ ಎನ್ನುವ ಹೆಸರುಗಳ ಪೈಕಿ ಯಾವುದಾದರೂ ಒಂದು ಹೆಸರನ್ನು ಫೈನಲ್ ಮಾಡುವ ಸಾಧ್ಯತೆಗಳು ಇವೆ.
ಸುಪ್ರಿತ್ (Suprit) ಹಾಗೂ ನಿಶಾ ವೆಂಕಟ್ ಕೋನಂಕಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಂಜು ಅಥರ್ವ, ತಮಿಳಿನ ಕದಿರನ್ ಜತೆ ಕೆಲಸ ಮಾಡಿದ್ದಾರೆ.
ಯಶ್ (Yash) ನಟನೆಯ ‘ಮಾಸ್ಟರ್‌ಪೀಸ್’ (Mster Piece) ಹಾಗೂ ಶಿವರಾಜ್ ಕುಮಾರ್ (Shivarajkumar) ಮತ್ತು ಶ್ರೀಮುರಳಿ (Sri Murali) ಅಭಿನಯದ ‘ಮಫ್ತಿ’ (Mafthi) ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ.
ನೆನಪಿರಲಿ ಪ್ರೇಮ್ (Prem Nenapirali) ಅವರ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ಗೆ (Premama Poojyam) ಸಹ ನಿರ್ದೇಶಕರಾಗಿದ್ದರು.
ಈ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್ ಶುರುವಾಗಿದೆ. ಅಜನೀಶ್ ಲೋಕನಾಥ್ (Ajaneesh Loknath) ಸಂಗೀತ ನೀಡುತ್ತಿದ್ದು, ನವೀನ್ ಕ್ಯಾಮೆರಾ (Camera Man Naveen) ಹಿಡಿದಿದ್ದಾರೆ.