ಸೀಮಂತದ ಫೋಟೋ ಶೇರ್ ಮಾಡಿ ಸಂಭ್ರಮ ಹಂಚಿಕೊಂಡ 'ಕನಸಿನ ರಾಣಿ' ಮಾಲಾಶ್ರಿ!

First Published | Aug 8, 2020, 11:32 AM IST

ಸ್ಯಾಂಡಲ್‌ವುಡ್‌ 'ರಾಣಿ ಮಹಾರಾಣಿ' ಮಾಲಾಶ್ರೀ ಇತ್ತೀಚಿಗೆ ತಮ್ಮ ಮೊದಲ ಸೀಮಂತದ ಫೋಟೋವನ್ನು ಅಭಿಮಾನಿಗಳ ಜೊತೆ #Throwback ಎಂದು ಶೇರ್ ಮಾಡಿಕೊಂಡಿದ್ದಾರೆ. ಹೇಗಿತ್ತು ಆ ಮಧುರ ಕ್ಷಣ? ಇಲ್ಲಿದೆ ನೋಡಿ...

ಮೂಲತಃ ತಮಿಳು ನಾಡಿನವರಾದ ಮಾಲಾಶ್ರೀ ಕನ್ನಡ ಚಿತ್ರರಂಗದ 'ರಾಣಿ' ಎಂದು ಗುರುತಿಸಿಕೊಂಡಿದ್ದಾರೆ.
'ಕನಸಿನ ರಾಣಿ' ಮಾಲಾಶ್ರೀ ಅಭಿನಯಿಸಿದ ಸಿನಿಮಾಗಳೆಲ್ಲಾ ಸೂಪರ್‌ ಹಿಟ್‌ ಆಗುತ್ತಿದ್ದವು.
Tap to resize

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ Active ಆಗಿರುವ ಮಾಲಾಶ್ರೀ ಹಳೆ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ತಮ್ಮ ಮೊದಲ ಮಗು ಸೀಮಂತವನ್ನು ಅಪ್ಲೋಡ್ ಮಾಡಿದ್ದಾರೆ.
2010ರಲ್ಲಿ ಪುತ್ರಿ ಅನನ್ಯಾ ಜನಿಸಿದ್ದರು.
ಪತಿ ರಾಮು ಶಾಸ್ತ್ರಗಳನ್ನು ಮಾಡುತ್ತಿರುವುದು ಈ ಫೋಟೋದಲ್ಲಿ ನೋಡಬಹುದು.
ಈ ಫೋಟೋಗಳನ್ನು ನೋಡಿ ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ.
'ರಾಮಚಾರಿ' ಚಿತ್ರದ ನಂದಿನಿ ನೋಡಿದಂತೆ ಆಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

Latest Videos

click me!