U Turn 2 ಟ್ರೈಲರ್ ರಿಲೀಸ್; ಪಿಜ್ಜಾ ಡೆಲವರಿ ಮಾಡುವ ಹುಡುಗನ ಹಾರರ್‌ ಕತೆ

Published : Dec 12, 2022, 12:24 PM IST

ವೈರಲ್ ಆಗುತ್ತಿದೆ ಯೂ ಟರ್ನ್‌ 2 ಚಿತ್ರದ ಟ್ರೇಲರ್‌. ಎರಡನೇ ಭಾಗದ ಕಥೆ ಬಗ್ಗೆ ಸಿನಿ ರಸಿಕರಿಗೆ ಹೆಚ್ಚಿಗೆ ಕ್ಯೂರಿಯಾಸಿಟಿ... ಫೋಟೋಕೃಪೆ: ಮನು 

PREV
15
U Turn 2 ಟ್ರೈಲರ್ ರಿಲೀಸ್; ಪಿಜ್ಜಾ ಡೆಲವರಿ ಮಾಡುವ ಹುಡುಗನ ಹಾರರ್‌ ಕತೆ

ಪವನ್‌ ಕುಮಾರ್‌ ನಿರ್ದೇಶನದಲ್ಲಿ ‘ಯೂ ಟರ್ನ್‌’ ಚಿತ್ರ ಬಂದು ದೊಡ್ಡ ಮಟ್ಟದಲ್ಲಿ ಗೆದ್ದಿದ್ದು ನೋಡಿದ್ದೇವೆ. ಈಗ ಅದೇ ಹೆಸರಿನಲ್ಲಿ ಪಾರ್ಚ್‌ 2 ಬರುತ್ತಿದೆ. ಹಾಗಂತ ಇದು ಪವನ್‌ ಕುಮಾರ್‌ ‘ಯೂ ಟರ್ನ್‌’ ಚಿತ್ರದ ಮುಂದುವರಿದ ಭಾಗವಲ್ಲ.

25

 ಇದು ಪಿಜ್ಜಾ ಹುಡುಗನ ಕತೆ. ಇತ್ತೀಚೆಗೆ ಟ್ರೇಲರ್‌ ಬಿಡುಗಡೆ ಮಾಡಿಕೊಂಡ ‘ಯೂ ಟರ್ನ್‌ 2’ ಚಿತ್ರವು ಹಾರರ್‌, ಕಾಮಿಡಿ ಡ್ರಾಮಾ ಕತೆಯನ್ನು ಒಳಗೊಂಡಿದೆ. ಶಾಸಕ ಸತೀಶ್‌ ರೆಡ್ಡಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಲಕ್ಷ್ಮೀ ನಾರಾಯಣ, ನಟ ಮಯೂರ್‌ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. 

35

ಆನಂದ್‌ ಸಂಪಗಿ, ಚಂದ್ರು ಈ ಚಿತ್ರದ ನಿರ್ಮಾಪಕರು. ಚಂದು ಓಬಯ್ಯ ಅವರು ನಿರ್ದೇಶನ ಮಾಡುವ ಜತೆಗೆ ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ‘ತಿಥಿ’ ಚಿತ್ರದ ಕಾವೇರಿ ಪಾತ್ರಧಾರಿ ಪೂಜಾ, ಸ್ನೇಹಾ ಭಟ್‌ ನಾಯಕಿಯರು.ಉಳಿದಂತೆ ಮಂಜು ಪಾವಗಡ, ಚಿಲ್ಲರ್‌ ಮಂಜು, ಡಿಂಗ್ರಿ ನಾಗರಾಜ್‌ ಸೇರಿದಂತೆ ಹಲವರು ನಟಿಸಿದ್ದಾರೆ.

45

ನಿರ್ದೇಶಕ ಚಂದು ಓಬಯ್ಯ ಮಾತನಾಡಿ, ‘ಪಿಜ್ಜಾ ಡೆಲವರಿ ಮಾಡುವ ಹುಡುಗನ ಸುತ್ತ ಹುಟ್ಟಿಕೊಳ್ಳುವ ಕತೆ ಈ ಚಿತ್ರದಲ್ಲಿದೆ. ನಾನು ಒಮ್ಮೆ ಚೆನ್ನೈಗೆ ಹೋದಾಗ ಅಲ್ಲಿ ನನಗೆ ಆದ ಅನುಭವವನ್ನೇ ಆಧಾರವಾಗಿಟ್ಟುಕೊಂಡು ಈ ಕತೆ ಮಾಡಿದ್ದೇನೆ.

55

 ಹಾರರ್‌ ಜತೆಗೆ ಸಾಮಾಜಿ ಸಂದೇಶ ಕೂಡ ಚಿತ್ರದಲ್ಲಿದೆ. ಹೊನ್ನಾವರ, ಬೆಂಗಳೂರು ಬಿಡದಿಯಲ್ಲಿ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ’ ಎಂದರು. ಅಂದಹಾಗೆ ನಿರ್ಮಾಪಕ ಆನಂದ್‌ ಸಂಪಂಗಿ ಅವರೇ ಇಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories