ನಿಮ್ಮಂತೆ ನಿಮ್ಮ ಫ್ಯಾಮಿಲಿಯಲ್ಲೂ ಯಾರೂ ಇಲ್ಲ; ಅಪ್ಪು ನೆನೆದು ದೊಡ್ಡಮನೆ ಸೊಸೆ ಶ್ರೀದೇವಿ ಭಾವುಕ

First Published | Oct 29, 2024, 11:37 AM IST

 ಅಪ್ಪು ಜೊತೆಗಿನ ನೆನಪುಗಳನ್ನು ಹಂಚಿಕೊಂಡ ಶ್ರೀದೇವಿ ಬೈರಪ್ಪ....ದೊಡ್ಡಮನೆ ಸೊಸೆಯ ಭಾವುಕ ಪೋಸ್ಟ್ ವೈರಲ್.......

ಪವರ್ ಸ್ಟಾರ್, ಡಾ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಮೂರು ವರ್ಷ. ಜೊತೆಗಿರುವ ಜೀವನ ಎಂದಿಗೂ ಜೀವಂತ ಎಂದು ಪ್ರತಿಯೊಬ್ಬ ಅಭಿಮಾನಿ ಪೋಸ್ಟ್‌ ಹಾಕುತ್ತಿದ್ದಾರೆ. 

ಯುವ ರಾಜ್‌ಕುಮಾರ್ ಪತ್ನಿ ಆಗಿದ್ದ ಶ್ರೀದೇವಿ ಬೈರಪ್ಪ ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ರಾಜ್‌ಕುಮಾರ್‌ ಜೊತೆಗಿರುವ ನೆನಪುಗಳನ್ನು ಹಂಚಿಕೊಂಡಿದ್ದಾರೆ. 

Tap to resize

'ನಿಮ್ಮಂತೆ ಯಾರೂ ಇಲ್ಲ ಅಪ್ಪು. ನಿಮ್ಮ ಕುಟುಂಬದಲ್ಲೂ ಇಲ್ಲ..ಈ ಪ್ರಪಂಚದಲ್ಲೂ ಇಲ್ಲ. ನೀವೊಬ್ಬರೆ. ಅಂದು..ಇಂದು...ಎಂದೆಂದಿಗೂ. ನೀವು ಒಳ್ಳೆಯ ಜಾಗದಲ್ಲಿ ಇದ್ದೀರಿ ಅಂದುಕೊಂಡಿದ್ದೀನಿ' ಎಂದು ಶ್ರೀದೇವಿ ಬೈರಪ್ಪ ಬರೆದುಕೊಂಡಿದ್ದಾರೆ.

'ನಿಮ್ಮವರ ಪರವಾಗಿ ನೀವು ಸದಾ ನಿಲ್ಲುತ್ತಿದ್ದಿರಿ. ಪ್ರತಿ ಕ್ಷಣವೂ' ಎಂದು ಬರೆದು ಅಪ್ಪು ನಗು ಮುಖದ ಫೋಟೋ ಹಾಗೂ ಸಮುದ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ.

'ನನ್ನ ಸ್ಟ್ರಿಟ್‌ ಪೇರೆಂಟ್ಸ್‌ಗೆ ಗೊತ್ತಿರಲಿಲ್ಲ ನಾನು ಸ್ಕೂಲ್‌ ಮತ್ತು ಕಾಲೇಜ್‌ನ ಬಂಕ್ ಮಾಡಿ ನನ್ನ ಸ್ನೇಹಿತೆಯರ ಜೊತೆ ನಿಮ್ಮ ಸಿನಿಮಾ ನೋಡಲು ಹೋಗುತ್ತಿದ್ದೆ ಎಂದು. ಚಿಕ್ಕ ಹುಡುಗಿಯಿಂದಲೂ ನಿಮ್ಮ ಫ್ಯಾನ್'ಎಂದು ಶ್ರೀದೇವಿ ಹೇಳಿದ್ದಾರೆ.

ಅಪ್ಪು ನಟನೆಯ ಗಂಧದ ಗುಡಿ ಸಿನಿಮಾವ ಪ್ರೋಮೋ ರಿವೀಲ್ ಮಾಡುವ ಸಂದರ್ಭ ನೆನಪಿಸಿಕೊಂಡಿದ್ದಾರೆ. 'ಅಪ್ಪು ನಟನೆಯ ಕೊನೆಯ ಸಿನಿಮಾದ ರಿಲೀಸ್‌ಗೆಂದು ಕೆಲಸ ಮಾಡುತ್ತಿರುವಾಗ ತಂಡದಿಂ ಯಾರೂ ಹೇಳಿದರು ರೀಲ್ಸ್‌ನ ಅಪ್ಪು ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಬೇಕು ಎಂದು'

'ಆರಂಭದಲ್ಲಿ ಅಪ್ಪು ಅಕೌಂಟ್‌ನಿಂದ ಪೋಸ್ಟ್ ಮಾಡುವುದರ ಬಗ್ಗೆ ಗೊಂದಲ ಇತ್ತು ಆನಂತರ ಪೋಸ್ಟ್‌ ಮಾಡಿದೆವು. ಆಗ ನಾವೆಲ್ಲರೂ ಕಣ್ಣೀರಿಟ್ಟಿದ್ದೀವಿ. ನೀವಿಲ್ಲದೆ ಚಿತ್ರಮಂದಿರಗಳು ಹಿಂದಿನಂತೆ ಇರುವುದಿಲ್ಲ' ಎಂದಿದ್ದಾರೆ ಶ್ರೀದೇವಿ. 

Latest Videos

click me!