ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತೀನಿ; ತಂದೆ ಫೋಟೋ ಹಂಚಿಕೊಂಡ ಧ್ರುತಿ ಪುನೀತ್ ರಾಜ್‌ಕುಮಾರ್

First Published | Oct 29, 2024, 2:30 PM IST

ತಂದೆ ಜೊತೆಗಿರುವ ಫೋಟೋವನ್ನು ಹಂಚಿಕೊಂಡ ಧ್ರುತಿ ರಾಜ್‌ಕುಮಾರ್. ನಿಮ್ಮಲ್ಲಿ ಅಪ್ಪುನ ನೋಡುತ್ತೀವಿ ಎಂದ ಅಭಿಮಾನಿಗಳು.

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಮೂರು ವರ್ಷ. ಅಪ್ಪು ಸಮಾಧಿ ಪೂಜೆಯಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಭಾಗಿಯಾಗಿದ್ದರು.

ಪತ್ನಿ ಅಶ್ವಿನಿ, ಕಿರಿಯ ಪುತ್ರಿ ವಂದಿತಾ ಸೇರಿದಂತೆ ಕುಟುಂಬಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು. ಹಿರಿಮಗಳು ಧ್ರುತಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 

Tap to resize

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಧ್ರುವ ರಾಜ್‌ಕುಮಾರ್ ತಂದೆ ಜೊತೆಗಿನ ಹಳೆ ಫೋಟೋವನ್ನು ಅಪ್ಲೋಡ್ ಮಾಡಿ 'ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತೀನಿ' ಎಂದು ಬರೆದುಕೊಂಡಿದ್ದಾರೆ.

ಸುಮಾರು 54 ಸಾವಿರ ಫಾಲೋವರ್ಸ್ ಹೊಂದಿರುವ ಧ್ರುತಿ ರಾಜ್‌ಕುಮಾರ್ ನೋಡಲು ಸೇಮ್ ಟು ಸೇಮ್ ಅಪ್ಪು ಎಂದು ಆಗಾಗ ಅಭಿಮಾನಿಗಳು ಕಾಮೆಂಟ್ ಮಾಡುತ್ತಾರೆ. 

ಅಪ್ಪು ಅಗಲಿದಾಗ ಧ್ರುತಿಯನ್ನು ವಿದೇಶದಿಂದ ಕರೆಸಿಕೊಳ್ಳಲು ಇಡೀ ಕರ್ನಾಟಕವೇ ಕೈ ಜೋಡಿಸಿತ್ತು. ಇಂದಿಗೂ ಎಂದೆಂದಿಗೂ ಅಪ್ಪು ಫ್ಯಾಮಿಲಿ ಜೊತೆ ನಾವಿದ್ದೀವಿ ಅಂತಾರೆ ಫ್ಯಾನ್ಸ್.

ಅಪ್ಪು ಪುತ್ರಿಯರು ಸಿನಿಮಾಗಳಲ್ಲಿ ನಟಿಸುವುದಿಲ್ಲ ಹೀಗಾಗಿ ಅಜ್ಜಿ ಪಾರ್ವತಮ್ಮ ರಾಜ್‌ಕುಮಾರ್ ಅಥವಾ ತಾಯಿ ಅಶ್ವಿನಿ ಹಾದಿಯಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಎಂದು ಜನರಿಂದ ಒತ್ತಾಯ ಶುರುವಾಗಿದೆ. 

Latest Videos

click me!