ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಪವನ್ ದಂಪತಿ ಲಿಟಲ್ ಸ್ಟಾರ್ ನಿರೀಕ್ಷೆಯಲ್ಲಿದ್ದಾರೆ.
ಉತ್ತರ ಕರ್ನಾಟಕ ಶೈಲಿಯಲ್ಲಿ ಸರಳ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.
ವಿಧವಿಧವಾದ ತಿನಿಸುಗಳನ್ನು ಗರ್ಭಿಣಿ ಬಯಕೆ ಈಡೇರಿಸಲು ಇಡಲಾಗಿದೆ.
ಹಾಗೂ ಸಂಪ್ರದಾಯಿಕ ಉಡುಪಿನಲ್ಲಿ ಪವನ್ ಹಾಗೂ ಅಪೇಕ್ಷಾ ಕಂಗೊಳಿಸುತ್ತಿದ್ದರು.
ತಮಗೆ ಇಷ್ಟದ ತಿನಿಸುಗಳನ್ನು ಇಟ್ಟು ಬಯಕೆ ಈಡೇರಿಸುವ ಶಾಸ್ತ್ರವೂ ನೆರವೇರಿದೆ.
ಭಾನುವಾರ (ಅಕ್ಟೋಬರ್ 11)ರಂದು ಮತ್ತೊಂದು ಅದ್ಧೂರಿ ಸೀಮಂತ ಕಾರ್ಯಕ್ರಮ ಮಾಡಲಾಗುತ್ತದೆ.
ಕಂದಮ್ಮ ಹಾಗೂ ಪತ್ನಿಗೆ ಬರೆದಿರುವ ಹಾಡನ್ನು ಅಂದೇ ರಿಲೀಸ್ ಮಾಡಲಿದ್ದಾರೆ ಪವನ್.
ಫೋಟೋ ಶೋಟ್ ಮಾಡಿಸುವ ಮೂಲಕ ಹೊಸ ಅಥಿತಿಯನ್ನು ಬರ ಮಾಡಿಕೊಳ್ಳುವ ವಿಚಾರವನ್ನು ರಿವೀಲ್ ಮಾಡಿದ್ದರು ಕನ್ನಡದ ಈ ನಿರ್ದೇಶಕ.
2018ರಲ್ಲಿ ವೈವಾಹಿರ ಜೀವನಕ್ಕೆ ಕಾಲಿಟ್ಟ ಪವನ್ ಹಾಗೂ ಅಪೇಕ್ಷಾ.
ಅಪೇಕ್ಷಾ ಹಲವಾರು ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
Suvarna News