ಅದ್ಧೂರಿಯಾಗಿ ಮಗಳ ನಾಮಕರಣ ಮಾಡಿದ ಪವನ್ ಒಡೆಯಾರ್; ಯಾದ್ವಿ ಹೆಸರಿನ ಹಿಂದೆ ಇಷ್ಟೊಂದು ಅರ್ಥ?

First Published | Sep 29, 2023, 1:44 PM IST

 ನಟಿ ಅಪೇಕ್ಷಾ ಪುರೋಹಿತ್ ಮತ್ತು ಪವನ್ ಒಡೆಯಾರ್ ದಂಪತಿ ಅದ್ಧೂರಿಯಾಗಿ ಮಗಳ ನಾಮಕರಣ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ....

 ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಪವನ್ ಒಡೆಯರ್ ಮತ್ತು ಪತ್ನಿ ನಟಿ ಅಪೇಕ್ಷಾ ಪುರೋಹಿತ್ ತಮ್ಮ ಮಗಳ ನಾಮಕರಣ ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ ಪವನ್ (Pavan Wadeyar) ಮತ್ತು ಅಪೇಕ್ಷಾ (Apeksha) ದಂಪತಿ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡರು. 

Tap to resize

ಈಗ ಮಗಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಶಾಸ್ತ್ರ ಸಂಪ್ರದಾಯದ ಪ್ರಕಾರ ನಾಮಕರಣ ಮಾಡಿ ವಿಭಿನ್ನ  ಹೆಸರಿಟ್ಟಿದ್ದಾರೆ.

ಮಗಳಿಗೆ 'ಯಾದ್ವಿ' (Yadvi Pawan Wadeyar) ಎಂದು ಪವನ್ ನಾಮಕರಣ ಮಾಡಿದ್ದಾರೆ. ಯಾದ್ವಿ ಅಂದ್ರೆ ದುರ್ಗಾ ಮತ್ತು ರಾಣಿ ಎಂದು ಅರ್ಥ.

ಯಾದ್ವಿ ಎಂದು ಹೆಸರಿಟ್ಟುಕೊಳ್ಳುವವರಿಗೆ 4 ಅದೃಷ್ಠದ ಸಂಖ್ಯೆ. ವ್ಯಕ್ತಿತ್ವದಲ್ಲಿ ತುಂಬಾ ನೇರ ನುಡಿಯವರಾಗಿರುತ್ತಾರೆ ಹಾಗೂ ಹೊಂದಿಕೊಳ್ಳುತ್ತಾರೆ.

 'ನಮ್ಮ ಕುಟುಂಬದ ಪ್ರೀತಿ, ನಮ್ಮ ರಾಣಿ ಮಗಳು, ಶೌರ್ಯನ ಸಹೋದರಿ ...ಆಕೆಯನ್ನು ಯಾದ್ವಿ ಒಡೆಯಾರ್' ಎಂದು ನಾವು ನಾಮಕರಣ ಮಾಡಿದ್ದೀವಿ. 

Latest Videos

click me!