ಕಾವೇರಿ ಹೋರಾಟ ಒಂದಾದ ಸ್ಯಾಂಡಲ್‌ವುಡ್‌, ದೊಡ್ಡ ಸ್ಟಾರ್ಸ್ ಮಾತ್ರ ಯಾಕೆ ಬಂದಿಲ್ಲ!

ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಒಂದಾಗಿದೆ. ಫಿಲ್ಮ್‌ ಛೇಂಬರ್‌ ನಲ್ಲಿ ಕನ್ನಡದ ಎಲ್ಲಾ ಕಲಾವಿದರು ಸೇರಿ ಕಾವೇರಿ ನೀರಿಗಾಗಿ ಹೋರಾಟ ಮಾಡಿದ್ದಾರೆ. ಚಿನ್ನೇ ಗೌಡ , ಲಹರಿವೇಲು, ಹಂಸಲೇಖ, ನಟರಾದ ಶಿವರಾಜ್‌ ಕುಮಾರ್, ಉಪೇಂದ್ರ, ವಿಜಯರಾಘವೇಂದ್ರ, ಶ್ರೀ ಮುರುಳಿ, ಧ್ರುವಾ ಸರ್ಜಾ, ವಿನೋದ್ ಪ್ರಭಾಕರ್‌, ಸೃಜನ್‌ ಲೋಕೇಶ್, ದುನಿಯಾ ವಿಜಯ್, ವಸಿಷ್ಠ ಸಿಂಹ, ದರ್ಶನ್‌ . ನಟಿಯರಾದ ಉಮಾಶ್ರೀ, ಪದ್ಮಾ ವಾಸಂತಿ, ಗಿರಿಜಾ ಲೋಕೇಶ್, ಶ್ರುತಿ, ಪೂಜಾ ಗಾಂಧಿ, ಅನುಶ್ರೀ  ಸೇರಿದಂತೆ ಹಲವಾರು  ಕಲಾವಿದರು ಭಾಗವಹಿಸಿದ್ದಾರೆ. 

ಫೋಟೋ ಕೃಪೆ: ವೀರಮಣಿ, ಸುರೇಶ್, ರವಿ - ಕನ್ನಡ ಪ್ರಭ
 

ಸಮಸ್ಯೆಯನ್ನು ಹೇಗೆ ಪರಿಹಾರ ಮಾಡಬೇಕು ಎಂದು ಯೋಚಿಸಬೇಕು. ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ. ಎರಡೂ ಸರಕಾರಗಳು ಕೂತು ಮಾತನಾಡಿ, ಇನ್ನು ಒಂದು ವಾರದಲ್ಲಿ ಮಳೆ ಬಂದರೆ ಈ ಸಮಸ್ಯೆಗಳು ಕ್ಲೂಸ್ ಆದ್ದರಿಂದ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ. ಯಾವಾತ್ತೂ ಕಲಾವಿದರು ಇಂತಹ ವಿಚಾರದಲ್ಲಿ ಸದಾ ಜೊತೆಗಿದ್ದೇವೆ ಎಂದು ಹೇಳಿದ್ದಾರೆ.

ಪಕ್ಷಬೇದ ಮರೆತು ಕನ್ನಡ ಚಿತ್ರರಂಗ ಒಂದಾಗಿ ಒಗ್ಗಟ್ಟು ಪ್ರದರ್ಶಿಸಿತು. ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ನಟಿ ಉಮಾಶ್ರೀ ಮತ್ತು ಶ್ರುತಿ ಜೊತೆಯಾಗಿಯೇ ಕಾಣಿಸಿಕೊಂಡರು.


ಲಹರಿ ಆಡಿಯೋ ಮುಖ್ಯಸ್ಥ ಲಹರಿ ವೇಲು ಮತ್ತಿತರರು ಕಾವೇರಿ ಹೋರಾಟದಲ್ಲಿ ಭಾಗವಹಿಸಿದರು. ಕಾವೇರಿ ಬಿಡಲಾರೆವು ಕನ್ನಡ ಮರೆಯಲಾರೆವು ಎಂಬ ಘೋಷವಾಕ್ಯದ ಫಲಕಗಳು ಕಂಡುಬಂದವು.

ಹಿರಿಯ ನಟರಾದ ಶ್ರೀನಾಥ್, ಶ್ರೀನಿವಾಸ ಮೂರ್ತಿ, ಪ್ರಮಿಳಾ ಜೋಶಾಯ್, ಉಮಾಶ್ರೀ , ಶ್ರುತಿ ಸೇರಿದಂತೆ ಹಲವು ಮಂದಿ ಕಾವೇರಿ ಹೋರಾಟದಲ್ಲಿ ಭಾಗವಹಿಸಿದರು.

ಹಿರಿಯ ನಟ ಸುಂದರ್‌ ರಾಜ್‌, ನವೀನ್ ಕೃಷ್ಣ, ಅನಿರುದ್ಧ್ , ಬಿರಾದಾರ್ ಸೇರಿ ಹಲವರು ಕಾವೇರಿ ನೀರಿಗಾಗಿ ಪ್ರತಿಭಟನೆಯ ಭಾಗವಾಗಿದ್ದರು. 

ನಟಿ ರೂಪಿಕಾ ಸೇರಿದಂತೆ ಹಲವು ಕಿರುತೆರೆ, ಹಿರಿತೆರೆ ನಟಿಯರೂ ಕೂಡ ಕಾವೇರಿ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬೆಂಬಲ ಸೂಚಿಸಿದರು. 

ಕೇವಲ ಸ್ಯಾಂಡಲ್‌ವುಡ್‌ ನ ನಟ ನಟಿಯರು ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಪೋಷಕ ಕಲಾವಿದರು, ತಂತ್ರಜ್ಞರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದರು.

ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ನಟಿ ಪೂಜಾಗಾಂಧಿ ಕೂಡ ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರತಿಭಟನೆಯಲ್ಲಿ ಭಾಗಹಿಸಿದ್ದರು. ಹಿರಿಯ ನಟಿ ಪದ್ಮಾ ವಾಸಂತಿ ಅವರನ್ನು ಚಿತ್ರದಲ್ಲಿ ಕಾಣಬಹುದು.

Latest Videos

click me!