ದರ್ಶನ್‌ ಜೊತೆ ಹೆಚ್ಚಾಗಿ ಫೋಟೋ ಹಾಕಿರುವ ಡಾ.ರಾಜ್‌ ಕುಟುಂಬದ ಧ್ರುವನ್; ಯಾರು ಗೊತ್ತಾ?

First Published | Oct 29, 2020, 2:35 PM IST

ಡಾ. ಪಾರ್ವತಮ್ಮ ರಾಜ್‌ಕುಮಾರ್ ತಮ್ಮನ ಮಗ ಧ್ರುವನ್‌ ಹೀರೋ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆ ಅತಿ ಹೆಚ್ಚು ಫೋಟೋ ಶೇರ್ ಮಾಡಿ ಕೊಂಡಿರುವ ಈ ನಟನ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ.
 

ಪಾರ್ವತಮ್ಮ ರಾಜ್‌ಕುಮಾರ್‌ ಕಿರಿಯ ಸಹೋದರ ಶ್ರೀನಿವಾಸ್ ರಾಜು ಅವರ ಪುತ್ರ ಧ್ರುವನ್.
'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ.
Tap to resize

ಧ್ರುವನ್‌ಗೆ ನಾಯಕಿಯಾಗಿದ್ದಾರೆ ಅದಿತಿ ಪ್ರಭುದೇವ್.
ಇತ್ತೀಚಿಗೆ ಆರ್‌ಆರ್‌ ನಗರದಲ್ಲಿ ನಡೆದ ಚಿತ್ರ ಮುಹೂರ್ತದಲ್ಲಿ ನಟ ದರ್ಶನ್ ಭಾಗಿಯಾಗಿದ್ದರು.
ಧ್ರುವನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೆಚ್ಚಾಗಿ ದರ್ಶನ್‌ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್‌, ಧ್ರುವನ್‌ಗೆ ರೋಲ್ ಮಾಡಲ್ ಇದ್ದಂತೆ.
ನವೆಂಬರ್ ಅಂತ್ಯದಲ್ಲಿ ಧ್ರುವನ್ ಚಿತ್ರೀಕರಣ ಪ್ರಾರಂಭಿಸುತ್ತಾರೆ ಎನ್ನಲಾಗಿದೆ.
ದಚ್ಚು ಸಾಥ್‌ ಕೊಟ್ಟ ಮೇಲೆ ಧ್ರುವನ್ ಪಕ್ಕಾ ಸ್ಟಾರ್ ನಟ ಆಗುವುದರಲ್ಲಿ ಅನುಮಾವಿಲ್ಲ ಅನ್ನುತ್ತಾರೆ ನೆಟ್ಟಿಗರು.

Latest Videos

click me!