ನಟರಾದ ಅರ್ಜುನ್ ಸರ್ಜಾ ಹಾಗೂ ತೆಲುಗಿನ ಜೆ ಡಿ ಚಕ್ರವರ್ತಿ ನಾಯಕರಾಗಿ, ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ ‘ಕಾಂಟ್ರಾಕ್ಟ್’ ಚಿತ್ರದ ಮೇಕಿಂಗ್ ವಿಡಿಯೋಗಳು ರಾಧಿಕಾ ಅವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಮುಖ್ಯವಾಗಿ ಡ್ಯಾನ್ಸ್ ಮಾಡಿರುವ ವಿಡಿಯೋಗಳನ್ನೇ ಹೆಚ್ಚು ಹಚ್ಚಿಕೊಳ್ಳುತ್ತಿದ್ದು,
‘ಇದು ನನ್ನ ಹೊಸ ಚಿತ್ರದ ಮೇಕಿಂಗ್ ವಿಡಿಯೋ. ಇದರಲ್ಲಿ ನನ್ನ ಡ್ಯಾನ್ಸ್ ಹೇಗಿದೆ ಎಂದು ಹೇಳಿ’ ಎನ್ನುವ ಸಾಲುಗಳೊಂದಿಗೆ ದಿನಕ್ಕೊಂದು ವಿಡಿಯೋ ಅನಾವರಣಗೊಳಿಸುತ್ತಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅವರ ಮೇಕಿಂಗ್ ವಿಡಿಯೋಗಳನ್ನು ನೋಡಿ ಸಾಕಷ್ಟುಮಂದಿ ಫಿದಾ ಆಗಿದ್ದಾರೆ.
ಲುಕ್ಕಿಂಗ್ ಸೂಪರ್, ಡ್ಯಾನ್ಸ್ ಅದ್ಭುತವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಆ ಮೂಲಕ ರಾಧಿಕಾ ಕುಮಾರಸ್ವಾಮಿ ಅವರ ಚಿತ್ರದ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿವೆ.
ಸದ್ಯ ಅವರ ನಟನೆಯ ‘ರಾಜೇಂದ್ರ ಪೊನ್ನಪ್ಪ’ ಹಾಗೂ ‘ಭೈರಾದೇವಿ’ ಚಿತ್ರಗಳು ತೆರೆಗೆ ಬರಬೇಕಿದೆ.
ಈ ಎರಡೂ ಚಿತ್ರಗಳಿಗೂ ಮೊದಲೇ ಸೆಟ್ಟೇರಿದ್ದು ಸಮೀರ್ ನಿರ್ದೇಶನದ ಬಹುಭಾಷೆಯ ‘ಕಾಂಟ್ರಾಕ್ಟ್’ ಚಿತ್ರ. ಸದ್ಯ ಮೂರು ಚಿತ್ರಗಳು ರಾಧಿಕಾ ಮುಂದಿವೆ.