ಹೋರಾಟ ಗೆದ್ದು ಬಂದ ಸ್ಯಾಂಡಲ್‌ವುಡ್ ನಟಿ ರಿಷಿಕಾ ಸಿಂಗ್

First Published | Oct 19, 2020, 6:28 PM IST

ಬೆಂಗಳೂರು(ಅ. 19)  ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ನಟಿ ರಿಷಿಕಾ‌ಸಿಂಗ್  ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ.  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಿಷಿಕಾ‌ಸಿಂಗ್ ಸೋಮವಾರ ಮನೆಗೆ ಬಂದಿದ್ದಾರೆ.

ತಂಗಿ ಆರೋಗ್ಯವಾಗಿದ್ದಾಳೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡನಟ ಆದಿತ್ಯವಿಚಾರ ಹಂಚಿಕೊಂಡಿದ್ದಾರೆ.
ಎರಡು ತಿಂಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ನಟಿ ಗಾಯಗೊಂಡಿದ್ದರು.
Tap to resize

ಅಪಘಾತದಲ್ಲಿ ಬೆನ್ನುಮೂಳೆಗೆ ಪಟ್ಟಾದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ರಿಷಿಕಾ ಸಿಂಗ್ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ.
ಜುಲೈ 30ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಸುಮಾರು ಎರಡೂವರೆ ತಿಂಗಳಾದರೂ ಹಾಸಿಗೆ ಹಿಡಿದು ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ ಎನ್ನಲಾಗಿತ್ತು.
ಹೆಸರುಘಟ್ಟದ ಗೆಳೆಯರ ಮನೆಯಿಂದ ಮುಂಜಾನೆ 6 ಗಂಟೆ ಸಮಯದಲ್ಲಿ ಹೊರಟ ನಟಿ ರಿಷಿಕಾ ಸಿಂಗ್, ಗೆಳತಿ ಅರ್ಪಿತಾ ಹಾಗೂ ಕಾರು ಚಾಲಕ ಆರ್ಯ ಇದ್ದ ಕಾರು ಅಪಘಾತಕ್ಕೆ ಗುರಿಯಾಗಿತ್ತು.
ಕಂಠೀರವ, ಕಳ್ಳ ಮಳ್ಳ ಸುಳ್ಳ, ಕಠಾರಿ ವೀರ ಸುರ ಸುಂದರಾಂಗಿ, ಬೆಂಕಿ ಬಿರುಗಾಳಿ, ಮಾಣಿಕ್ಯ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದ ರಿಷಿಕಾ ಸಿಂಗ್ ಕನ್ನಡ ಚಿತ್ರರಂಗ ಪ್ರತಿಭಾನ್ವಿತ ನಟಿ.

Latest Videos

click me!