ರೇಖಾ ಹುಟ್ಟಿದ್ದು ಜನವರಿ 24,1985ರಲ್ಲಿ.
ಮೂಲತಃ ಬೆಂಗಳೂರಿನವರಾದ ರೇಖಾ ಹೆಚ್ಚಾಗಿ ಕಾಣಿಸಿಕೊಂಡಿರುವುದು ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ.
ಮಾಡಲಿಂಗ್ ಮೂಲಕ ಚಿತ್ರರಂಗ ಪ್ರವೇಶ.
2001ರಲ್ಲಿ ರೇಖಾ 'ಚಿತ್ತಾರ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.
ಮದ್ರಾಸ್ ವಿಶ್ವವಿದ್ಯಾಲಯದಿಂದ ಕರೆಸ್ಪಾಂಡೆನ್ಸ್ ಬಿಬಿಎ ಪದವಿ ಪಡೆದಿದ್ದಾರೆ.
ಕಿಚ್ಚ ಸುದೀಪ್ ಜೊತೆ ಅಭಿನಯಿಸಿದ 'ಕಿಚ್ಚ' ಸಿನಿಮಾ ರೇಖಾ ವೃತ್ತಿಯಲ್ಲಿ ಬಿಗ್ ಹಿಟ್ ನೀಡಿತ್ತು.
30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ರೇಖಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ರೇಖಾ ಇತ್ತೀಚೆಗೆ ಟಿಕ್‌ಟಾಕ್ ವಿಡಿಯೋಗಳನ್ನು ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
2014ರಲ್ಲಿ ತುಳಸಿ ಹಾಗೂ ಪುಲಕೇಶಿ ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿರುವುದು.