ಸಾಕಷ್ಟು ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಪಕ್ವ ನಟಿ ಸುಮನ್ ನಗರ್‌ಕರ್ ಅವರು ನೆನಪಾಗುವುದು ಬೆಳದಿಂಗಳ ಬಾಲೆ ಚಿತ್ರದ ಮೂಲಕವೇ.
ತೆಲುಗು ಲೇಖಕ ಯುಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿ ಆಧಾರಿತ, ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಚಿತ್ರ ಬೆಳದಿಂಗಳ ಬಾಲೆ.
ಬ್ಯಾಂಕ್ ದರೋಡೆಯ ಕಥೆಯುಳ್ಳ ಡಾ.ವಿಷ್ಣುವರ್ಧನ್ ಅಭಿನಯದ ನಿಷ್ಕರ್ಷ ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ನಟಿಸಿದ್ದಾರೆ. ಬ್ಯಾಂಕ್ ದರೋಡೆಯ ಕಥೆಯುಳ್ಳ ಡಾ.ವಿಷ್ಣುವರ್ಧನ್ ಅಭಿನಯದ ನಿಷ್ಕರ್ಷ ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ನಟಿಸಿದ್ದಾರೆ. ಬ್ಯಾಂಕ್ ದರೋಡೆಯ ಕಥೆಯುಳ್ಳ ಡಾ.ವಿಷ್ಣುವರ್ಧನ್ ಅಭಿನಯದ ನಿಷ್ಕರ್ಷ ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ನಟಿಸಿದ್ದಾರೆ.
ಮದುವೆಯಾಗಿ ಹಲವು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದ್ದ ಸುಮನ್, ತಮ್ಮ ಬ್ಯಾನರ್ ಅಡಿ ನಿರ್ಮಿಸಿದ ಬಬ್ರೂ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದರು.
ಫ್ಯಾಮಿಲಿಯೊಂದಿಗೆ ವಿದೇಶದಲ್ಲಿ ನೆಲೆಸಿದ್ದ ಸುಮನ್ ಅಲ್ಲಿಯೇ ಮಕ್ಕಳಿಗೆ ಹಿಂದೂಸ್ಥಾನಿ ಸಂಗೀತ ತರಗತಿ ನಡೆಸುತ್ತಿದ್ದರು.
'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ಹಾಗೂ 'ಅಶ್ವಿನಿ ನಕ್ಷತ್ರ' ಫೇಮ್ ಮಯೂರಿ ನಟನೆಯ 'ಇಷ್ಟಕಾಮ್ಯ' ಚಿತ್ರದಲ್ಲಿಯೂ ನಟಿಸಿದ್ದಾರೆ.
ಸಂಗೀತ ಕೇಳುವುದು, ಅಡುಗೆ ಕಲಿಯುವುದು ಹಾಗೂ ಗಾರ್ಡನಿಂಗ್ ಇವರ ಫೇವರೇಟ್ ಹಾಬಿಯಂತೆ.
ಮೊದಲ ಕನ್ನಡ ಆನ್‌ಲೈನ್ ರೇಡಿಯೋ ಸ್ಟೇಷನ್ ನಮ್ಮ ರೇಡಿಯೋದಲ್ಲಿ ವಾರದ ಶೋವೊಂದನ್ನು ನಡೆಯಿಸಿಕೊಡುತ್ತಿದ್ದರು.
ಹೂಮಳೆ, ದೋಣಿ ಸಾಗಲಿ, ...ರೇ, ಜಿರ್ಜೀಂಬೆ...ಮುಂತಾದ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಕಿರುಚಿತ್ರ ಗ್ರೇನಲ್ಲಿಯೂ ತಮ್ಮ ನಟನಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.