ಯುಗಾದಿ ಹಬ್ಬದಂದು ಲಂಗ ದಾವಣಿಯಲ್ಲಿ ಮಿಂಚಿದ ಮೇಘಾ ಶೆಟ್ಟಿ: ಇದು ನಮ್ ಸಂಸ್ಕೃತಿ ಅಂದ್ರೆ ಎಂದ ಫ್ಯಾನ್ಸ್!

Published : Apr 10, 2024, 08:55 PM IST

ಪ್ರತಿ ಬಾರಿ ಒಂದಲ್ಲ ಒಂದು ಫೋಟೋಶೂಟ್ ಮೂಲಕ ಸದಾ ಅಭಿಮಾನಿಗಳ ಮನ ಗೆಲ್ಲುತ್ತಿರುವ ನಟಿ ಮೇಘಾ ಶೆಟ್ಟಿ ಯುಗಾದಿ ಹಬ್ಬದಂದು ಲಂಗ ದಾವಣಿ ತೊಟ್ಟು ಪಕ್ಕ ಹಳ್ಳಿ ಹುಡುಗಿಯಾಗಿದ್ದಾರೆ. 

PREV
17
ಯುಗಾದಿ ಹಬ್ಬದಂದು ಲಂಗ ದಾವಣಿಯಲ್ಲಿ ಮಿಂಚಿದ ಮೇಘಾ ಶೆಟ್ಟಿ: ಇದು ನಮ್ ಸಂಸ್ಕೃತಿ ಅಂದ್ರೆ ಎಂದ ಫ್ಯಾನ್ಸ್!

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ನಟಿ, ಮಾಡ್ರನ್ ಲುಕ್‌ನಲ್ಲಿ ಮಿಂಚುತ್ತಿದ್ದರು. ಆದರೆ, ಯುಗಾದಿ ಹಬ್ಬದಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 

27

ಟ್ರೆಡಿಷನಲ್ ಡ್ರೆಸ್ ಲಂಗ ದಾವಣಿ ಉಡುಗೆಯಲ್ಲಿ ಹಚ್ಚ ಹಸಿರಿನ ಹೊಲದ ಮಧ್ಯೆ ನಿಂತಿರುವ ಮೇಘಾ ಶೆಟ್ಟಿ ಲುಕ್‌ಗೆ ಜನ ಮರುಳಾಗಿದ್ದಾರೆ. ಮಾದಕ ನೋಟದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದ ಮೇಘಾ ಶೆಟ್ಟಿ ಇದೀಗ ಸಿಂಪಲ್ ಲುಕ್​ನಲ್ಲಿ ಮಿಂಚುತ್ತಿದ್ದಾರೆ.

37

ಮೆರೂನ್ ಕಲರ್ ದಾವಣಿ, ಖಾಕಿ ಬಣ್ಣದ ಲಂಗ ಧರಿಸಿ, ಕಿವಿಗೆ ಜುಮುಕಿ ಹಾಕಿ, ಕುತ್ತಿಗೆಗೆ ಸರಳವಾದ ಸರ, ಕೈಗೆ ಮ್ಯಾಚಿಂಗ್ ಗಾಜಿನ ಬಳೆಗಳನ್ನು ಧರಿಸಿರುವ ಅವರು ಪಕ್ಕ ನಮ್ಮ ಮನೆಯ ಹುಡುಗಿಯಂತೆ ಕಾಣುತ್ತಿದ್ದಾರೆ. ಹಚ್ಚ ಹಸಿರಿನ ಹೊಲದ ಮಧ್ಯೆ ನಿಂತು ನಸುನಗುತ್ತಾ ಫೋಟೋಗಳಿಗೆ ಫೋಸ್ ನೀಡಿದ್ದಾರೆ.

47

ಫೋಟೋಗಳಿಗೆ ಇದು ನಮ್ಮ ಸಂಸ್ಕೃತಿ ಅಂದ್ರೆ ಯುಗಾದಿ ಹಬ್ಬದ ಶುಭಾಶಯಗಳು, ಮೇಘ ಮುದ್ದು ಮುದ್ದಾದ ಗೊಂಬೆ. ಈ ತರ ಬಟ್ಟೆಯಲ್ಲಿ ಮಾತ್ರ ಚೆನ್ನಾಗಿ ಕಾಣಿಸ್ತೀಯ.. ದೇವತೆಯೇ ಧರೆಗಿಳಿದು ಬಂದಂತಿದೆ, ನಿಮ್ಮ ಸೌಂದರ್ಯಕೆ ಮನವು ಸೋತು ಹೋಗಿದೆ. ಎಂಬಂತಹ ಕಾಮೆಂಟ್‌ಗಳು ಬರುತ್ತಿವೆ. 

57

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಯವಾದ ಮೇಘಾ ಶೆಟ್ಟಿ ಈಗ ಅನು ಸಿರಿಮನೆ ಆಗಿಯೇ ಫೇಮಸ್‌ ಆಗಿದ್ದಾರೆ. 

67

ಇತ್ತೀಚೆಗೆ ನಟಿ ಮೇಘಾ ಶೆಟ್ಟಿ ಅಭಿನಯದ 'ಕೈವ' ಸಿನಿಮಾ ಬಿಡುಗಡೆಯಾಗಿತ್ತು. ಇದಾದ ಬಳಿಕ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಅವರ ಗ್ರಾಮಾಯಣದಲ್ಲಿ ಕಾಣಿಸಿಕೊಳ್ಳಲಿದ್ದು, ಮೇಘಾ ಶೆಟ್ಟಿ ಕೈಯಲ್ಲಿ ಅನೇಕ ಸಿನಿಮಾಗಳಿವೆ.

77

ನಟಿ ಮೇಘಾ ಶೆಟ್ಟಿ ತನ್ನ ನಟನೆ ಮಾತ್ರವಲ್ಲ ತಮ್ಮ ಫಿಟ್‌ನೆಸ್ ಮತ್ತು ಫ್ಯಾಷನ್ ಸೆನ್ಸ್‌ನಿಂದಲೂ ಕೂಡ ಸಕತ್ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ಅವರು ಒಂದಲ್ಲ ಒಂದು ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories