2015ರಲ್ಲಿ ಕೆಂಡಸಂಪಿಗೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾನ್ವಿತಾ ಕಾಮತ್ ಮೊದಲ ಚಿತ್ರಕ್ಕೆ ಸೈಮಾ ಪ್ರಶಸ್ತಿ ಪಡೆದಿದ್ದಾರೆ.
ಚೌಕಾ ಚಿತ್ರದಲ್ಲಿ ಕಾಶಿನಾಥ್ ಮಗಳ ಪಾತ್ರ ಮಾಡಿದ್ದಾರೆ. ಅಪ್ಪ ಐ ಲವ್ ಯು ಪಾ ಹಾಡು ಕನ್ನಡಿಗರ ಮನಸ್ಸಿಗೆ ತುಂಬಾ ಹತ್ತಿರವಾಗಿದೆ.
ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಟಗರು ಪುಟಿ ತಮ್ಮ ಹೇರ್ ಸ್ಟೈಲ್ ಮತ್ತು ಹೇರ್ ಕಲರ್ ಬದಲಾಯಿಸಿಕೊಂಡಿದ್ದಾರೆ.
ಹೌದು! ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಪ್ರಶಾಂತ್ ಎಂಬುವವರು ಮಾನ್ವಿತಾ ಕಾಮನ್ ಕೇರ್ ಕಟ್ ಮತ್ತು ಹೇರ್ ಕಲರ್ ಮಾಡಿದ್ದಾರೆ.
ಇದೇ ಮೊದಲ ಸಲ ಮಾನ್ವಿತಾ ಇಷ್ಟೋಂದು ಡಿಫರೆಂಟ್ ಕಲರ್ ಅಯ್ಕೆ ಮಾಡಿಕೊಂಡಿರುವುದು. ಒಂದು ರೀತಿ ಬೋಲ್ಡ್ ಪಿಂಕ್ ಬಣ್ಣ ಎನ್ನಬಹುದು.
ಹೇ.... ಟಗರು ಪುಟಿ ಏನ್ ನಿನ್ನ ಅವತಾರ? ಇದ್ಯಾವ ಚಿತ್ರಕ್ಕೆ?...ನೀವು ಏನೇ ಮಾಡಿ ಮೇಡಂ ನಾವು ನಿಮ್ಮನ್ನು ಲವ್ ಮಾಡೋದು ಕಮ್ಮಿ ಮಾಡಲ್ಲ...ನಮಗೆ ನೀವು ಹೇಗಿದ್ರೂ ಇಷ್ಟ..ಅಂತಾರೆ ಫ್ಯಾನ್ಸ್.