ಹೇಗಿದ್ದಾರೆ ನೋಡಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಮೊಮ್ಮಗ!

First Published Oct 2, 2023, 3:26 PM IST

ಸಾಹಸ ಸಿಂಹ ವಿಷ್ಣುವರ್ಧನ್ ಮೊಮ್ಮಗ ಜೇಷ್ಠ ವರ್ಧನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ. ಹೇಗಿದ್ದಾರೆ ನೊಡಿ ವಿಷ್ಣು ದಾದ ಮೊಮ್ಮಗ. 
 

ಸಾಹಸ ಸಿಂಹ ವಿಷ್ಣುವರ್ಧನ್ (Sahasasimha Vishnuvardhan) ಅವರ ಸ್ಟೈಲ್, ಲುಕ್, ಖದರ್ ನೋಡಿ ಇಂಪ್ರೆಸ್ ಆಗದವರು ಯಾರೂ ಇರಲಾರರು. ಈಗ ಅದೇ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ, ವಿಷ್ಣುವರ್ಧನ್ ಮೊಮ್ಮಗ ಜೇಷ್ಠವರ್ಧನ್. 
 

ಹೌದು, ಇವರು ವಿಷ್ಣುವರ್ಧನ್ ಅವರ ಮೊಮ್ಮಗ. ಅಂದ್ರೆ ವಿಷ್ಣು ದಾದ ಮಗಳು ಕೀರ್ತಿ ವಿಷ್ಣುವರ್ಧನ್ ಮತ್ತು ನಟ ಅನಿರುದ್ಧ ಜಟ್ಕರ್ ಪುತ್ರ ಜೇಷ್ಠ ವರ್ಧನ್ (Jyesta Vardhan). 
 

Latest Videos


ಸದ್ಯ ನಟನೆಯಿಂದ ದೂರವಿದ್ದು, ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿರುವ ಸೋಶಿಯಲ್ ಮೀಡಿಯಾದಲ್ಲಂತೂ (Social media) ತುಂಬಾ ಸದ್ದು ಮಾಡುತ್ತಿರುತ್ತಾರೆ.  ಇವರ ಫೋಟೋಗಳನ್ನು ನೋಡಿದ ಜನರು ಥೇಟ್ ವಿಷ್ಣದಾದ ತರ ಇದ್ದೀರಿ, ಮರಿ ಸಿಂಹ ಎಂದು ಸಹ ಹೇಳುತ್ತಿದ್ದಾರೆ. 
 

ಸೋಶಿಯಲ್ ಮೀಡೀಯಾದಲ್ಲಿ ಜೇಷ್ಠವರ್ಧನ್ ಸ್ಟೈಲ್ ನೋಡಿದ್ರೆ ತಾತ ವಿಷ್ಣುವರ್ಧನ್ ರೀತಿ ಕಾಣುತ್ತಾರೆ. ಅದೇ ಕಣ್ಣು, ಅದೇ ನಗು, ತಾತನ ಕೈಯಲ್ಲಿ ಸದಾ ಇರುತ್ತಿದ್ದಂತೆ ಈತನ ಕೈಯಲ್ಲೂ ಕಡಗ ಹಾಕಿ ಥೇಟ್ ಮಿನಿ ಹೀರೋ ತರ ಕಾಣಿಸುತ್ತಿದ್ದಾರೆ. 
 

ನಟ ಅನಿರುದ್ಧ್ (Anirudh Jatkar) ಅವರು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಮಕ್ಕಳ ಫೋಟೋ ಶೇರ್ ಮಾಡುತ್ತಿರುತ್ತಾರೆ. ಜೊತೆಯಾಗಿ ಮಕ್ಕಳೊಂದಿಗೆ ಡ್ಯಾನ್ಸ್ ಮಾಡುತ್ತಾ, ರೀಲ್ಸ್ ಮಾಡುತ್ತಾ, ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿರುತ್ತಾರೆ. 
 

ಜೇಷ್ಠ ಸಹ ಅತ್ಯುತ್ತಮ ಡ್ಯಾನ್ಸರ್ ಆಗಿದ್ದು, ತಮ್ಮ ಸಖತ್ತಾಗಿ ಡ್ಯಾನ್ಸ್ ಮೂವ್ ಗಳ ಜೊತೆ ಇವರು ಅಭಿಮಾನಿಗಳಿಗೆ ಮೋಡಿ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲ ಇವರೊಬ್ಬ ಅತ್ಯುತ್ತಮ ಸಿಂಗರ್ ಕೂಡ ಆಗಿದ್ದಾರೆ. ತಂಗಿ ಜೊತೆ ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ಇವರು ಅಥ್ಲೇಟ್ಸ್ ಕೂಡ ಹೌದು. 
 

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇವರು ಹಂಚಿಕೊಳ್ಳುತ್ತಿರುವ ಫೋಟೋ ನೋಡಿದ್ರೆ ಸದ್ಯದಲ್ಲಿ ಇವರು ನಟನಾ ಜಗತ್ತಿಗೆ ಕಾಲಿಡುತ್ತಿದ್ದಾರೋ ಎಂದೆನಿಸುತ್ತೆ. ಅಭಿಮಾನಿಗಳು ಸಹ ಯಾವಾಗ ಸಿನಿಮಾಗೆ ಎಂಟ್ರಿ ಎಂದು ಕೇಳುತ್ತಿದ್ದಾರೆ. ಆದರೆ ಆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. 
 

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಜೇಷ್ಠ ಅವರಿಗೆ 26.4K ಫಾಲೋವರ್ಸ್ ಇದ್ದಾರೆ. ಅಷ್ಟೇ ಅಲ್ಲ ಇವರ ಸಾಕಷ್ಟೂ ಫ್ಯಾನ್ ಪೇಜ್ ಗಳು (fan page) ಸಹ ಇವೆ. ಅಲ್ಲಿ ನೀವು ಇವರ ಡ್ಯಾನ್ಸ್ ವಿಡೀಯೋಗಳನ್ನು, ಇತರ ವಿಡೀಯೋಗಳನ್ನು ಸಹ ಕಾಣಬಹುದು. 
 

click me!