Published : Jul 01, 2025, 02:38 PM ISTUpdated : Jul 01, 2025, 02:47 PM IST
ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಕೊಳ್ಳುತ್ತೇನೆ ಅಂತ ಹೇಳಿದ್ದ ದೀಪಿಕಾ ದಾಸ್ ಮತ್ತೆ ವಾಪಸ್ ಆಗಿದ್ದು, ಇದೀಗ ಇನ್ಸ್ಟಾ ಖಾತೆಯಲ್ಲಿ ಮಿನಿ ಡ್ರೆಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಬಿಳಿ ಬಣ್ಣದ ಮಿನಿ ಡ್ರೆಸ್‌ನಲ್ಲಿ ದೀಪಿಕಾ ಮಿಂಚಿದ್ದು, ಕೈಯಲ್ಲಿ ಸ್ಟೈಲಿಶ್ ಬ್ಯಾಗ್ ಜೊತೆಗೆ ಕೂಲ್ ಡ್ರಿಂಕ್ಸ್ ಇರುವ ಗ್ಲಾಸ್ ಹಿಡಿದುಕೊಂಡಿದ್ದಾರೆ. ವಿಶೇಷವಾಗಿ ಅವರು ತೊಟ್ಟ ಕೂಲಿಂಗ್ ಗ್ಲಾಸ್ ಆಕರ್ಷಕವಾಗಿದೆ. ಸದ್ಯ ಈ ಫೋಟೋಸ್ ವೈರಲ್ ಆಗಿದೆ.
58
ಫೋಟೋಸ್ ನೋಡಿದ ನೆಟ್ಟಿಗರು, ಸೂಪರ್ ದೀಪ್ಸ್, ನಿಮ್ಮ ಗಂಡ ಎಲ್ಲಿ, ತಾಳಿ ಇಲ್ಲವಾ, ನಿಮಗೆ ಮದ್ವೆಯಾಗಿದೆ ಅಂತ ಅನ್ಸೋದೆ ಇಲ್ಲ, ಸೊ ಬ್ಯೂಟಿಫುಲ್, ಕ್ಯೂಟ್ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ ಸದ್ಯ ಇದೆ ಫೋಟೋಸ್ ವೈರಲ್ ಆಗುತ್ತಿದೆ.
68
ಕಳೆದ ವರ್ಷ ಮಾರ್ಚ್ 1ರಂದು ಉದ್ಯಮಿ ದೀಪಕ್ ಜೊತೆ ದೀಪಿಕಾ ದಾಸ್ ಮದುವೆಯಾದರು. ಗುರುಹಿರಿಯರ ಒಪ್ಪಿಗೆ ಪಡೆದು ಪ್ರೀತಿಸಿದ ಹುಡುಗನ ಜೊತೆ ಗೋವಾದಲ್ಲಿ ನಟಿ ಹಸೆಮಣೆ ಏರಿದರು.
78
ದೀಪಿಕಾ ದಾಸ್ ಸಿನಿಮಾ ಕನಸಿಗೆ ಪತಿ ದೀಪಕ್ ಜೊತೆಯಾಗಿ ನಿಂತಿದ್ದಾರೆ. ನಟನಾ ಕ್ಷೇತ್ರದಲ್ಲಿ ಮುಂದುವರಿಯಲು ದೀಪಿಕಾಗೆ ದೀಪಕ್ ಮತ್ತಷ್ಟು ಪ್ರೋತ್ಸಾಹ ನೀಡುತ್ತಿರುವುದು ವಿಶೇಷ.
88
ಪಾರು ಪಾರ್ವತಿ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ದೀಪಿಕಾ ದಾಸ್ ಬೆಳ್ಳಿಪರದೆಯಲ್ಲಿ ಮಿಂಚಿದರು. ಆ ನಂತರ ಒಟಿಟಿಯಲ್ಲೂ ಸಿನಿಮಾ ಬಿಡುಗಡೆಯಾಯ್ತು.