Small Screen
ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಬಿಗ್ ಬಾಸ್ ಮೂಲಕ ಜನಮನ ಗೆದ್ದ ಲೇಡಿ ಬಾಸ್ ದೀಪಿಕಾ ದಾಸ್.
ಟ್ರಾವೆಲ್ ಪ್ರಿಯೆಯಾಗಿರುವ ದೀಪಿಕಾ ದಾಸ್ ಹೆಚ್ಚಾಗಿ ದೇಶ, ವಿದೇಶವನ್ನು ಸುತ್ತುತ್ತಲೇ ಇರುತ್ತಾರೆ. ದುಬೈ, ಲಂಡನ್ ಇವರ ಫೇವರಿಟ್ ಟ್ರಾವೆಲ್ ಸ್ಪಾಟ್ ಗಳೂ ಹೌದು.
ಈ ಬಾರಿ ದೀಪಿಕಾ ದಾಸ್ ಬಣ್ಣದ ಹಬ್ಬ ಹೋಳಿಯ ಹಿನ್ನೆಲೆಯಲ್ಲಿ ವೃಂದಾವನಕ್ಕೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಬಣ್ಣಗಳಲ್ಲಿ ಆಡಿ ಸಂಭ್ರಮಿಸಿದ್ದಾರೆ.
ಶ್ರೀಕೃಷ್ಣ ಪರಮಾತ್ಮ ನೆಲೆಸಿದಂತಹ ತಾಣ ವೃಂದಾವನ, ಇಲ್ಲಿ ಬಣ್ಣದ ಹೋಳಿ ಹಬ್ಬ ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುತ್ತೆ.
ಪೂರ್ತಿ ವೃಂದಾವನ ಈ ಸಮಯದಲ್ಲಿ ಬಣ್ಣದಲ್ಲಿ ಮುಳುಗೇಳುತ್ತೆ. ದೇಶ -ವಿದೇಶದಿಂದ ಭಕ್ತರು ಇಲ್ಲಿ ರಂಗಿನಾಟವಾಡಲು ಬರುತ್ತಾರೆ.
ಈ ಬಾರಿ ದೀಪಿಕಾ ಬಣ್ಣಗಳ ಹಬ್ಬಕ್ಕೆ ವಿದೇಶ ಬಿಟ್ಟು, ವೃಂದಾವನಕ್ಕೆ ತೆರಳಿದ್ದು, ತಾವು ಕೂಡ ಬಣ್ಣಗಳಲ್ಲಿ ಮಿಂದೆದ್ದು ಸಂಭ್ರಮಿಸಿದ್ದಾರೆ.
ದೈವಿಕ ಬಣ್ಣಗಳು, ಸಾಂಪ್ರದಾಯಿಕ ಹೋಳಿ ಆಚರಣೆಯ ಸ್ಪರ್ಶ ಎನ್ನುತ್ತಾ ಬಣ್ಣಗಳ ಹಬ್ಬದ ಸುಂದರವಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ದೀಪಿಕಾ ದಾಸ್ ಸ್ಕರ್ಟ್ ಮತ್ತು ಬ್ಲೌಸ್ ಧರಿಸಿ, ತಲೆ ಪೂರ್ತಿ ಕವರ್ ಆಗೋ ಹಾಗೆ ದುಪಟ್ಟಾ ಸುತ್ತಿದ್ದು, ನಟಿ ಪೂರ್ತಿಯಾಗಿ ಪಿಂಕ್ ಬಣ್ಣದಲ್ಲಿ ಮುಳುಗಿದ್ದಾರೆ.
ಅಭಿಮಾನಿಗಳು ನಟಿಗೆ ಬಣ್ಣಗಳ ಹಬ್ಬ ಹೋಳಿಯ ಶುಭಾಶಯ ಕೋರಿದ್ದಾರೆ. ಜೊತೆಗೆ ಫೋಟೊಗಳು ಸುಂದರವಾಗಿವೆ ಎಂದಿದ್ದಾರೆ.
ಎರಡು ದಿನಗಳಿಂದ ದೇಶಾದ್ಯಂತ ಸಂಭ್ರಮದ ಬಣ್ಣದ ಹಬ್ಬ ಆಚರಿಸಲಾಗುತ್ತಿದೆ, ನೀವು ಬಣ್ಣದಲ್ಲಿ ಮುಳುಗಿದ್ರಾ? ಹೇಗಿತ್ತು ನಿಮ್ಮ ಹೋಳಿ ಹಬ್ಬ.