ಇವರೇ ನೋಡಿ ಕನ್ನಡ ಮನರಂಜನಾ ಲೋಕದಲ್ಲಿ ಸದ್ದು ಮಾಡ್ತಿರೋ ಒಡಹುಟ್ಟಿದವರು

First Published | Feb 7, 2024, 3:26 PM IST

ವಿಜಯ್ ರಾಘವೇಂದ್ರ-ಶ್ರೀ ಮುರಳಿಯಿಂದ ಹಿಡಿದು ರಚಿತಾ-ನಿತ್ಯಾ ರಾಮ್ ವರೆಗೂ; ಕನ್ನಡ ಮನರಂಜನ ಲೋಕವನ್ನು ಆಳುವ ಒಡಹುಟ್ಟಿದ ಜೋಡಿಗಳು ಯಾರ್ಯಾರಿದ್ದಾರೆ ನೀವೇ ನೋಡಿ. 

ಕನ್ನಡ ಮನರಂಜನೆಯಲ್ಲಿ ಅನೇಕ ಸಹೋದರ, ಸಹೋದರಿಯರು(siblings) ಮಿಂಚುತ್ತಿದ್ದಾರೆ, ಅವರು ತಮ್ಮ ಅದ್ಭುತ ನಟನೆ ಮತ್ತು ಬಾಂಡಿಂಗ್ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ನಟನಾ ಕೌಶಲ್ಯ, ನಗಿಸುವ ಕರಾಮತ್ತು, ಫ್ಯಾಷನ್ ಸೆನ್ಸ್ ಹೀಗೆ ವಿವಿಧ ಕಾರಣಗಳಿಂದ ಜನಪ್ರಿಯತೆ ಗಳಿಸಿದ ಅದೆಷ್ಟೋ ಸಹೋದರ, ಸಹೋದರಿಯರು ನಮ್ಮಲ್ಲಿದ್ದಾರೆ. ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಜಗ್ಗೇಶ್ ಮತ್ತು ಕೋಮಲ್ (Jaggesh and Komal): ನಟ-ರಾಜಕಾರಣಿ ಜಗ್ಗೇಶ್ ಮತ್ತು ಅವರ ಕಿರಿಯ ಸಹೋದರ ಕೋಮಲ್ ಕುಮಾರ್ ತಮ್ಮ ಹಾಸ್ಯ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ, ಕನ್ನಡ ಚಲನಚಿತ್ರೋದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.

Tap to resize

ವಿಜಯ್ ರಾಘವೇಂದ್ರ ಮತ್ತು ಮುರಳಿ (Vijay Raghavendra and Sri Murali): ಸಹೋದರರಾದ ವಿಜಯ್ ರಾಘವೇಂದ್ರ ಮತ್ತು ಮುರಳಿ ನಡುವಿನ ಬಂಧವು ತುಂಬಾನೆ ಸ್ಟ್ರಾಂಗ್ ಆಗಿದೆ . ಸವಾಲಿನ ಸಮಯದಲ್ಲಿ, ವಿಶೇಷವಾಗಿ ವಿಜಯ್ ಅವರ ಪತ್ನಿ ಸ್ಪಂದನಾ ಅವರ ಅಕಾಲಿಕ ನಿಧನದ ನಂತರ ಮುರಳಿ ವಿಜಯ್ ಗೆ ನೀಡಿದ ಅಚಲ ಬೆಂಬಲವು ಅವರ ಸುಂದರ ಬಂಧಕ್ಕೆ ಸಾಕ್ಷಿಯಾಗಿದೆ.
 

ನಿತ್ಯಾ ರಾಮ್ ಮತ್ತು ರಚಿತಾ ರಾಮ್ (Nitya Ram and Rachitha Ram): ನಿತ್ಯಾ ಮತ್ತು ರಚಿತಾ ರಾಮ್ ಬೆಸ್ಟ್ ಸಿಬ್ಲಿಂಗ್ಸ್ ಗಿಂತ ಹೆಚ್ಚಾಗಿ, ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ.  ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದರಿಂದ ಹಿಡಿದು ಪರಸ್ಪರ ಸಪೋರ್ಟ್ ನೀಡುವವರೆಗೆ ಎಲ್ಲಾ ವಿಷಯಗಳಲ್ಲೂ ಸಹ ಇಬ್ಬರು ಜೊತೆಯಾಗಿರುತ್ತಾರೆ. 

ಅನಿಕಾ ಸಿಂಧ್ಯಾ ಮತ್ತು ವಿನಯ್ ಸಿಂಧ್ಯಾ (ANika Sindhya and Vinay Sindhya): ರಿಯಾಲಿಟಿ ಶೋಗಳು ಮತ್ತು ಸೀರಿಯಲ್ ಗಳಲ್ಲಿ ಅನಿಕಾ ಸಿಂಧ್ಯಾ ಹಲವಾರು ವರ್ಷಗಳಿಂದ ಆಕ್ಟೀವ್ ಆಗಿದ್ದಾರೆ,  ಇದೀಗ ಅವರ ಹೆಜ್ಜೆಗಳನ್ನು ಅನುಸರಿಸಿ, ಅವರ ಸಹೋದರ ಸಹ ಮನರಂಜನಾ ಲೋಕದಲ್ಲಿ ಮಿಂಚುತ್ತಿದ್ದಾರೆ. ವಿನಯ್ ಸಿಂಧ್ಯಾ ನಟ ಮತ್ತು ಜನಪ್ರಿಯ ರೂಪದರ್ಶಿ ಹೌದು. 
 

ನೇಹಾ ಗೌಡ ಮತ್ತು ಸೋನು ಗೌಡ (Neha Gowda and Sonu Gowda): ಕಿರುತೆರೆಯಲ್ಲಿ ಗ್ಲಾಮರ್ ಪ್ರತಿರೂಪವಾಗಿರುವ ಬೊಂಬೆ ಎಂದೇ ಖ್ಯಾತಿ ಪಡೆದಿರುವ ನಟಿ ನೇಹಾ ಗೌಡ, ಕನ್ನಡ ಚಲನಚಿತ್ರೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸೋನು ಗೌಡ ಇಬ್ಬರೂ ತಮ್ಮ ನಟನೆಯಿಂದ ಗಮನ ಸೆಳೆಯುತ್ತಿದ್ದಾರೆ. 

ಸೃಜನ್ ಲೋಕೇಶ್ ಮತ್ತು ಪೂಜಾ ಲೋಕೇಶ್ (Srujan Lokesh and Pooja Lokesh): ತಮ್ಮ ಸಹೋದರಿ ಪೂಜಾ ಲೋಕೇಶ್ ಅವರ ನಟನಾ ವೃತ್ತಿಜೀವನದ ಆರಂಭಿಕ ಹೆಜ್ಜೆಗಳಿಗೆ ಸೃಜನ್ ಬೆಂಬಲ ನೀಡಿದ್ದರು. ಇಬ್ಬರ ಬಾಂಧವ್ಯ ನೋಡಿದ್ರೆ ತುಂಬಾನೆ ಖುಷಿಯಾಗುತ್ತೆ. ಇವರಿಬ್ಬರೂ ಇಂದಿಗೂ ಕಿರುತೆರೆ ಲೋಕವನ್ನು ಆಳ್ತಿದ್ದಾರೆ ಅಂದ್ರೆ ತಪ್ಪಾಗಲ್ಲ. 

Latest Videos

click me!