ಮೀಸೆ ಹೊತ್ತ ಕ್ರೇಜಿಸ್ಟಾರ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

First Published | Nov 6, 2020, 10:21 AM IST

ಹೆಗಲ ಮೇಲೆ ಕಂಬಳಿ, ತಲೆಗೆ ಕೇಸರಿ ರುಮಾಲು, ಕಿವಿಗಳಿಗೆ ಓಲೆಗಳು, ಎದ್ದು ಕಾಣುವ ಗಿರಿಜಾ ಮೀಸೆ... ಇದು ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಹೊಸ ಗೆಟಪ್‌. 

ಕಲಾವಿದರಾಗಿ ರವಿಚಂದ್ರನ್‌ ಬದಲಾಗಿದ್ದಾರೆ ಎಂಬುದಕ್ಕೆ ‘ಕನ್ನಡಿಗ’ ಚಿತ್ರದಲ್ಲಿನ ಅವರ ಈ ಹೊಸ ವೇಷಭೂಷಣವೇ ಸಾಕ್ಷಿ.
ಪ್ರಬುದ್ಧವಾದ ಇಮೇಜ್‌ನಲ್ಲಿ ರವಿಚಂದ್ರನ್‌ ಕಾಣಿಸಿಕೊಳ್ಳುತ್ತಿದ್ದಾರೆ.
Tap to resize

ಈ ವಿಶೇಷ ಪಾತ್ರದ ಗೆಟಪ್‌ನಲ್ಲಿ ಕ್ರೇಜಿಸ್ಟಾರ್‌ ಸಾಕಷ್ಟುಕುತೂಹಲ ಮೂಡಿಸುತ್ತಿರುವುದಂತೂ ಸತ್ಯ. ಕಳೆದ 12 ದಿನಗಳಿಂದ ಚಿಕ್ಕಮಗಳೂರಿನ ಕಾಡಿನ ನಡುವೆ ಇರುವ ಗುಡ್ಡದ ಮೇಲೆ ವಠಾರದಂತಹ ದೊಡ್ಡ ಮನೆಯಲ್ಲಿ ‘ಕನ್ನಡಿಗ’ ಚಿತ್ರಕ್ಕೆ ಶೂಟಿಂಗ್‌ ನಡೆಯುತ್ತಿದೆ.
ದೀಪಾವಳಿ ಹಬ್ಬದವರೆಗೂ ಇಲ್ಲೇ ಚಿತ್ರೀಕರಣ ನಡೆಯಲಿದೆ. ಬಿಎಂ ಗಿರಿರಾಜ್‌ ಈ ಚಿತ್ರದ ಮೂಲಕ ಕನ್ನಡದ ಕತೆಯೊಂದನ್ನು ಐತಿಹಾಸಿಕ ಹಿನ್ನೆಲೆಯಲ್ಲಿ ಹೇಳುವುದಕ್ಕೆ ಹೊರಟಿರುವುದೇ ಈ ಚಿತ್ರದ ವಿಶೇಷ.
‘ಈ ಚಿತ್ರದಲ್ಲಿ ಲಿಪಿಕಾರ ಕುಟುಂಬದ ವ್ಯಕ್ತಿಯಾಗಿ ರವಿಚಂದ್ರನ್‌ ಅವರು ಯಾವ ರೀತಿ ಕಾಣಿಸಿಕೊಂಡರೆ ಚೆನ್ನಾಗಿರುತ್ತದೆ ಎಂಬುದನ್ನು ಮೊದಲೇ ನಿರ್ಧರಿಸಿ ಅವರಿಗೆ ಈ ವಿಶೇಷವಾದ ಕಾಸ್ಟೂ್ಯಮ್‌ ಹಾಕಿದ್ದೇವೆ.
ತುಂಬಾ ಯಂಗ್‌ ಆಗಿ ಕಾಣುತ್ತಾರೆ. ನಿರ್ಮಾಪಕನಾಗಿ ನನಗೆ ರವಿಚಂದ್ರನ್‌ ಅವರ ಈ ಲುಕ್‌ಗಳು ಇಷ್ಟಆಗಿವೆ’ ಎನ್ನುತ್ತಾರೆ ನಿರ್ಮಾಪಕ ಎನ್‌ಎಸ್‌ ರಾಜ್‌ಕುಮಾರ್‌.

Latest Videos

click me!