ಕನ್ನಡ ಚಿತ್ರರಂಗದ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ 'ಟಗರು ಪಲ್ಯ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ್ದಾರೆ.
ಡಾಲಿ ಧನಂಜಯ್ (Dolly Dhananjay) ಬಂಡವಾಳ ಹಾಕಿರುವ ಟಗರು ಪಲ್ಯ ಚಿತ್ರದಲ್ಲಿ ಅಮೃತಾಗೆ ಜೋಡಿಯಾಗಿ ನಾಗಭೂಷಣ್ ಮಿಂಚುತ್ತಿದ್ದಾರೆ.
ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಮೃತಾ ತಮ್ಮ ನ್ಯಾಚುರಲ್ ರಿಯಲ್ ಕೂದಲನ್ನು ಡಿಫರೆಂಟ್ ಆಗಿ ಸ್ಟೈಲ್ ಮಾಡಿದ್ದಾರೆ.
ಇನ್ನೇನು ಸಿನಿಮಾ ರಿಲೀಸ್ ಆಗಬೇಕು ಪ್ರಚಾರ ಶುರು ಆಗಬೇಕು ಅನ್ನೋಷ್ಟರಲ್ಲಿ ಅಮೃತಾ ಕೂದಲು ಕಟ್ ಮಾಡಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ.
ಸೆಲೆಬ್ರಿಟಿ ಹೇರ್ ಸ್ಟೈಲರ್ ಪ್ರಶಾಂತ್ ಬಳಿ ಅಮೃತಾ ಹೇರ್ ಕಟ್ ಮಾಡಿಸಿದ್ದಾರೆ. ಉದ್ದವಾದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ.
ಇಷ್ಟು ಚಿಕ್ಕ ವಯಸ್ಸಿಗೆ ಒಳ್ಳೆ ಯೋಚನೆಗಳು ಒಳ್ಳೆ ಉದ್ದೇಶಗಳನ್ನು ಬೆಳೆಸಿಕೊಂಡಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪ್ರೇಮ್ ದಂಪತಿಗಳನ್ನು ಹೊಗಳಿದ್ದಾರೆ.
ಟಗರು ಪಲ್ಯ ಚಿತ್ರದ ರಿಲಿಕಲ್ ಹಾಡು ಸಖತ್ ವೈರಲ್ ಆಗಿದೆ, ಸೋಷಿಯಲ್ ಮೀಡಿಯಾದಲ್ಲಿ ಅಮೃತಾ ಮಾಡಿರುವ ರೀಲ್ಸ್ ಮತ್ತು ವಿಡಿಯೋ ವೈರಲ್ ಆಗುತ್ತಿದೆ.
Vaishnavi Chandrashekar