10 ವರ್ಷಗಳ ರಿಲೇಷನ್‌ಶಿಪ್‌; ನಟ ದರ್ಶನ್‌ ಜೊತೆಗಿರುವ ಪವಿತ್ರಾ ಗೌಡ ಯಾರು?

First Published | Jan 25, 2024, 9:05 AM IST

ನಟ ದರ್ಶನ್ ಜೊತೆಗಿರುವ ನಟಿ ಪವಿತ್ರಾ ಗೌಡ ಫೋಟೋ ನೋಡಿ ಇಡೀ ಸಾಮಾಜಿಕ ಜಾಲತಾಣವೇ ಶಾಕ್ ಆಗಿದೆ..

ಕನ್ನಡ ಚಿತ್ರರಂಗದ ನಟ ದರ್ಶನ್‌ ಮತ್ತು ನಟಿ ಪವಿತ್ರಾ ಗೌಡರ ಒಟ್ಟಿಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. 

'ಒಂದು ದಶಕ ಕಳೆದಿದೆ, ಹಲವು ವರ್ಷಗಳಿದೆ. 10 ವರ್ಷಗಳ ರಿಲೇಷನ್‌ಶಿಪ್‌. ಥ್ಯಾಂಕ್‌ ಯು' ಎಂದು ಪವಿತ್ರಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Tap to resize

ಈ ಫೋಸ್ಟ್‌ಗೆ ದರ್ಶನ್‌ ಮತ್ತು ಪವಿತ್ರಾ ಗೌಡರ ಮಗಳು ಖುಷಿ ಗೌಡರನ್ನು ಟ್ಯಾಗ್ ಮಾಡಿದ್ದಾರೆ. 10 ವರ್ಷಗಳಲ್ಲಿ ದರ್ಶನ್ ಜೊತೆ ಕ್ಲಿಕ್ ಮಾಡಿಕೊಂಡಿರುವ ಫೋಟೋಗಳು ಹಾಕಿದ್ದಾರೆ.

ಪವಿತ್ರಾ ಗೌಡ ನಟಿ ಕಮ್ ಮಾಡಲ್ ಆಗಿದ್ದು ಕನ್ನಡದ ಛತ್ರಿಗಳು ಸಾರ್ ಛತ್ರಿಗಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅದಾದ ಮೇಲೆ ಅಗಮ್ಯಾ ಚಿತ್ರದಲ್ಲಿದ್ದಾರೆ.

2016ರಲ್ಲಿ ಥ್ರಿಲರ್‌ ಸಿನಿಮಾ 54321 ಚಿತ್ರದ ನಾಯಕಿಯಾಗಿದ್ದರು. ಸಾಗುವ ದಾರಿ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. 'ಪ್ರೀತಿ ಕಿತಾಬು' ಹೆಸರು ತಂದುಕೊಟ್ಟ ಚಿತ್ರ.

 ಈ ಹಿಂದೆ ನಟ ದರ್ಶನ್‌ ಅವರ ಅಕ್ಕ ಮತ್ತು ತಾಯಿ ಜೊತೆ ಪವಿತ್ರಾ ಗೌಡ ಫೋಟೋ ಅಪ್ಲೋಡ್ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದರು. ಆಗ ಯಾವುದೇ ರೀತಿಯ ಸ್ಪಷ್ಟನೆ ನೀಡಿರಲಿಲ್ಲ. 

ಕಳೆದ ಒಂದೆರಡು ವರ್ಷಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪವಿತ್ರಾ ಗೌಡ ದರ್ಶನ್‌ ಜೊತೆಗಿರುವ ಒಂದೊಂದೆ ಫೋಟೋ ಅಪ್ಲೋಡ್ ಮಾಡಿ ಸುಳಿವು ನೀಡುತ್ತಿದ್ದರು. 

ಸದ್ಯ ಪವಿತ್ರಾ ಗೌಡ ಫ್ಯಾಷನ್ ಡಿಸೈನರ್ ಆಗಿದ್ದು ಬೋಟಿಕ್ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗ ಸ್ಟಾರ್ ನಟಿಯರು ಹಾಗೂ ಜನ ಸಾಮಾನ್ಯರಿಗೆ ತಮ್ಮ ಡಿಸೈನರ್ ಉಡುಪುಗಳನ್ನು ಮಾರಾಟ ಮಾಡುತ್ತಾರೆ. 

ಈ ಫೋಸ್ಟ್‌ಗೆ ಕಾಮೆಂಟ್ ಆಫ್ ಮಾಡಿದ್ದು ಅರ್ಮಾನ್ ಮಲಿಕ್ ಮತ್ತು ಶ್ರೇಯಾ ಘೋಷಾಲ್ ಹಾಡಿರುವ 'ಒಂದು ಮಳೆ ಬಿಲ್ಲು ಒಂದು ಮಳೆ ಮೋಡ' ಹಾಡನ್ನು ಹಾಕಿದ್ದಾರೆ. 

Latest Videos

click me!