ನಟ ಡಾಲಿ ಧನಂಜಯ ಅವರು ಫೆಬ್ರವರಿ 15ರ ಸಂಜೆ ಅದ್ದೂರಿಯಾಗಿ ಆರತಕ್ಷತೆ ಆಚರಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ನಡೆದ ಈ ಅದ್ದೂರಿ ಆರತಕ್ಷತೆಗೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಹಿಡಿದು, ಡಿಕೆ ಸುರೇಶ್, ಸಿ ಎನ್ ಅಶ್ವತ್ಥನಾರಾಯಣ, ಮೈಸೂರು ಮಹಾರಾಜ ಯದುವೀರ್, ಬಿವೈ ಯಜುವೇಂದ್ರ ಮುಂತಾದವರು ಆಗಮಿಸಿದ್ದರು. ಕನ್ನಡ ಚಿತ್ರರಂಗದಿಂದ ಮೇಘನಾ ರಾಜ್, ಸಪ್ತಮಿ ಗೌಡ, ಸತೀಶ್ ನೀನಾಸಂ, ಪೂರ್ಣಚಂದ್ರ ಮೈಸೂರು, ನಟಿ ರಕ್ಷಿತಾ ಪ್ರೇಮ್ ಮುಂತಾದವರು ಆಗಮಿಸಿದ್ದರು. ಒಟ್ಟಿನಲ್ಲಿ ಈ ಆರತಕ್ಷತೆಯಲ್ಲಿ ಜನರನ್ನು ನಿಭಾಯಿಸೋದು ಹರಸಾಹಸ ಆಗಿತ್ತು.