ಹೊಸ ಫೋಟೋಶೂಟ್‌ನಲ್ಲಿ ಕಾಟೇರ ನಟಿ: ಬಾಲಿವುಡ್​ ಖ್ಯಾತ ಫೋಟೋಗ್ರಾಫರ್ ಕ್ಯಾಮೆರಾ ಕಣ್ಣಲ್ಲಿ ಅಮ್ಮ-ಮಗಳ ಭರ್ಜರಿ ಪೋಸ್‌

Published : Jul 10, 2024, 07:33 PM ISTUpdated : Jul 11, 2024, 09:15 AM IST

‘ಕಾಟೇರಾ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಖ್ಯಾತ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್‌ ಇದೀಗ ಕಲರ್ ಫುಲ್ ಫೋಟೋಶೂಟ್ ಮೂಲಕ ಮಿರಿ ಮಿರಿ ಮಿಂಚುತ್ತಿದ್ದಾರೆ. 

PREV
16
ಹೊಸ ಫೋಟೋಶೂಟ್‌ನಲ್ಲಿ ಕಾಟೇರ ನಟಿ: ಬಾಲಿವುಡ್​ ಖ್ಯಾತ ಫೋಟೋಗ್ರಾಫರ್ ಕ್ಯಾಮೆರಾ ಕಣ್ಣಲ್ಲಿ ಅಮ್ಮ-ಮಗಳ ಭರ್ಜರಿ ಪೋಸ್‌

ಸೂಪರ್ ಸಕ್ಸಸ್ ಸಿನಿಮಾ ಮೂಲಕವೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಆರಾಧನಾ ರಾಮ್‌ ಮೊದಲ ಸಿನಿಮಾದಲ್ಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ಎರಡನೇ ಸಿನಿಮಾದ ಹುಡುಕಾಟದಲ್ಲಿರುವ ಮಾಲಾಶ್ರೀ ಪುತ್ರಿ ಸದ್ಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
 

26

ಶಾರುಖ್ ಖಾನ್, ಐಶ್ವರ್ಯ ರೈ, ಸಲ್ಮಾನ್, ಹೃತಿಕ್ ಹೀಗೆ ಅನೇಕ ಪ್ರಖ್ಯಾತ ಬಾಲಿವುಡ್ ಕಲಾವಿದರ ಸುಂದರ ಫೋಟೋಗಳನ್ನು ಕ್ಯಾಪ್ಚರ್ ಮಾಡಿರುವ ಡಬೂ ರತ್ನಾನಿ ಇದೀಗ ಕನ್ನಡದ ಕಲಾವಿದೆಯನ್ನು ತಮ್ಮ ಕ್ಯಾಮೆರಾ ಮೂಲಕ ಅದ್ಭುತವಾಗಿ ಸೆರೆ ಹಿಡಿದಿರುವುದು ಹೆಮ್ಮೆಯ ವಿಚಾರವಾಗಿದೆ.

36

ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಮರಾದಲ್ಲಿ ಆರಾಧನಾ ಸುಂದರವಾಗಿ ಸೆರೆಯಾಗಿದ್ದಾರೆ. ಅಂದ ಹಾಗೆ ಆರಾಧನಾ ರಾಣಿಯಂತೆ ಕಂಗೊಳಿಸುತ್ತಿರುವುದು ದಿ ಜ್ಯುವೆಲ್ಲರಿ ಶೋಗಾಗಿ. 

46

ವೆರೈಟಿ ಕಾಸ್ಟೂಮ್‌ನಲ್ಲಿ ಹೆವಿ ಜ್ಯುವೆಲ್ಲರಿ ಧರಿಸಿ ತರಹೇವಾರಿ ಲುಕ್‌ನಲ್ಲಿ ಮಿಂಚಿದ್ದಾರೆ. ಪುತ್ರಿ ಆರಾಧನಾ ಜತೆ ಮಾಲಾಶ್ರೀ ಕೂಡ ಡಬೂ ರತ್ನಾನಿ ಅವರ ಕ್ಯಾಮರಾಗೆ ಮಸ್ತ್ ಪೋಸ್ ನೀಡಿದ್ದಾರೆ. ಅಮ್ಮ ಮಗಳ ಸುಂದರ ಫೋಟೋಗಳನ್ನು ನೋಡಿ ಅಭಿಮಾನಿಗಳು ಬ್ಯೂಟಿಫುಲ್ ಎನ್ನುತ್ತಿದ್ದಾರೆ.

56

'ಕಾಟೇರ' ಬಳಿಕ ಆರಾಧನಾ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಉತ್ತಮ ಸಿನಿಮಾಗಾಗಿ ಎದುರು ನೋಡುತ್ತಿರುವ ಆರಾಧನಾ ಅವರ ಎರಡನೇ ಸಿನಿಮಾ ಯಾವುದು ಎನ್ನುವ ಕುತೂಹಲ ಫ್ಯಾನ್ಸ್‌ಗೆ ಹೆಚ್ಚಾಗಿದೆ.

66

ಸ್ಯಾಂಡಲ್​ವುಡ್​ನ ಕನಸಿನ ರಾಣಿ ಎಂದೆ ಕರೆಸಿಕೊಳ್ಳುವ ಮಾಲಾಶ್ರೀ ಮಗಳು ಆರಾಧನಾ ಅಂದದಲ್ಲಿ ಅಮ್ಮನನ್ನು ಮೀರಿಸುವಂತಿದ್ದಾರೆ. ಆರಾಧನಾ ಬ್ಯೂಟಿಗೆ ಈಗಾಗಲೇ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories