2004ರಲ್ಲಿ ಜೋಶ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಲಯಾಳಂ ನಟಿ ಶಾಮ್ನಾ ಕಾಸೀಮ್ ಉರ್ಫ್ ಪೂರ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರದಲ್ಲಿ ಬಿಗ್ ಬಾಸ್ ರಾಕೇಶ್ ಅಡಿಗ ಅಭಿನಯಿಸಿದ್ದರು.
29
2022ರ ಅಕ್ಟೋಬರ್‌ನಲ್ಲಿ ಶಾಮ್ನಾ ಕಾಸೀಮ್ ಮತ್ತು ಶಾನಿದ್ ಆಸಿಫ್ ಅಲಿ ದುಬೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.
39
2022ರ ಡಿಸೆಂಬರ್ ತಿಂಗಳಿನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಶಾಮ್ನಾ ಸಾಮಾಜಿಕ ಜಾಲತಾಣದಲ್ಲಿ ಸಹಿ ಸುದ್ದಿ ಹಂಚಿಕೊಂಡರು. ನೆಟ್ಟಿಗರಿಂದ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿತ್ತು.
49
2023ರ ಫೆಬ್ರವರಿ 3ರಂದು ಶಾಮ್ನಾ ಕುಟುಂಬಸ್ಥರು ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕೆಂಪು ಬಣ್ಣದ ಸೀರಿಯಲ್ಲಿ ಶಾಮ್ನಾ ಮಿಂಚಿದ್ದರು.
59
ಈಗ 5 ತಿಂಗಳು ತುಂಬಿರುವ ಕಾರಣ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ಪಿಂಕ್ ಬಣ್ಣದ ಗೌನ್‌ನಲ್ಲಿ ಶಾಮ್ನಾ ಕಾಣಿಸಿಕೊಂಡಿದ್ದಾರೆ.
69
'ನಮ್ಮೊಳಗೆ ಪುಟ್ಟ ಜೀವ ಬೆಳೆಯುವುದು ಒಂದು ಮಿರಾಕಲ್, ಜೀವನದಲ್ಲಿ ಪಡೆದಿರುವ ಬೆಸ್ಟ್ ಗಿಫ್ಟ್ ಇದು' ಎಂದು ಶಾಮ್ನಾ ಬರೆದುಕೊಂಡಿದ್ದಾರೆ.
79
ಮದುವೆ ಮಾಡಿಕೊಂಡ 3 ತಿಂಗಳಿಗೆ ಪ್ರೆಗ್ನೆಂಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಎದುರಾಗಿತ್ತು. ಯಾವುದಕ್ಕೂ ಕೇರ್ ಮಾಡದೆ ಶಾಮ್ನಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.
89
ದುಬೈನಲ್ಲಿರುವ ಜೆಬಿಎಸ್ ಗ್ರೂಪ್ ಆಫ್ ಕಂಪನಿಯ ಸಮೂಹ ಕಂಪನಿಗಳ ಸಂಸ್ಥಾಪಕ ಮತ್ತು CEO ಆಗಿದ್ದಾರೆ ಶಾನಿದ್ ಆಸಿಫ್ ಅಲಿ.
99
ಶಾಮ್ನಾ ದುಬೈಗೆ ಗೋಲ್ಡನ್ ವೀಸಾ ಪಡೆಯುವ ವಿಚಾರವಾಗಿ ಶಾನಿದ್ ಆಸಿಫ್ ಜೊತೆ ಒಮ್ಮೆ ಮಾತನಾಡಿದ್ದರು. ಅಲ್ಲಿಂದ ಇಬ್ಬರ ಪರಿಚಯವಾಯ್ತು ಎನ್ನಲಾಗಿದೆ.