ಜಿಮ್ ಮುಗಿಯುತ್ತಿದ್ದಂತೆ ಭೇಟಿ ಮಾಡಲು ಬರುತ್ತಿದ್ದರು, ಕುಣಿದು ಕುಪ್ಪಳಿಸಿದ್ದೀನಿ; ಅಪ್ಪು ಬಗ್ಗೆ ಜೈ ಜಗದೀಶ್ ಪುತ್ರಿ ಪೋಸ್ಟ್

ಅಪ್ಪು ಹುಟ್ಟುಹಬ್ಬದಂತೆ ಮನೆಗೆ ತೆರೆಳಿದ ಹಳೆ ಫೋಟೋಗಳನ್ನು ಮತ್ತೆ ಹಂಚಿಕೊಂಡ ಜೈ ಜಗದೀಶ್ ಪುತ್ರಿ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.

Jai Jagadish daughter Vaisiri post about puneeth rajkumat vcs

ಕನ್ನಡ ಚಿತ್ರರಂಗ ಹಿರಿಯ ಕಲಾವಿದ ಜೈ ಜಗದೀಶ್ ಮತ್ತು ನಟಿ ವಿಜಯಲಕ್ಷ್ಮಿ ಸಿಂಗ್ ಕಿರಿಯ ಪುತ್ರಿ ವೈಸಿರಿ ಇನ್‌ಸ್ಟಾಗ್ರಾಂನಲ್ಲಿ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಹುಟ್ಟುಹಬ್ಬದ ಪೋಸ್ಟ್ ಹಂಚಿಕೊಂಡಿದ್ದಾರೆ.

Jai Jagadish daughter Vaisiri post about puneeth rajkumat vcs

ಹಲವು ವರ್ಷಗಳ ಹಿಂದೆ ಪುನೀತ್‌ ರಾಜ್‌ಕುಮಾರ್‌ರನ್ನು ಹುಟ್ಟುಹಬ್ಬದಂದು ಭೇಟಿ ಮಾಡಿದ್ದು ಹೂಗುಚ್ಚು ಕೊಟ್ಟು ಸಂಭ್ರಮಿಸುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. 


'ಪ್ರತಿ ವರ್ಷ ನಾನು 17 ಮಾರ್ಚ್‌ ದಿನಕ್ಕೆ ಕಾಯುತ್ತಿರುವೆ...ಕಾರಣಾ ನಿಮ್ಮನ್ನು ಭೇಟಿ ನಿಮ್ಮನ್ನು ನೋಡಲು ನಿಮ್ಮನ್ನು ಭೇಟಿ ಮಾಡಲು' ಎಂದು ವೈಸಿರಿ ಬರೆದುಕೊಂಡಿದ್ದಾರೆ. 

'ನೀವು ನನ್ನ ಹೀರೋ, ನನ್ನ ಪ್ರೀತಿ ನನ್ನ ಎಲ್ಲವೂ....ನಾನು ಆದಷ್ಟು ಚೆನ್ನಾಗಿ ಕಾಣಿಸಿಕೊಂಡು ನಿಮ್ಮನ್ನು ಭೇಟಿ ಮಾಡಲು ಕಾಯುತ್ತಿದ್ದೆ'

'ಸರ್‌ ಜಿಮ್ ಮುಗಿಸಿಕೊಂಡು ಇಳಿದು ಬರುವಾಗ ಅವರ ನಗು ನೋಡಲು ಕಾಯುತ್ತಿದ್ದೆ. ಸರ್ ನನ್ನೊಟ್ಟಿಗೆ ಮಾತನಾಡುತ್ತಿದ್ದರೆ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದೆ'

'ಅದು ಪವರ್ ಆಫ್ ಅಪ್ಪು.  ಇಂದು ನಿಮ್ಮ 50ನೇ ಹುಟ್ಟುಹಬ್ಬ. ಒಂದು ಹೇಳುವುದಕ್ಕೆ ಇಷ್ಟ ಪಡುತ್ತೀನಿ ನೀವು ಎಂದೆಂದಿಗೂ ನಮ್ಮೊಟ್ಟಿಗೆ ಇದ್ರಿ. ಥ್ಯಾಂಕ್ಸ್‌ ಯು' ಎಂದಿದ್ದಾರೆ ವೈಸಿರಿ.

Latest Videos

click me!