ಯೋಗದ ಮೂಲಕ ಫಿಟ್ನೆಸ್‌ ಸೀಕ್ರೆಟ್‌ ರಿವೀಲ್ ಮಾಡಿದ ನಟಿ ರಾಧಿಕಾ ನಾರಾಯಣ್!

First Published | Jun 21, 2022, 12:19 PM IST

 ಯೋಗಾಗೆ ಯಾವುದೇ ಧರ್ಮ, ಜಾತಿ ಅಥವಾ ಭಾಷೆಯ ತಡೆ ಇಲ್ಲ ಎಂದು 6 ಆಸನಗಳನ್ನು ಮಾಡಿ ಅದರ ಮಹತ್ವನ್ನು ಸಾರಿದ್ದಾರೆ. 

'ಅಂತಾರಾಷ್ಟ್ರಿಯ ಯೋಗ ದಿನ' ಜೂನ್ 21ರಂದು ಸ್ಯಾಂಡಲ್‌ವುಡ್‌ ನಟಿ ರಾಧಿಕಾ ನಾರಾಯಣ್‌ ಯೋಗಾಸನ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ.

 'ಯೋಗವನ್ನು ಜೀವನದ ಮಾರ್ಗವಾಗಿಸಿ' ಎಂದು ಬರೆದುಕೊಂಡಿದ್ದಾರೆ. ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಯೋಗ ಔಟ್‌ಫಿಟ್‌ ಧರಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ. 

Tap to resize

'ಹೊಸದಾಗಿ ಪ್ರಾರಂಭಿಸಲು ಇದು ಎಂದಿಗೂ ತಡವಾಗಿಲ್ಲ.ಯೋಗವನ್ನು ಪ್ರಾರಂಭಿಸಲು ಇದು ಎಂದಿಗೂ ತಡವಾಗಿಲ್ಲ' ಎಂದು ರಾಧಿಕಾ ಹೇಳಿದ್ದಾರೆ. 

 'ಯೋಗವು ಧರ್ಮ, ಜಾತಿ ಅಥವಾ ಭಾಷೆಯ ಗಡಿಯನ್ನು ಮೀರಿದೆ. ಇದು ಜೀವನದಲ್ಲಿ ನಿಮ್ಮ ದೃಷ್ಟಿಕೋನವನ್ನು ವಿಸ್ತರಿಸುತ್ತದೆ. ನಿಮ್ಮನ್ನು ಆರೋಗ್ಯಕರ ಹಾದಿಯಲ್ಲಿ ಇರಿಸುತ್ತದೆ' ಎಂದಿದ್ದಾರೆ ರಾಧಿಕಾ.
 

 ಹಲವು ವರ್ಷಗಳಿಂದ ರಾಧಿಕಾ ನಾರಾಯಣ್ ಯೋಗಾಭ್ಯಾಸ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಫಿಟ್ನೆಸ್ ಸೀಕ್ರೆಟ್ ರಿವೀಲ್ ಮಾಡುತ್ತಿದ್ದಾರೆ. 
 

 ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಾಧಿಕಾ, ಮೈಗ್ರೇನ್ ಇದ್ದವರು ಯಾವ ಯೋಗಾಸನ ಮಾಡಬೇಕು ಎಂದು ವಿಡಿಯೋ ಮೂಲಕ ಹೇಳಿಕೊಟ್ಟಿದ್ದಾರೆ. 

Latest Videos

click me!