ನಾನು ಲೂಸ್ ಮಾದ ಯೋಗಿ ಅಭಿಮಾನಿ: ನಟ ದುನಿಯಾ ವಿಜಯ್ ಹೀಗೆ ಹೇಳಿದ್ಯಾಕೆ?

Published : Feb 12, 2025, 04:27 PM ISTUpdated : Feb 12, 2025, 04:31 PM IST

ನಾನು ಸದಾ ಅವನ ಜೊತೆಗೆ ನಿಲ್ಲುತ್ತೇನೆ. ಇದೀಗ ಅವನು ಸದಭಿರುಚಿಯ ಸಿನಿಮಾ ಮೂಲಕ ಬಂದಿದ್ದಾನೆ. ಈ ಚಿತ್ರದಲ್ಲಿ ಒಂದೊಳ್ಳೆ ವೈಬ್ ಇದೆ. ಎಲ್ಲರೂ ಹಾರೈಸಿ ಎಂದು ದುನಿಯಾ ವಿಜಯ್ ಹೇಳಿದರು.

PREV
16
ನಾನು ಲೂಸ್ ಮಾದ ಯೋಗಿ ಅಭಿಮಾನಿ: ನಟ ದುನಿಯಾ ವಿಜಯ್ ಹೀಗೆ ಹೇಳಿದ್ಯಾಕೆ?

‘ಸಿದ್ಲಿಂಗು 2’ ಚಿತ್ರದ ಪ್ರೀ ರಿಲೀಸ್ ಈವೆಂಟ್‌ ಒಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಬಹಳ ಸಮಯದ ಬಳಿಕ ದುನಿಯಾ ವಿಜಯ್ ಮತ್ತು ಲೂಸ್‌ ಮಾದ ಯೋಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

26
duniya vijay

ಈ ಸಂದರ್ಭದಲ್ಲಿ ದುನಿಯಾ ವಿಜಯ್, ನಾನು ಯೋಗಿ ಅಭಿಮಾನಿ. ಅವನಿಗೆ ಅದ್ಭುತ ನಟನಾ ಸಾಮರ್ಥ್ಯ ಇದೆ. ಅವನಿಗೆ ಇನ್ನೂ ಒಳ್ಳೆಯ ಕಥೆಗಳು ಸಿಗಬೇಕು, ಅವನು ಅದ್ಭುತ ನಟನಾಗಿ ಹೊರಹೊಮ್ಮಬೇಕು ಎಂಬುದು ನನ್ನಾಸೆ. 

36

ನಾನು ಸದಾ ಅವನ ಜೊತೆಗೆ ನಿಲ್ಲುತ್ತೇನೆ. ಇದೀಗ ಅವನು ಸದಭಿರುಚಿಯ ಸಿನಿಮಾ ಮೂಲಕ ಬಂದಿದ್ದಾನೆ. ಈ ಚಿತ್ರದಲ್ಲಿ ಒಂದೊಳ್ಳೆ ವೈಬ್ ಇದೆ. ಎಲ್ಲರೂ ಹಾರೈಸಿ ಎಂದು ಹೇಳಿದರು.

46

ಯೋಗಿ, ‘ಸಿದ್ಲಿಂಗು 2 ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗೆ ಮತ್ತು ಚಿತ್ರತಂಡಕ್ಕಿದೆ. ನನ್ನನ್ನು ಮತ್ತು ವಿಜಯಪ್ರಸಾದ್‍ ಅವರನ್ನು ಯಾರೂ ನಂಬದಿದ್ದ ಸಮಯದಲ್ಲಿ ಹರಿ ಮತ್ತು ರಾಜು ನಮ್ಮನ್ನು ನಂಬಿ ಚಿತ್ರ ಮಾಡಿದ್ದಾರೆ. ಅವರಿಗೆ ನಾನು ಚಿರಋಣಿ. 
 

56

ನಮ್ಮ ಮಾವ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ. ಇವತ್ತು ಮೊದಲ ಬಾರಿಗೆ ವೇದಿಕೆಯೊಂದರ ಮೇಲೆ ನಿಂತು ಅವರನ್ನು ಮಾವ ಎಂದು ಪ್ರೀತಿಯಿಂದ ಕರೆಯುತ್ತಿದ್ದೇನೆ’ ಎಂದರು.

66

ವಿಜಯಪ್ರಸಾದ್ ನಿರ್ದೇಶನ ಮಾಡಿರುವ, ಶ್ರೀಹರಿ ಮತ್ತು ರಾಜು ಶೇರಿಗಾರ್ ನಿರ್ಮಾಣ ಮಾಡಿರುವ ಈ ಸಿನಿಮಾ ಫೆ.11ರಂದು ಬಿಡುಗಡೆಯಾಗುತ್ತಿದೆ. ನಾಯಕಿ ಪಾತ್ರದಲ್ಲಿ ಸೋನು ಗೌಡ ನಟಿಸಿದ್ದಾರೆ. ಸುಮನ್‍ ರಂಗನಾಥ್‍, ಸೀತಾ ಕೋಟೆ, ಮಹಾಂತೇಶ್‍, ಆ್ಯಂಟೋನಿ ಕಮಲ್‍, ಮಂಜುನಾಥ ಹೆಗಡೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories