ಏರ್ಪೋರ್ಟ್‌ನಲ್ಲಿ ಕೈ ಕೈ ಹಿಡಿದು ಕಾಣಿಸಿಕೊಂಡ ಪ್ರಣಯ ಪಕ್ಷಿಗಳು; ವಿದೇಶಕ್ಕೆ ಹಾರಿದ ಹರಿಪ್ರಿಯಾ-ವಸಿಷ್ಠ

First Published Nov 29, 2022, 3:30 PM IST

ಅಂದಹಾಗೆ ಸ್ಯಾಂಡಲ್ ವುಡ್‌ನ ಈ ಪ್ರಣಯ ಪಕ್ಷಿಗಳು ಸದ್ಯ ವಿದೇಶಕ್ಕೆ ಹಾರಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಇಬ್ಬರೂ ಕೈ ಕೈ ಹಿಡಿದು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. 

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮದುವೆಗೆ ಸಜ್ಜಾಗಿದ್ದಾರೆ. ಮದುವೆ ಯಾವಾಗ ಎನ್ನುವ ಪ್ರಶ್ನೆ ಆಗಾಗ ಹರಿಪ್ರಿಯಾಗೆ ಎದುರಾಗುತ್ತಲೇ ಇತ್ತು. ಇದೀಗ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹರಿಪ್ರಿಯಾ ಪ್ರೀತಿಯಲ್ಲಿರುವ ವಿಚಾರ ಬಹಿರಂಗವಾಗಿದೆ. ಹೌದು ಉಗ್ರಂ ಸುಂದರಿ ಹರಿಪ್ರಿಯಾ ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ಜೊತೆ ಪ್ರೀತಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. 

ಹರಿಪ್ರಿಯಾ ಮತ್ತು ವಸಿಷ್ಠ ಇಬ್ಬರೂ ಪ್ರೀತಿಸುತ್ತಿದ್ದು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ಅಂದಹಾಗೆ ಇಬ್ಬರ ಪ್ರೀತಿ ವಿಚಾರ ಬಹಿರಂಗವಾದ ಬಳಿಕ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. 

ಅಂದಹಾಗೆ ಸ್ಯಾಂಡಲ್ ವುಡ್‌ನ ಈ ಪ್ರಣಯ ಪಕ್ಷಿಗಳು ಸದ್ಯ ವಿದೇಶಕ್ಕೆ ಹಾರಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಇಬ್ಬರೂ ಕೈ ಕೈ ಹಿಡಿದು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಹರಿಪ್ರಿಯಾ ಬಿಳಿ ಬಣ್ಣದ ಡ್ರೆಸ್ ಧರಿಸಿದ್ದರು. ವಸಿಷ್ಠ ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದರು. ಇಬ್ಬರು ಕೈ ಕೈ ಹಿಡಿದು ಓಡಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಅಂದಹಾಗೆ ಇಬ್ಬರೂ ದುಬೈಗೆ ಹಾರಿದ್ದಾರೆ ಎನ್ನಲಾಗಿದೆ. ಮದುವೆಯಾಗುತ್ತಿರುವ ವದಂತಿ ಬೆನ್ನಲ್ಲೇ ಇಬ್ಬರೂ ದುಬೈ ಪ್ರವಾಸ ಕೈಗೊಂಡಿದ್ದಾರೆ. ಅಂದಹಾಗೆ ಇಬ್ಬರೂ ಮದುವೆ ಶಾಪಿಂಗ‌್‌ಗೆ ದುಬೈಗೆ ಹಾರಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. 

ಹರಿಪ್ರಿಯಾ ಮತ್ತು ವಸಿಷ್ಠಿ ಇಬ್ಬರೂ ಪ್ರೀತಿ ವಿಚಾರ ಬಹಿರಂಗ ಪಡಿಸುವ ಮೊದಲು  ಆಗಾಗ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಆದರೆ ಎಲ್ಲಿಯೂ ಇಬ್ಬರೂ ಪ್ರೀತಿ ಬಗ್ಗೆ ಸುಳಿವು ನೀಡಿರಲಿಲ್ಲ. ಇದೀಗ ಇಬ್ಬರ ಫೋಟೋಗಳು ವೈರಲ್ ಆಗುತ್ತಿವೆ. ಅಂದಹಾಗೆ ಇಬ್ಬರೂ ಒಬ್ಬರಿಗೊಬ್ಬರು ಪಾರ್ಟನರ್ ಅಂತನೇ ಕರೆಯುತ್ತಾರಂತೆ. 

ಇತ್ತೀಚಿಗಷ್ಟೆ ಪರಿಪ್ರಿಯಾ ಮೂಗು ಚುಚ್ಚಿಕೊಂಚಿದ್ದರು. ವಿಡಿಯೋವನ್ನು ಶೇರ್ ಮಾಡಿದ್ದರು. ಆ ವೇಳೆ ಹರಿಪ್ರಿಯಾ ಜೊತೆ ವಸಿಷ್ಠ ಕೂಡ ಇದ್ದರು. ಮೂಗು ಎಲ್ಲಿ ಚುಚ್ಚಬೇಕೆಂದು ಗುರುತು ಮಾಡಿದ್ದೆ ವಸಿಷ್ಠ. ಮೂಗು ಚುಚ್ಚಿದ ಬಳಿಕ ವಸಿಷ್ಠ ಹರಿಪ್ರಿಯಗೆ ಮುತ್ತು ನೀಡಿ ಸಮಾಧಾನ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಆದರೆ ವಸಿಷ್ಠ ಮುಖ ಎಲ್ಲೂ ರಿವೀಲ್ ಆಗಿರಲಿಲ್ಲ. 

ಹರಿಪ್ರಿಯಾ ಮತ್ತು ವಸಿಷ್ಠ ಇಬ್ಬರೂ ಡಿಸೆಂಬರ್ ಕೊನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಜನವರಿ ಅಥವಾ ಫಬ್ರವರಿಯಲ್ಲಿ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಆದರೆ ಪ್ರೀತಿ, ಮದುವೆ ಬಗ್ಗೆ ಇಬ್ಬರೂ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.  

click me!