ಗಣೇಶ್ ಸಖಿಯರ ಜೊತೆ ರೊಮ್ಯಾನ್ಸ್ ಮಾಡ್ತಿದ್ರೆ, ಶಿಲ್ಪಾ ಗಣೇಶ್ ವೈಷ್ಣೋ ದೇವಿ ದರ್ಶನ ಮಾಡಿ ಬಂದ್ರು!

First Published | May 30, 2024, 5:48 PM IST

ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ತಮ್ಮ ಸ್ನೇಹಿತರ ಜೊತೆ ವೈಷ್ಣೋ ದೇವಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ. 
 

ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ಸದ್ಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದಲ್ಲಿನ ಮೈ ಮ್ಯಾರೇಜ್ ಫಿಕ್ಸ್ ಹಾಡಿಗೆ ಎಂಟು ಜನ ಹುಡುಗಿಯರೊಂದಿಗೆ ಡುಯೆಟ್ ಹಾಡಿದ್ದರು ಗಣೇಶ್. 
 

ಕೃಷ್ಣಂ ಪ್ರಣಯ ಸಖಿ (Krishnam Pranaya Sakhi) ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಜೊತೆಗೆ ಮಾಳವಿಕಾ ನಾಯರ್ ಮತ್ತು ಶರಣ್ಯ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಗಣೇಶ್ ಅವರು ಕೃಷ್ಣಂ ಪ್ರಣಯ ಸಖಿ ಎಂದು ಸಖಿಯರೊಂದಿಗೆ ರೊಮ್ಯಾನ್ಸ್ ಮಾಡಿದ್ರೆ, ಅವರ ಪತ್ನಿ ದೇಗುಲ ದರ್ಶನ ಮಾಡ್ತಿದ್ದಾರೆ. 
 

Tap to resize

ಹೌದು ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ (Shilpa Ganesh) ತಮ್ಮ ಸ್ನೇಹಿತರ ಜೊತೆಗೆ ಜಮ್ಮು ಕಾಶ್ಮೀರದಲ್ಲಿರುವ ಪ್ರಸಿದ್ಧ ವೈಷ್ಣೋದೇವಿ ಮಂದಿರಕ್ಕೆ ಭೇಟಿ ಕೊಟ್ಟು ದೇವಿ ದರ್ಶನ ಪಡೆದು ಬಂದಿದ್ದಾರೆ. ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಕೆಂಪು ಬಣ್ಣದ ಸಲ್ವಾರ್ ತೊಟ್ಟು, ಅದಕ್ಕೆ ಕೆಂಪು ಬಣ್ಣದ ಮಾತಾಜಿಯ ದುಪಟ್ಟಾ ಧರಿಸಿ, ಹಣೆ ಮೇಲೆ ಜೈ ಮಾತಾದಿ ಎನ್ನುವ ಕೆಂಪು ಪಟ್ಟಿ ಧರಿಸಿ, ಕೆಂಪು ಕುಂಕುಮ ಹಚ್ಚಿ ಸ್ನೇಹಿತರಾದ ಶಾರದಾ ನಾಯ್ಕ್ ಮತ್ತು ಪವಿತ್ರಾ ಎನ್ನುವವರ ಜೊತೆ ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದಾರೆ. 
 

ಶಿಲ್ಪಾ ಅವರು ತಮ್ಮ ಸ್ನೇಹಿತರ ಜೊತೆಗಿನ ಫೋಟೋಗಳು, ವೈಷ್ಣೋದೇವಿ ಮಂದಿರದ ಫೋಟೋಗಳು ಮತ್ತು ತಾವು ಆರತಿ, ಭಜನೆಯಲ್ಲಿ ಮಗ್ನರಾಗಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ವೈಷ್ಣೋದೇವಿಗೆ ತೆರಳುವ ಮೂಲಕ ತಮ್ಮ ಬಹು  ದಿನಗಳ ಕನಸು ನನಸು ಮಾಡಿದ್ದಾರೆ. 
 

ಶಿಲ್ಪಾ ಗಣೇಶ್ ಅವರ ಫೋಟೋ ನೋಡಿ, ಅವರ ಆಪ್ತರಾಗಿರುವ ನಟಿ ಹರ್ಷಿಕಾ ಪೂಣಚ್ಚ (Harshika Poonaccha), ಕೊನೆಗೂ ವೈಷ್ಣೋ ದೇವಿ ದರ್ಶನ ಪಡೆದು ಬಂದ್ರಲ್ಲ, ನಮಗೂ ದೇವರ ಆಶೀರ್ವಾದ ಇರಲಿ ಎಂದಿದ್ದಾರೆ. 
 

ಶಿಲ್ಪಾ ಗಣೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಹೆಚ್ಚಾಗಿ ತಮ್ಮ ಸ್ನೇಹಿತರೊಂದಿಗಿನ ಪಾರ್ಟಿ, ಪೂಜೆ, ಮಗಳ, ಮಗನ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

Latest Videos

click me!