ಚಂದನವನದ ಗೋಲ್ಡನ್ ಗರ್ಲ್ ಅಮೂಲ್ಯ (Golden Queen Amulya) ಅವರ ಮುದ್ದಿನ ಮಕ್ಕಳಾದ ಅಥರ್ವ್ ಮತ್ತು ಆಧವ್ ಇಂದು ಅಂದರೆ ಮಾರ್ಚ್ 1 ರಂದು ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
28
ಅಥರ್ವ್ ಮತ್ತು ಆಧವ್ ಇಂದು ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ಮುದ್ದಾದ ಫೋಟೊ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
38
ತಮ್ಮ ಇನ್’ಸ್ಟಾಗ್ರಾಂನಲ್ಲಿ ಅಮೂಲ್ಯ ಫೋಟೊಗಳ ಜೊತೆಗೆ Happy birthday ಅಥರ್ವ್ ಮತ್ತು ಆಧವ್.. ನಮ್ಮ ಸರ್ವಸ್ವ ಎಂದು ಬರೆದುಕೊಂಡಿದ್ದು, ಅಭಿಮಾನಿಗಳು ಸಹ ಮುದ್ದು ಮಕ್ಕಳಿಗೆ ಶುಭಾಶಯ ಕೋರಿದ್ದಾರೆ.
48
ಫೋಟೋ ಶೂಟ್ ಗಾಗಿ ಎಲ್ಲರೂ ಒಂದೇ ರೀತಿಯ ಉಡುಗೆ ಧರಿಸಿದ್ದಾರೆ. ಅಮೂಲ್ಯ ಕಪ್ಪು ಬಣ್ಣದ ಗೌನ್ ಧರಿಸಿದ್ರೆ, ಜಗದೀಶ್ ಹಾಗೂ ಮಕ್ಕಳಾದ ಅಥರ್ವ್ ಮತ್ತು ಆಧವ್ ಕಪ್ಪು ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ.
58
ಬಾಲನಟಿಯಾಗಿ ಸಿನಿಮಾ ಇಂಡಷ್ಟ್ರಿಗೆ ಎಂಟ್ರಿ ಕೊಟ್ಟ ನಟಿ ಅಮೂಲ್ಯ, ಚೆಲುವಿನ ಚಿತ್ತಾರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಭರ್ತಿ ಪಡೆದರು. ಈ ಸಿನಿಮಾದಿಂದಾಗಿಯೇ ನಟಿಗೆ ಗೋಲ್ಡನ್ ಗರ್ಲ್ ಎನ್ನುವ ಹೆಸರು ಬಂತು.
68
ನಾನು ನನ್ನ ಕನಸು, ಶ್ರಾವಣಿ ಸುಬ್ರಹ್ಮಣ್ಯ (Shravani Subramanya), ಗಜಕೇಸರಿ ಹಾಗೂ ಮಾಸ್ತಿ ಗುಡಿಯಂತಹ ಹಿಟ್ ಸಿನಿಮಾಗಳನ್ನು ನೀಡಿದ್ದ ಅಮೂಲ್ಯ, 2017 ರಲ್ಲಿ ಮುಗುಳು ನಗೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದೇ ಕೊನೆ ಬಳಿಕ ಸಿನಿಮಾದಲ್ಲಿ ನಟಿಸಿಲ್ಲ.
78
ಮದುವೆಯಾದ ಬಳಿಕ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದ ನಟಿ, ಸದ್ಯ ಗಂಡ, ಸಂಸಾರ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಕ್ಕಳ ಜೊತೆಯೇ ನಟಿ ಹೆಚ್ಚಾಗಿ ಸಮಯ ಕಳೆಯುತ್ತಿರುತ್ತಾರೆ.
88
ನಟಿ ಅಮೂಲ್ಯ ಮತ್ತೆ ಸಿನಿಮಾಗೆ ಕಂ ಬ್ಯಾಕ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಸಹ ಕೇಳಿ ಬರುತ್ತಿವೆ. ಕರವಾಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿತ್ತು, ಆದರೆ ಆ ಸಿನಿಮಾಗೆ ಈಗಾಗಲೇ ನಾಯಕಿಯ ಆಯ್ಕೆಯಾಗಿದೆ. ಇನ್ನು ನಟಿ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ? ಅನ್ನೋದರ ಬಗ್ಗೆ ಮಾಹಿತಿ ಇಲ್ಲ.