Sudeep as Singer: ಕ್ರಿಕೆಟರ್, ನಿರೂಪಕ, ಚೆಫ್, ಸುದೀಪ್ ಕಾಣಿಸ್ತಿದ್ದಾರೆ…. ಗಾಯಕ ಕಿಚ್ಚ ಮಾತ್ರ ಮಿಸ್ಸಿಂಗ್!

Published : Jun 25, 2025, 04:03 PM ISTUpdated : Jun 25, 2025, 04:11 PM IST

ಕಿಚ್ಚ ಸುದೀಪ ಕನ್ನಡ ಚಿತ್ರರಂಗದ ಅದ್ಭುತ ನಟ ನಿರೂಪಕ, ಗಾಯಕರೂ ಹೌದು, ಆದರೆ ಇತ್ತೀಚಿನ ದಿನಗಳಲ್ಲಿ ಸಿಂಗರ್ ಸುದೀಪ್ ರನ್ನು ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. 

PREV
18

ಕನ್ನಡ ಚಿತ್ರರಂಗದ ಮೇರು ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ಗಾಯಕ ಒಟ್ಟಲ್ಲಿ ಸಕಲಾಕಲವಲ್ಲಭ ಅಂದರೆ ಅದು ಕಿಚ್ಚ ಸುದೀಪ್ (Kiccha Sudeep). ನಟನಾಗಿ ಕಿಚ್ಚನನ್ನು ಮೆಚ್ಚಿಕೊಳ್ಳದವರೇ ಇಲ್ಲ, ಅವರ ಸಂಭಾಷಣೆ, ನಟನೆ, ಸ್ಟೈಲ್ ಕಂಡ್ರೆ ಜನರಿಗೆ ಸಿಕ್ಕಾಪಟ್ಟೆ ಇಷ್ಟ.

28

ಅದೇ ರೀತಿ ನಿರ್ದೇಶ, ನಿರ್ಮಾಪಕ ಸುದೀಪರನ್ನು ಸಹ ಜನ ಇಷ್ಟ ಪಟ್ಟಿದ್ದಾರೆ. ಮೈ ಆಟೋಗ್ರಾಫ್, ಮಾಣಿಕ್ಯ, ನಂ 73 ಶಾಂತಿ ನಿವಾಸ, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ (Just Math Mathalli), ಕೆಂಪೇ ಗೌಡ ಇವೆಲ್ಲಾ ಕಿಚ್ಚ ಸುದೀಪ ಕಥೆ ಬರೆದು ನಿರ್ದೇಶನ ಮಾಡಿರುವ ಸಿನಿಮಾಗಳು. ಎಲ್ಲವೂ ಸೂಪರ್ ಹಿಟ್.

38

ಇನ್ನು ಕಿಚ್ಚ ಒಬ್ಬ ಅದ್ಭುತ ಕ್ರಿಕೇಟರ್ (cricketer) ಅನ್ನೋದನ್ನು ನೀವು ಸಿಸಿಎಲ್ ನಲ್ಲಿ ನೋಡಿರಬಹುದು. ಕಿಚ್ಚನ ಕ್ಯಾಪ್ಟನ್ಸಿಯಲ್ಲಿ ನಮ್ಮ ತಂಡ ಹಲವು ಮ್ಯಾಚ್ ಗಳನ್ನು ಕೂಡ ಗೆದ್ದಿದೆ. ಇವರೊಬ್ಬ ಅಪ್ಪಟ ಕ್ರಿಕೇಟರ್.

48

ಕಿಚ್ಚ ಸುದೀಪ್ ನಿರೂಪಣಾ ಶೈಲಿಗೂ ಮನಸೋಲದವರು ಇಲ್ಲ. ಬಿಗ್ ಬಾಸ್ (Bigg Boss Kannada) ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಇದ್ದರೇನೆ ಅದಕ್ಕೊಂದು ಕಳೆ. ಅವರು ಮಾತನಾಡುವ ಶೈಲಿ, ಅವಳ ಸ್ಟೈಲ್, ವಾರಾಂತ್ಯದಲ್ಲಿ ಕಿಚ್ಚನ ಪಂಚಾಯಿತಿಗೆ ಜನ ಕಾಯುತ್ತಿರುತ್ತಾರೆ.

58

ಇದಲ್ಲದೇ ಕಿಚ್ಚನ ನಳ ಪಾಕದ (Chef)ಬಗ್ಗೆ ಎರಡು ಮಾತೇ ಇಲ್ಲ, ಯಾಕಂದ್ರೆ, ಪ್ರತಿಯೊಂದು ಬಿಗ್ ಬಾಸ್ ಸೀಸನ್ ನಲ್ಲೂ ಸುದೀಪ್ ತಮ್ಮ ಕೈಯಾರೆ ಆಹಾರ ತಯಾರಿಸಿ, ಸ್ಪರ್ಧಿಗಳಿಗೆ ನೀಡುತ್ತಾರೆ. ಅಷ್ಟೇ ಯಾಕೆ ತಮ್ಮ ಹೆಚ್ಚಿನ ಸಮಯವನ್ನು ಕಿಚ್ಚ ಅಡುಗೆ ಮಾಡೊದರಲ್ಲೇ ಕಳೆಯುತ್ತಾರೆ.

68

ಕಿಚ್ಚ ಸುದೀಪ್ ನಟನಾಗಿ, ನಿರ್ದೇಶಕನಾಗಿ, ಕ್ರಿಕೇಟರ್ ಆಗಿ, ನಿರೂಪಕನಾಗಿ ಅಷ್ಟೇ ಯಾಕೆ ಶೆಫ್ ಆಗಿ ಕೂಡ ಕಾಣಿಸುತ್ತಿದ್ದಾರೆ. ಆದರೆ ಕಿಚ್ಚನೊಳಗಿರುವ ಅದ್ಭುತ ಗಾಯಕ (singer Kiccha) ಮಾತ್ರ ಹಲವು ವರ್ಷಗಳಿಂದ ಕಣ್ಮರೆಯಾಗಿದ್ದಾನೆ. ಹಾಗಾಗಿ ಅಭಿಮಾನಿಗಳು ಇನ್ನು ಯಾವಾಗ ನಾವು ಕಿಚ್ಚನನ್ನು ಗಾಯಕನಾಗಿ ನೋಡುತ್ತೀವಿ ಎಂದು ಕಾಯ್ತಿದ್ದಾರೆ.

78

ಕಿಚ್ಚ ಸುದೀಪ್ ಅವರು ಗಾಯಕರಾಗಿ ಸುಮಾರು 20 ಹಾಡುಗಳನ್ನು ಹಾಡಿದ್ದಾರೆ. ಸೊಂಟದ ವಿಷ್ಯ ಬೇಡವೊ ಶಿಷ್ಯ, ಇವತ್ತಿಗೂ ಕಿಕ್ ಕೊಡುವ ಹಾಡು, ಇದಲ್ಲದೇ ಓ ಸೋನಾ, ವಸಂತಮಾಸದಲಿ ಒಂದು ಮಧ್ಯ ರಾತ್ರೀಲಿ ಹಾಡು ಪ್ರೀತಿಯಲ್ಲಿ ಬೀಳುವಂತೆ ಮಾಡಿದ್ರೆ, ಡವ್ ಡವ್ ದುನಿಯಾ, ಜಿಂತಾಥ ಹಾಡು ಜನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

88

ಆದರೆ 2017ರ ಬಳಿಕ ಕಿಚ್ಚ ಸುದೀಪ್ ಯಾವುದೇ ಸಿನಿಮಾಗಳಿಗೂ ಹಾಡು ಹಾಡಿಲ್ಲ. ಹಾಗಾಗಿ ಅಭಿಮಾನಿಗಳು ಗಾಯಕ ಸುದೀಪ್ ರನ್ನು ಮಿಸ್ ಮಾಡುತ್ತಿದ್ದಾರೆ. ಯಾವಾಗ ಕಿಚ್ಚ ಧ್ವನಿಯಲ್ಲಿ ಮತ್ತೊಂದು ಹಾಡು ಬರುತ್ತೆ ಎಂದು ಕಾಯುತ್ತಿದ್ದಾರೆ ಜನ.

Read more Photos on
click me!

Recommended Stories