ಸಾನ್ಯಾ ಅಯ್ಯರ್ ಹೊಸ ಅವತಾರ ನೋಡಿ ಮಿಯಾ ಖಲೀಫಾ ನೆನಪು ಮಾಡ್ಕೊಂಡ್ರು ಪಡ್ಡೆ ಹೈಕ್ಳು!

First Published | Nov 11, 2024, 2:15 PM IST

ಪುಟ್ಟ ಗೌರಿಯ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಗುರುತೇ ಸಿಗದಷ್ಟು ಬದಲಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 
 

ಪುಟ್ಟಗೌರಿಯ ಮದುವೆ ಮೂಲಕ ಕಿರುತೆರೆಯಲ್ಲಿ ಮಿಂಚಿ, ಗೌರಿಯಾಗಿ ಹಿರಿತೆರೆಯಲ್ಲಿ ಮಿಂಚಿದ ಸ್ಯಾಂಡಲ್ ವುಡ್ ಬೆಡಗಿ ಸಾನ್ಯಾ ಅಯ್ಯರ್ ಹಿಂದೆಂದೂ ಕಂಡಿರದ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 
 

ಬಿಗ್ ಬಾಸ್ ಸೀಸನ್ 9 ರ ಮೂಲಕ ಜನಪ್ರಿಯತೆ ಪಡೆದ ಬೆಡಗಿ ಸಾನ್ಯಾ ಅಯ್ಯರ್ (Saanya Iyer), ನಂತರ ಗೌರಿ ಸಿನಿಮಾ ಮೂಲಕ ಕೊಂಚ ಸದ್ದು ಮಾಡಿದ್ದರು, ತದ ನಂತರ ವಿದೇಶದಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡ್ತಿದ್ದ ನಟಿ ಅವಾಗವಾಗ ಕಾಣಿಸಿಕೊಳ್ಳುತ್ತಿದ್ದುದು ಸೋಶಿಯಲ್ ಮೀಡಿಯಾದಲ್ಲಿ ಮಾತ್ರ. 

Tap to resize

ಕಪ್ಪು ಬಣ್ಣದ ಮಿನಿ ಸ್ಕರ್ಟ್/ಶಾರ್ಟ್ಸ್ ಧರಿಸಿ, ಅದರ ಮೇಲೋಂದು ನ್ಯೂಡ್ ಕಲರ್ ಕ್ರಾಪ್ ಟಾಪ್ ಧರಿಸಿದ್ದಾರೆ. ಅದಕ್ಕೆ ಮ್ಯಾಚ್ ಆಗುವಂತೆ ಫ್ರಂಟ್ ಕಟ್ ಮಾಡಿರೋ ಹೇರ್ ಸ್ಟೈಲ್ ಮಾಡಿಸಿಕೊಂಡು, ಹೈ ಪಾನಿಟೇಲ್ ಕಟ್ಟಿ, ಕಣ್ಣಿಗೊಂದು ದೊಡ್ಡದಾದ ಕನ್ನಡಕ ಹಾಕಿದ್ದಾರೆ. 
 

ಈ ಫೋಟೊಗಳಲ್ಲಿ ಸಾನ್ಯಾ ಹಿಂದೆಂದೂ ಕಂಡಿರದ ವಿಶೇಷ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ನಟ ಹಾಗೂ ಬಿಗ್ ಬಾಸ್ ಸಹ ಸ್ಪರ್ಧಿ ರೂಪೇಶ್ ಶೆಟ್ಟಿ ಹಾರ್ಟ್ ಇಮೋಜಿ ಕಾಮೆಂಟ್ ಮಾಡಿದ್ದಾರೆ. 
 

ಇನ್ನು ಪಡ್ಡೆ ಹುಡುಗರಂತೂ ಸಾನ್ಯಾ ಹೊಸ ಲುಕ್ ನೋಡಿ, ಮಾಜಿ ನೀಲಿ ಚಿತ್ರ ತಾರೆ ಮಿಯಾ ಖಲೀಫಾರನ್ನು (Mia Khalifa) ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಇನ್ನೂ ಕೆಲವರು ಅರಿಯಾನ ಗ್ರಾಂಡೆ ತರ ಕಾಣಿಸ್ತಿದ್ದಾರೆ ಅಂದ್ರೆ ಮತ್ತೆ ಕೆಲವರು ರಾಖಿ ಸಾವಂತ್ ತರ ಕಾಣಿಸ್ತಿದ್ದೀರಿ ಎಂದಿದ್ದಾರೆ. 
 

Latest Videos

click me!