ದೇವರು ರುಜು ಮಾಡಿದನು ಚಿತ್ರಕ್ಕೆ ಸಿಂಪಲ್ ಸುನಿಗೆ ಸಿಕ್ಕಿದ್ಲು ಮಂಗಳೂರಿನ ವಿಶ್ವಸುಂದರಿ!

Published : Oct 19, 2024, 06:56 PM IST

ಮಿಸ್ ಯೂನಿವರ್ಸ್ ದಿವಿತಾ ರೈ, ಸಿಂಪಲ್ ಸುನಿ ನಿರ್ದೇಶನದ ಮುಂಬರುವ ಚಿತ್ರದಲ್ಲಿ ಗಾಯಕಿ ಇದಿತಾ ರಾಯ್ಕರ್ ಪಾತ್ರದಲ್ಲಿ ನಟಿಸಲಿದ್ದಾರೆ. ಮಂಗಳೂರು ಮೂಲದ ದಿವಿತಾ ರೈ ಅವರ ಕನ್ನಡ ಚಿತ್ರರಂಗಕ್ಕೆ ಇದು ಪಾದಾರ್ಪಣೆ.

PREV
16
ದೇವರು ರುಜು ಮಾಡಿದನು ಚಿತ್ರಕ್ಕೆ ಸಿಂಪಲ್ ಸುನಿಗೆ ಸಿಕ್ಕಿದ್ಲು ಮಂಗಳೂರಿನ ವಿಶ್ವಸುಂದರಿ!

ಸಿಂಪಲ್‌ ಸುನಿ ನಿರ್ದೇಶನದ ಮುಂದಿನ ಸಿನಿಮಾ ಘೋಷಣೆಯಾಗಿದೆ. ಕುವೆಂಪು ಅವರ ಸಾಲುಗಳನ್ನು ಬಳಸಿಕೊಂಡು ಸಿನಿಮಾ ಟೈಟಲ್‌ ಘೋಷಣೆ ಮಾಡಿದ್ದಾರೆ. 2022ರ ಮಿಸ್‌ ಯುನಿವರ್ಸ್ ಆಗಿದ್ದ ಮಂಗಳೂರು ಮೂಲದ ದಿವಿತಾ ರೈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ಗಾಯಕಿಯ ಪಾತ್ರ ಮಾಡಲಿದ್ದು, ಇದಿತಾ ರಾಯ್ಕರ್‌ ಪಾತ್ರ ನಿರ್ವಹಿಸಲಿದ್ದಾರೆ ಎಂದು ಸಿಂಪಲ್‌ ಸುನಿ ಘೋಷಿಸಿದ್ದಾರೆ.

26

ಮಂಗಳೂರಿನಲ್ಲಿ ಜನಿಸಿದ ದಿವಿತಾ ರೈ,  ಮುಂಬೈನ ಸರ್ ಜೆಜೆ ಕಾಲೇಜ್ ಆಫ್ ಆರ್ಕಿಟೆಕ್ಚರ್‌ನಿಂದ ಪದವಿ ಪಡೆದಿದ್ದಾರೆ ಮತ್ತು ಚಿತ್ರದ ವಿನ್ಯಾಸದಲ್ಲಿ ಸಹಾಯ ಮಾಡಿದರೂ ಸಹ, ಅವರು ತಮ್ಮ ಮಿಸ್ ಯೂನಿವರ್ಸ್ ಕನಸುಗಳನ್ನು ಎಂದಿಗೂ ಬಿಟ್ಟಿರಲಿಲ್ಲ.

36

2021 ರಲ್ಲಿ, ಅವರು ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರು, ಮಿಸ್ ಯೂನಿವರ್ಸ್ ಹರ್ನಾಜ್ ಸಂಧುಗೆ ಸೋತರು ನಂತರ ಅವರು ಮರು ವರ್ಷದ ಮಿಸ್ ದಿವಾ 2022 ಸ್ಪರ್ಧೆಯಲ್ಲಿ ಭಾಗವಹಿಸಿದರು.

46

ಅವರು ವೃತ್ತಿಯಲ್ಲಿ ಮಾಡೆಲ್ ಮತ್ತು ಆರ್ಕಿಟೆಕ್ಚರ್‌ ಆಗಿದ್ದಾರೆ.  ಅದರೊಂದಿಗೆ ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಚಿತ್ರಕಲೆ, ಆಂಡ್ರಿಯಾ ಡಿಂಗ್ ಅವರ ಸಂಗೀತವನ್ನು ಆಲಿಸುವುದು ಸೇರಿದಂತೆ ಹಲವು ಹವ್ಯಾಸಗಳನ್ನು ಹೊಂದಿದ್ದಾರೆ.

56

ದಿವಿತಾ ರೈಗೆ 26 ವರ್ಷ. ಕನ್ನಡದಲ್ಲಿ ಇವರಿಗೆ ಇದು ಮೊದಲ ಸಿನಿಮಾವಾದರೂ ಹಿಂದಿಯಲ್ಲಿ ಲವ್‌ ಸ್ಟೋರಿ ಆಫ್‌ ನೈಂಟೀಸ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಇನ್ನಷ್ಟೇ ರಿಲೀಸ್‌ ಆಗಬೇಕಿದೆ. ಇದರಲ್ಲಿ ಅಕ್ಷಯ್‌ ಆನಂದ್‌, ಅಧ್ಯಾಯನ್‌ ಸುಮನ್‌ ಹಾಗೂ ನೀಲು ಕೊಹ್ಲಿ ನಟಿಸಿದ್ದಾರೆ.

66

ಇನ್ನು ಸಿಂಪಲ್‌ ಸುನಿ ತಮ್ಮ ಚಿತ್ರದಲ್ಲಿ ಹೊಸ ಹೊಸ ಹೀರೋಯಿನ್‌ಗಳನ್ನು ಪರಿಚಯಿಸುವ ಕೆಲಸವನ್ನು ಈ ಬಾರಿಯೂ ಮುಂದುವರಿಸಿದ್ದಾರೆ. ಶ್ವೇತಾ ಶ್ರೀವಾತ್ಸವ್‌, ಮಲ್ಲಿಕಾ ಸಿಂಗ್‌, ಸ್ವಾತಿಷ್ಟಾ ಕೃಷ್ಣನ್‌ ಅವರು ಸಿನಿಮಾಗೆ ಪರಿಚಯಿಸಿದ್ದರು. ಈಗ ದಿವಿತಾ ರೈ ಹೊಸ ಸೇರ್ಪಡೆಯಾಗಿದ್ದಾರೆ.

click me!

Recommended Stories