ನಿನ್ನ ಸನಿಹಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಧನ್ಯಾ ರಾಮ್‌ಕುಮಾರ್ ಸದ್ಯ ಸಿಕ್ಕಾಪಟ್ಟೆ ಬೇಡಿಕೆಯಲ್ಲಿ ಇರುವ ನಟಿ ಎನ್ನಬಹುದು.
26
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಧನ್ಯಾ ರಾಮ್‌ಕುಮಾರ್ ಭುಜದ ಮೇಲೆ 'ಪ್ರಶ್ನೆ ಚಿನ್ನೆ' ಇರುವ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಯಾಕೆ ಇದನ್ನು ಹಾಕಿಸಿಕೊಂಡಿರುವುದು ಎಂದು ರಿವೀಲ್ ಮಾಡಿದ್ದಾರೆ.
36
'ಅದು ನಿಜಕ್ಕೂ question ಮಾರ್ಕ್. ಮುಂದೆ ನನ್ನ ಜೀವನದಲ್ಲಿ ನಿಜವಾದ ಪ್ರೀತಿ ಸಿಕ್ಕಾಗ ನಾನು ಮತ್ತೊಂದು ಕ್ವಷನ್ ಮಾರ್ಕ್ ಪಕ್ಕದಲ್ಲಿ ಹಾಕೋಂಡು ಹಾರ್ಟ್ ಮಾಡ್ಕೊಳ್ಳುತ್ತೀನಿ' ಎಂದು ಖಾಸಗಿ ಸಂದರ್ಶನದಲ್ಲಿ ಧನ್ಯಾ ಮಾತನಾಡಿದ್ದಾರೆ.
46
ಅಷ್ಟಕ್ಕೂ ಧನ್ಯಾ ಮೇಲೆ ಕೊಟ್ಟಿರುವ ಉತ್ತರ ಹಾಗೆ ತಮಾಷೆ ಮಾಡಲು. ಆದರೆ ನಿಜವಾದ ಕಾರಣ ಏನೆಂದರೆ ಧನ್ಯಾ ಬಾಲ್ಯದಿಂದ ಕ್ಯೂರಿಯಾಸಿಟಿ ಕ್ಯಾಟ್ ಅಂತೆ. ಪ್ರತಿಯೊಬ್ಬರ ಬಗ್ಗೆ ಪ್ರಶ್ನೆ ಮಾಡುತ್ತೀನಿ ಅದರ ಪ್ರತಿನಿಧಿ ಈ ಟ್ಯಾಟೂ.
56
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಧನ್ಯಾ ರಾಮ್‌ಕುಮಾರ್ ಅಪ್ಲೋಡ್ ಮಾಡಿರುವ ಹಲವು ಫೋಟೋಗಳಲ್ಲಿ ಈ ಟ್ಯಾಟೂ ಹೈಲೈಟ್ ಆಗಿದೆ. ಇನ್ನು ಇದನ್ನು ಹೊಸ ಟ್ರೆಂಡ್ ಮಾಡುವುದರಲ್ಲಿ ಅನುಮಾನವಿಲ್ಲ.
66
ನಿನ್ನ ಸನಿಹಕೆ, ಹೈಡ್ ಅಂಡ್ ಸೀಕ್, ದಿ ಜಡ್ಜ್‌ಮೆಂಟ್, ಪೌಡರ್, ಕಾಲಾಪ್ಥರ್ ಸಿನಿಮಾದಲ್ಲಿ ಧನ್ಯಾ ರಾಮ್‌ಕುಮಾರ್ ಅಭಿನಯಿಸಿದ್ದಾರೆ. ಸದ್ಯ ಎಲ್ಲಾ ನಿನಗಾಗಿ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ.