ಕನ್ನಡದ ಪೊರ್ಕಿ ಸಿನಿಮಾ (Porki cinema) ಮೂಲಕ ನಟನೆಗೆ ಎಂಟ್ರಿ ಕೊಟ್ಟ ಬಹುಭಾಷಾ ನಟಿ ಪ್ರಣೀತಾ ಸುಭಾಷ್, ತಮ್ಮ ಫ್ಲೋಲೆಸ್ ಸೌಂದರ್ಯದಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರ ಅಂದಕ್ಕೆ ಸರಿಸಾಟಿ ಯಾರೂ ಇಲ್ವೇನೋ ಅನ್ನೋವಂತ ಅಂದ ಇವರದ್ದು.
28
ಈಗಾಗಲೇ ಮದುವೆಯಾಗಿ ಇಬ್ಬರು ಮುದ್ದು ಮಕ್ಕಳ ತಾಯಿಯಾಗಿರುವ ಈ ಬ್ಯೂಟಿಯ ಅಂದ ಕಿಂಚಿತ್ತು ಕಡಿಮೆಯಾಗಿಲ್ಲ, ಈಗಲೂ ಮುಖದಲ್ಲಿ ಅದೇ ಹೊಳಪು, ಅದೇ ಸೌಂದರ್ಯ, ಹಾಗೇ ನೋಡಿದ್ರೆ ನಟಿಯ ಅಂದ ಮತ್ತಷ್ಟು ಹೆಚ್ಚಿದಂತೆ ಕಾಣಿಸ್ತಿದೆ.
38
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ (Pranitha Subhash) ತಮ್ಮ ಫ್ಯಾಮಿಲಿ ಫೋಟೋಗಳನ್ನು, ಫೊಟೋ ಶೂಟ್ ಗಳನ್ನು ಹೆಚ್ಚಾಗಿ ಶೇರ್ ಮಾಡುತ್ತಲೇ ಇರುತ್ತಾರೆ. ಆ ಮೂಲಕ ಸಿನಿಮಾದಿಂದ ದೂರ ಇದ್ದರೂ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರ್ತಾರೆ ಬೆಡಗಿ.
48
ಇದೀಗ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುಂದರವಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊ ಶೂಟಲ್ಲಿ ನಟಿ ಲಂಗ ಹಾಗೂ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಸೌಂದರ್ಯಕ್ಕೆ ಮರುಳಾಗಿರುವ ಅಭಿಮಾನಿಗಳು ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
58
ಪ್ರಣೀತಾ ಪಿಂಕ್ ಬಣ್ಣದ ಬ್ಲೌಸ್, ಪಿಂಕ್ ಬಾರ್ಡರ್ ಹಾಗೂ ಕ್ರೀ ಬಣ್ಣದ ಮೇಲ್ಮೈ ಇರುವ ಲಂಗ ಧರಿಸಿದ್ದು, ದಾವಣಿಯನ್ನು ಹಾರ ಬಿಟ್ಟಿದ್ದಾರೆ. ತಮ್ಮ ಫೋಟೊಗಳ ಜೊತೆಗೆ ನಟಿ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಅಪರಿಮಿತ ಸೌಂದರ್ಯವಿದೆ ಎಂದು ಬರೆದುಕೊಂಡಿದ್ದಾರೆ.
68
ನಟಿಯ ಅಂದವನ್ನು ನೋಡಿ ಜನ ನಡೆದಾಡುವ ಕೊಕೈನ್ ಎಂದಿದ್ದಾರೆ. ಅಷ್ಟೇ ಅಲ್ಲ ತಡೆಯಿಲ್ಲದ ಸೌಂದರ್ಯ (flawless beauty), ಪರಿಶುದ್ಧವಾದ ಸೌಂದರ್ಯ ಅಂದ್ರೆ ಇದೇ ಎಂದಿದ್ದಾರೆ. ನಿಮ್ಮಿಂದಾಗಿ ಬೆಂಗಳೂರು ಮತ್ತಷ್ಟು ಹಾಟ್ ಆಗ್ತಿದೆ ಅಂತಾನೂ ಹೇಳಿದ್ದಾರೆ. ಇನ್ನೂ ಕೆಲವರು ಸೌಂದರ್ಯದ ಗಣಿ ಎಂದು ಹೊಗಳಿದ್ದಾರೆ.
78
ಇನ್ನು ನಟಿಯ ಒಂದಷ್ಟು ಲುಕ್ ನೋಡಿ ಒಬ್ಬರು ನೀವು ನೀತಾ ಅಂಬಾನಿಯ (Nita Ambani) ಯಂಗರ್ ವರ್ಶನ್ ಥರ ಕಾಣಿಸ್ತೀರಿ ಅಂತಾನೂ ಕಾಮೆಂಟ್ ಮಾಡಿದ್ದಾರೆ. ಇದು ಸುಳ್ಳು ಕೂಡ ಅಲ್ಲ, ಒಂದು ಆಂಗಲ್ ನಿಂದ ನೋಡಿದ್ರೆ ಪ್ರಣೀತಾ ಸ್ವಲ್ಪ ಮಟ್ಟಿಗೆ ನೀತಾ ಅಂಬಾನಿ ಥರಾನೆ ಕಾಣಿಸ್ತಾರೆ.
88
ಇನ್ನು ಕರಿಯರ್ ವಿಷ್ಯಕ್ಕೆ ಬಂದ್ರೆ ಮದುವೆಯಾಗಿ ಮಕ್ಕಳಾದ ಬಳಿಕ ನಟಿ ನಟನೆಯಿಂದ ದೂರ ಉಳಿದಿದ್ದಾರೆ. ಪ್ರಣೀತಾ ಅಭಿನಯದ ಸಿನಿಮಾ ರಾಮನ ಅವತಾರ ಕೊನೆಯದಾಗಿ ಕಳೆದ ವರ್ಷ ರಿಲೀಸ್ ಆಗಿತ್ತು. ನಟಿ ಮತ್ತೆ ಯಾವಾಗ ಸಿನಿಮಾಕ್ಕೆ ಕಂ ಬ್ಯಾಕ್ ಮಾಡ್ತಾರೆ ಅನ್ನೋದು ಗೊತ್ತಿಲ್ಲ.