ಕನ್ನಡ ಕಿರುತೆರೆಯ ಅಕ್ಕ, ಬಿಗ್ ಬಾಸ್ ಸ್ಪರ್ಧಿ ಹಾಗೂ ಜನಪ್ರಿಯ ನಿರೂಪಕಿ ಆಗಿರುವ ಅನುಪಮಾ ಗೌಡ ಇದೀಗ ಹೊಸ ಮನೆ ಕಟ್ಟಿಸಿದ್ದಾರೆ. ತಮ್ಮ ಕನಸಿನ ಮನೆಗೆ ನಮ್ಮನೆ ಎಂದು ಹೆಸರಿಟ್ಟಿದ್ದಾರೆ.
ಅಕ್ಟೋಬರ್ 10ರಂದು 'ನಮ್ಮನೆ' ಗೃಹಪ್ರವೇಶ ಮಾಡಿದ ಅನುಪಮಾ ಗೌಡ ತಂದೆಯನ್ನು ನೆನಪಿಸಿಕೊಂಡಿದ್ದಾರೆ. ತಂದೆ ಇರಬೇಕಿತ್ತು ಆದರೆ ಇಲ್ಲ ಹೀಗಾಗಿ ಅವರ ಫೋಟೋ ಇಟ್ಟಿರುವೆ ಎಂದಿದ್ದಾರೆ.
'ಇದು ಕನಸು ನನಸಾಗುವ ಕ್ಷಣ. ಈಗಲೂ ನನ್ನ ತಲೆಯಲ್ಲಿ ಈ ವಿಚಾರ ಹಾಗೆ ಇದೆ ಆದರೆ ನಾನು ಸಾಧಿಸಿರುವ ಅನ್ನೋ ಖುಷಿ ಇದೆ. ಸದಾ ನನ್ನದು ಅನ್ನೋ ಮನೆ ಇರಬೇಕಿತ್ತು' ಎಂದು ಅನುಪಮಾ ಬರೆದುಕೊಂಡಿದ್ದಾರೆ.
'ನನ್ನಮನೆಯಲ್ಲಿ ನನ್ನ ಮನಸ್ಸು ಇರುತ್ತದೆ...ನನಗೆ ಇಷ್ಟವಾದ ಬಣ್ಣವನ್ನು ಗೋಡೆ ಮೇಲೆ ಹಾಕಬಹುದು...ನನಗೆ ಇಷ್ಟವಾದ ವಸ್ತುವನ್ನು ನೇತಾಕಬಹುದು.ಶೂಟ್ ಮುಗಿಸಿ ಸುತ್ತು ಆಗಿ ಬಂದಾಗ ನನ್ನ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದು'
'ನನ್ನ ಅಡುಗೆ ಮನೆಯಲ್ಲಿ ನೆಮ್ಮದಿಯಾಗಿ ಅಡುಗೆ ಮಾಡಬಹುದು, ನನ್ನ ಪುಟ್ಟ ಗಾರ್ಡನ್‌ನಲ್ಲಿ ಇಷ್ಟ ಪಟ್ಟಿರುವ ಗಿಡಗಳನ್ನು ಬೆಳೆಸಬಹುದು.ತಂದೆ ಇದ್ದಾಗ ಕಟ್ಟಿಸಬೇಕು ಅಂದುಕೊಂಡೆ ಆದರೆ ಪ್ರಕೃತಿ ಮತ್ತು ಸಮಯ ನನ್ನ ಪರವಾಗಿ ಇರಲಿಲ್ಲ'
'ಇಂದು ನಾನು ಮಾಡಿರುವ ಕೆಲಸವನ್ನು ತಂದೆ ನೋಡಿ ಖುಷಿ ಪಟ್ಟಿರುತ್ತಿದ್ದರು, ನನ್ನ ಹೆಮ್ಮೆಯ ಮಗಳು ಎನ್ನುತ್ತಿದ್ದರು. ನನ್ನ ಶ್ರಮಕ್ಕೆ ಸ್ನೇಹಿತರು, ಕುಟುಂಬಸ್ಥರು ಮತ್ತು ನನ್ನ ಶೋಗಳು ಸಪೋರ್ಟ್ ಮಾಡಿದೆ'
'33ನೇ ವಯಸ್ಸಿಗೆ ಬೆಂಗಳೂರಿನಲ್ಲಿ ಮನೆ ಕಟ್ಟಿಸುವುದು ಸುಲಭವಾದ ಮಾತಲ್ಲ. ಯಾರೇ ಬಂದು ನಿನ್ನ ಕನಸು ಏನೆಂದು ಪ್ರಶ್ನೆ ಮಾಡಿದ್ದರೆ ಮನೆ ಕಟ್ಟಿಸುವುದು ಎಂದು ಹೇಳುತ್ತಿದ್ದೆ. ಮದುವೆ ಆಗುವುದು ನನ್ನ ಗುರಿ ಅಲ್ಲ'
'ನಮ್ಮ ಮನೆಯಂದು ಕನ್ನಡದಲ್ಲಿ ಹೆಸರು ಇಟ್ಟಿರುವುದಕ್ಕೆ ತುಂಬಾ ಖುಷಿ ಇದೆ. ಯಾರೇ ಕರೆ ಮಾಡಿದ್ದರೂ ನಮ್ಮ ಮನೆಗೆ ಬನ್ನಿ ಎಂದು ಹೇಳಬಹುದು ಆಗ ಬಹುತೇಕರಿಗೆ ಗೊಂದಲ ಆಗುತ್ತದೆ'ಎಂದು ಅನುಪಮಾ ಹೇಳಿದ್ದಾರೆ.