ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ‘ಮಾರ್ಟಿನ್’ ಸಿನಿಮಾ ಈ ಮೊದಲು ಅಂದುಕೊಂಡಂತೆ ಸೆ.30ಕ್ಕೆ ಬಿಡುಗಡೆ ಆಗುವುದಿಲ್ಲ. ಅದಕ್ಕೆ ಕಾರಣ ಚಿತ್ರದ ಶೂಟಿಂಗ್ ಮುಗಿಯದೇ ಇರುವುದು.
ಇತ್ತೀಚೆಗಷ್ಟೆ ಅರ್ಜುನ್ ಸರ್ಜಾ ತಾಯಿ, ಧ್ರುವ ಸರ್ಜಾ ಅವರ ಅಜ್ಜಿ ಲಕ್ಷ್ಮೀದೇವಮ್ಮ ನಿಧನರಾದರು. ನಿಧನಕ್ಕೂ ಮುನ್ನ ಕೆಲ ತಿಂಗಳುಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಅಜ್ಜಿಯ ಚಿಕಿತ್ಸೆ ಹಾಗೂ ಅವರ ನಿಧನದಿಂದ ಅಂದುಕೊಂಡ ಸಮಯಕ್ಕೆ ಧ್ರುವ ಸರ್ಜಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಹೀಗಾಗಿ ಶೂಟಿಂಗ್ ಬಾಕಿ ಇರುವುದರಿಂದ ಸೆ.30ಕ್ಕೆ ‘ಮಾರ್ಟಿನ್’ ಸಿನಿಮಾ ತೆರೆ ಮೇಲೆ ಬರುತ್ತಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.
ಉದಯ… ಕೆ.ಮೆಹ್ತಾ ನಿರ್ಮಾಣದ, ಎ ಪಿ ಅರ್ಜುನ್ ನಿರ್ದೇಶನದ ಈ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯಬೇಕಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಿಸುವುದಾಗಿ ನಿರ್ಮಾಪಕರು ಹೇಳುತ್ತಾರೆ.
ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರಕ್ಕೆ ಈಗಾಗಲೇ ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ವೈಭವಿ ಶಾಂಡಿಲ್ಯನಾಯಕಿಯಾಗಿ ನಟಿಸಿದ್ದಾರೆ.
ಮಾರ್ಟಿನ್ ಸಿನಿಮಾದ ಬಗ್ಗೆ ಇಂದು ದೇಶಾದ್ಯಂತ ಸುದ್ದಿಯಾಗ್ತಿದೆ. ಅದಕ್ಕೆ ಕಾರಣ ಧ್ರುವ ಸರ್ಜಾ ಬಣ್ಣದ ಜಗತ್ತಲ್ಲಿ ನಡೆದು ಬಂದ ಹಾದಿ. ಹೀಗಾಗಿ ಮಾರ್ಟಿನ್ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೋ ಮೊದಲು ಬಹದ್ದೂರ್ ಗಂಡು ಧ್ರುವ ಬೆಳ್ಳಿತೆರೆಯಲ್ಲಿ ಬಿಗ್ ಸ್ಟಾರ್ ಆಗಿ ಮೋಲ್ಡ್ ಆಗಿದ್ದು ಹೇಗೆ ಅಂತ ಒಮ್ಮೆ ಮೆಲುಕು ಹಾಕಲೇ ಬೇಕು. ಯಾಕಂದ್ರೆ ಅದೇ ಒಂದು ಇಂಟ್ರೆಸ್ಟಿಂಗ್ ಕತೆ.
ಅದ್ಧೂರಿ, ಬಹದ್ಧೂರ್ ದೊಡ್ಡ ಸಕ್ಸಸ್ ಬಳಿಕೆ ಆಕ್ಷನ್ ಪ್ರಿನ್ಸ್ ಗೆ ಎದುರಾಗಿದ್ದ ದೊಡ್ಡ ಚಾಲೆಂಜ್ ಅಂದರೆ ಹ್ಯಾಟ್ರಿಕ್ ಹಿಟ್ ಸಿನಿಮಾ ಕೊಡೋದು. ಹೀಗಾಗಿ ಅದ್ಧೂರಿ ಹುಡುಗ ತನ್ನ ಮೂರನೇ ಸಿನಿಮಾದಲ್ಲಿ ಭರ್ಜರಿಯಾಗಿ ಬೆಳ್ಳಿತೆರೆ ಮೇಲೆ ಬಂದರು.
ನಿರ್ದೇಶಕ ಚೇತನ್ ಜೊತೆ ಮತ್ತೊಮ್ಮೆ ಜೊತೆಯಾದ ಧ್ರುವ ಭರ್ಜರಿ ಸಿನಿಮಾದಲ್ಲಿ ಮತ್ತೊಮ್ಮೆ ಬಿಗ್ ಹಿಟ್ ಕೊಟ್ಟರು. ಭರ್ಜರಿ ಸಿನಿಮಾ 135 ದಿನ ಪ್ರದರ್ಶನ ಕಾಣ್ತು.
ಈ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಳಿಕ ಒಟ್ಟೊಟ್ಟಿಗೆ ಮೂರು ಬಿಗ್ ಹಿಟ್ ಸಿನಿಮಾ ಕೊಟ್ಟ ಕನ್ನಡದ ಎರಡನೇ ನಾಯಕ ಅನ್ನೋ ಹೆಗ್ಗಳಿಕೆ ಪಡಿದ್ರು ಧ್ರುವ.