ಫ್ಯಾಮಿಲಿ ಜೊತೆ ಹೊಸ ವರ್ಷ ಆಚರಿಸಿದ ಧ್ರುವ ಸರ್ಜಾ; ಯಾವ ರೆಸಾರ್ಟ್‌ ಅಣ್ಣ ಅಂತ ಕೇಳ್ತಿದ್ದಾರೆ ಫ್ಯಾನ್ಸ್‌

First Published | Jan 2, 2025, 3:55 PM IST

ಹೊಸ ವರ್ಷವನ್ನು ಫ್ಯಾಮಿಲಿ ಜೊತೆ ಆಚರಿಸಿದ ಧ್ರುವ ಸರ್ಜಾ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.....

ಸ್ಯಾಂಡಲ್‌ವುಡ್‌ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣ ಹಾಗೂ ಮಗಳು ರುದ್ರಾಕ್ಷಿ ಮತ್ತು ಮಗ ಹಯಗ್ರೀವ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. 

 'ಥ್ಯಾಂಕ್‌ ಯು ದೇವರೆ 2024ರಲ್ಲಿ ಸೃಷ್ಟಿ ಮಾಡಿಕೊಟ್ಟಿ ಬ್ಯೂಟಿಫುಲ್ ವಿಚಾರಗಳಿಗೆ'  ಎಂದು ಪ್ರೇರಣಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Tap to resize

ಹಸಿರು ಬಣ್ಣದ ಕೋ-ಆರ್ಡ್‌ ಸೆಟ್‌ನಲ್ಲಿ ಪ್ರೇರಣಾ ಕಾಣಿಸಿಕೊಂಡರೆ, ನೀಲಿ ಬಣ್ಣದ ಹೋಮ್‌ ವೇರ್‌ ಬಟ್ಟೆಯಲ್ಲಿ ಧ್ರುವ ಮಿಂಚಿದ್ದಾರೆ. ಮಕ್ಕಳಿಬ್ಬರು ಅವರದ್ದೇ ಲೋಕದಲ್ಲಿ ಆಟವಾಡುತ್ತಿದ್ದಾರೆ. 

 ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಈ ವರ್ಷ ರಿಲೀಸ್ ಆಗಿ  ಭರ್ಜರಿ ಪ್ರದರ್ಶನ ಪಡೆದಿದೆ. ಈ ವರ್ಷ ಕೆಡಿ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದೆ. 

ಧ್ರುವ ಸರ್ಜಾ ಐಷಾರಾಮಿ ರೆಸಾರ್ಟ್‌ನಲ್ಲಿ ಹೊಸ ವರ್ಷ ಆಚರಿಸುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಭೇಟಿ ಮಾಡಬೇಕು ವಿಳಾಸ ಕೊಡಿ ಎಂದು ಕೇಳಿದ್ದಾರೆ. 

ಧ್ರುವ ಪತ್ನಿ ಪ್ರೇರಣಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟಿವ್ ಆಗಿದ್ದಾರೆ. ಮಕ್ಕಳ ಫೋಟೋ ಹಾಗೂ ಫ್ಯಾಮಿಲಿ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿರುತ್ತಾರೆ. 

Latest Videos

click me!