ಸ್ಯಾಂಡಲ್​ವುಡ್ ನಟರ ನೀವು ನೋಡಿರದ ಬಲು ಅಪರೂಪದ ಮದುವೆ ಫೋಟೋಗಳು…

Published : Jan 02, 2025, 01:24 PM ISTUpdated : Jan 02, 2025, 01:28 PM IST

ರವಿಚಂದ್ರನ್ ರಿಂದ ಹಿಡಿದು ಶ್ರೀಮುರಳಿವರೆಗೂ ಇಲ್ಲಿದೆ ನೀವು ಎಂದೂ ಕಂಡಿರದ ಚಂದನವನದ ತಾರೆಯರ ಅಪರೂಪದ ಮದುವೆ ಫೋಟೊಗಳು. ಇವರಲ್ಲಿ ನಿಮ್ಮ ನೆಚ್ಚಿನ ಜೋಡಿ ಯಾರೆಂದು ಹೇಳಿ..  

PREV
110
ಸ್ಯಾಂಡಲ್​ವುಡ್ ನಟರ ನೀವು ನೋಡಿರದ ಬಲು ಅಪರೂಪದ ಮದುವೆ ಫೋಟೋಗಳು…

ಜಗ್ಗೇಶ್ : ನವರಸ ನಾಯಕ ಜಗ್ಗೇಶರದ್ದು (Jaggesh) ಲವ್ ಮ್ಯಾರೇಜ್. ಇವರ ಪ್ರೀತಿಯ ವಿಷ್ಯ ಹೈ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಜಗ್ಗೇಶ್ ಮತ್ತು ಪರಿಮಳ ಜೋಡಿ 1984 ರ ಮಾರ್ಚ್ 22 ರಂದು ಸಪ್ತಪದಿ ತುಳಿದರು. ಇವರಿಗೆ ಇಬ್ಬರು ಗಂಡು ಮಕ್ಕಳು ಗುರುರಾಜ್ ಮತ್ತು ಯತಿರಾಜ್. 

210

ಶಿವರಾಜ್ ಕುಮಾರ್ : ಡಾ. ಶಿವರಾಜ್ ಕುಮಾರ್ (Shivaraj Kumar) ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್ ಬಂದಾರಪ್ಪ ಅವರ ಪುತ್ರಿ ಗೀತಾ ಅವರನ್ನು 1986 ರಲ್ಲಿ ಮದುವೆಯಾಗಿದ್ದು, ಈ ಜೋಡಿಗೆ ನಿರುಪಮಾ ಮತ್ತು ನಿವೇದಿತಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. 
 

310

ವಿ. ರವಿಚಂದ್ರನ್ : ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅವರು ಪ್ರೇಮಿಗಳ ದಿನದಂದು ಅಂದ್ರೆ, ಫೆಬ್ರವರಿ 14, 1986 ರಂದು ಸುಮತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ಮೂರು ಮಕ್ಕಳಿದ್ದು, ಮಗಳು ಗೀತಾಂಜಲಿ, ವಿಕ್ರಮ್ ಮತ್ತು ಮನೋರಂಜನ್ ಇಬ್ಬರು ಗಂಡು ಮಕ್ಕಳು. 

410

ರಮೇಶ್ ಅರವಿಂದ್ : ಎವರ್ ಗ್ರೀನ್ ನಟ ರಮೇಶ್ ಅರವಿಂದ್ (Ramesh Aravind) ಪ್ರೀತಿಸಿ ಮದುವೆಯಾಗಿರೋದು. ಕಾಲೇಜಿನಲ್ಲೇ ಲವ್ ಮಾಡಿರೋ ಅರ್ಚನಾ ಮತ್ತು ರಮೇಶ್, 1991 ರಲ್ಲಿ ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. 

510

ರಾಘವೇಂದ್ರ ರಾಜಕುಮಾರ್ : ರಾಘವೇಂದ್ರ ರಾಜಕುಮಾರ್ ಅವರು ಮದುವೆಯಾಗಿದ್ದು, ಮಂಗಳಾ ಎನ್ನುವವರನ್ನು. ಇವರಿಗೆ ಇಬ್ಬರು ಮಕ್ಕಳು ಯುವರಾಜ್ ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್. 
 

610

ಪುನೀತ್ ರಾಜಕುಮಾರ್ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Punith Rajkumar)  ಅಶ್ವಿನಿಯವರನ್ನು 1999ರಲ್ಲಿ ಮದುವೆಯಾದರು. ಈ ಜೋಡಿಗೆ ವಂದಿತಾ ಹಾಗೂ ಧೃತಿ ಎನ್ನುವ ಇಬ್ಬರು ಮಕ್ಕಳಿದ್ದಾರೆ. 

710

ದರ್ಶನ್ ತೂಗುದೀಪ : ದರ್ಶನ್ ತೂಗುದೀಪ ಹಾಗೂ ವಿಜಯಲಕ್ಷ್ಮೀ 2000 ನೇ ಇಸವಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ವಿನೀಶ್ ತೂಗುದೀಪ ಎನ್ನುವ ಮಗ ಇದ್ದಾನೆ. 
 

810

ಸುದೀಪ್ : ಕಿಚ್ಚ ಸುದೀಪ್ (Kiccha Sudeep) ಅವರು ಮಲಯಾಳಿ ಹುಡುಗಿ ಪ್ರಿಯಾರನ್ನು ಇಷ್ಟಪಟ್ಟು ಮದುವೆಯಾಗಿದ್ದಾರೆ. ಇವರು 2001ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು, ಈ ಜೋಡಿಗೆ ಸಾನ್ವಿ ಸುದೀಪ್ ಎನ್ನುವ ಮಗಳಿದ್ದಾರೆ. 
 

910

ವಿಜಯ್ ರಾಘವೇಂದ್ರ : ವಿಜಯ್ ರಾಘವೇಂದ್ರ ಮಂಗಳೂರಿನ ಹುಡುಗಿ ಸ್ಪಂದನಾರನ್ನು 2007 ರಲ್ಲಿ ಮದುವೆಯಾದರು. ಇವರ ಪುತ್ರ ಶೌರ್ಯ ವಿಜಯ್ ರಾಘವೇಂದ್ರ. 
 

1010

ಶ್ರೀಮುರಳಿ (Srimurali) : ಶ್ರೀಮುರಳಿ ಮದುವೆಯಾಗಿದ್ದು, ತಮ್ಮ ಕಾಲೇಜು ಕ್ರಶ್, ಮೊದಲ ಲವ್ ಆಗಿದ್ದ ವಿದ್ಯಾ ಅವರನ್ನು. ಈ ಜೋಡಿ 2008ರಲ್ಲಿ ಮದುವೆಯಾಗುವ ಮೂಲಕ ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದರು. ಈ ಜೋಡಿಗೆ ಇಬ್ಬರು ಮಕ್ಕಳು ಅಗಸ್ತ್ಯ ಹಾಗೂ ಅತೀವ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories