9ನೇ ಕ್ಲಾಸ್ ಹುಡುಗಿ ಮೇಲೆ ಚಿಗುರು ಮೀಸೆ ಹುಡುಗನ ಲವ್, ಇದು ಸ್ಯಾಂಡಲ್‌ವುಡ್ ಸ್ಟಾರ್ ನಟನ ರಿಯಲ್ ಪ್ರೇಮ ಕಥೆ!

First Published | Jul 6, 2024, 4:45 PM IST

ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿಯದ್ದು ಹೈ ಸ್ಕೂಲ್ ಲವ್ ಸ್ಟೋರಿ. ಇವರಿಬ್ಬರಿಗೆ ಲವ್ ಆದಾಗ ಪ್ರೇರಣಾ ಇದ್ದಿದ್ದು 9ನೇ ಕ್ಲಾಸಲ್ಲಿ, ಧ್ರುವನಿಗೆ 16 ವರ್ಷ. ಅವತ್ತು ಮಿಡಲ್ ಕ್ಲಾಸ್ ಹುಡುಗಿಯೊಂದಿಗೆ ಶುರುವಾರ ಪ್ರೇಮ, ಸ್ಟಾರ್ ನಟನಾದರೂ ಕಡಿಮೆಯಾಗಲಿಲ್ಲ. ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸ್ಟಾರ್ಟ್ ಆದ ಬಗೆ ಇದು.
 

Dhruva Sanrja and Prerana Shanakar love story which turned into couples pav

ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ (action prince) ಎಂದೇ ಖ್ಯಾತಿ ಪಡೆದ ಧ್ರುವಾ ಸರ್ಜಾ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹು ನೀರೀಕ್ಷೆಯ ಕೆಡಿ ದ ಡೆವಿಲ್ ಮತ್ತು ಮಾರ್ಟಿನ್ ಸಿನಿಮಾ ಭರ್ಜರಿಯಿಂದ ಶೂಟಿಂಗ್ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ನಟ ಈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 
 

2021 ರಲ್ಲಿ ಧ್ರುವ (Dhruva Sarja) ಪೊಗರು ಸಿನಿಮಾದಲ್ಲಿ ನಟಿಸಿದ್ದೇ ಕೊನೆ, ಬಳಿಕ ಮಾರ್ಟಿನ್ ಸಿನಿಮಾಕ್ಕಾಗಿ ಬಾಡಿ ಬಿಲ್ಡ್ ಮಾಡಿ ತಯಾರಿ ಮಾಡಿಕೊಂಡಿದ್ದು, ಅದೇ ಸಿನಿಮಾದಲ್ಲಿ ಶೂಟಿಂಗಲ್ಲಿ ಬ್ಯುಸಿಯಾಗಿದ್ದು. ಅದರ ಜೊತೆ ಜೊತೆಗೆ ತಮ್ಮ ಫ್ಯಾಮಿಲಿ ಜೊತೆನೂ ನಟ ಸಮಯ ಕಳೆಯುತ್ತಾ ಮಗ, ಮಗಳ ಜೊತೆಗಿನ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. 

Tap to resize

ಧ್ರುವ 2019ರ ನವಂಬರ್ 25ರಂದು ಬಾಲ್ಯದ ಗೆಳತಿ, ಗರ್ಲ್ ಫ್ರೆಂಡ್ ಆಗಿದ್ದ ಪ್ರೇರಣಾ ಶಂಕರ್ (Prerana Shankar) ಜೊತೆ ಮದುವೆಯಾಗಿ, ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಇದೇ ಜನವರಿಯಲ್ಲಿ ತನ್ನ ಇಬ್ಬರು ಮಕ್ಕಳಿಗೂ ನಟ ನಾಮಕರಣ ಮಾಡಿ ರುದ್ರಾಕ್ಷಿ ಮತ್ತು ಹಯಗ್ರೀವ ಎಂದು ಹೆಸರಿಟ್ಟಿದ್ದಾರೆ. ಇದೀಗ ಧ್ರುವ ಮತ್ತು ಪ್ರೇರಣಾ ಸರ್ಜಾ ಜೋಡಿಯ ಲವ್ ಸ್ಟೋರಿ ಮತ್ತೆ ಸೌಂಡ್ ಮಾಡ್ತಿದೆ.
 

ಪ್ರೇರಣಾ ಮತ್ತು ಧ್ರುವ ಅವರದ್ದು ಹೈ ಸ್ಕೂಲ್ ಲವ್ ಸ್ಟೋರಿ (High school lovestory). ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದು, ಲವ್ ಮಾಡಲು ಆರಂಭಿಸಿದ್ದಾಗ ಪ್ರೇರಣಾ ಒಂಭತ್ತನೇ ಕ್ಲಾಸಿನಲ್ಲಿದ್ರು, ಧ್ರುವ ಸರ್ಜಾ ಡಿಗ್ರಿ ಮೊದಲನೇ ವರ್ಷದಲ್ಲಿ ಓದುತ್ತಿದ್ದರು.

ಪ್ರೇರಣಾ ನಟ ಧ್ರುವ ಸರ್ಜಾ ಅವರ ಎದುರು ಮನೆಯ ಹುಡುಗಿ. ಸುಮಾರು ವರ್ಷಗಳಿಂದ ಇಬ್ಬರ ನಡುವೆ ಪರಿಚಯ ಇತ್ತು. ಕಳೆದ 15 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಬಳಿಕ ಮನೆಯವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 
 

ರಿಲೇಶನ್ ಶಿಪ್ ಆರಂಭದಿಂದಲೂ ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಆಗಿದ್ರು. ಇವರಿಬ್ಬರು ಲವ್ ಶುರುವಾಗಿ 7 ವರ್ಷದ ನಂತರ ಧ್ರುವ ಅದ್ಧೂರಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಇಬ್ಬರದ್ದು ಕರಿಯರ್ ಬೇರೆ ಬೇರೆ ಯಾದ್ರೂ ಪ್ರೀತಿ ಕಡಿಮೆಯಾಗಲೇ ಇಲ್ಲ. ಧ್ರುವ ಸಿನಿಮಾ ಫ್ಯಾಮಿಲಿಯಿಂದ ಬಂದ ಹುಡುಗ- ಪ್ರೇರಣಾ ಸಿನಿಮಾದ ಟಚ್ ಇಲ್ಲದ ಸಾಧಾರಣ ಕುಟುಂಬದಿಂದ ಬಂದ ಸಿಂಪಲ್ ಹುಡುಗಿ, ಧ್ರುವ ಸ್ಟಾರ್ ನಟನಾಗಿ ಗುರುತಿಸಿಕೊಂಡ ನಂತರವೂ ಇಬ್ಬರ ಪ್ರೇಮ ದೂರಾಗಲಿಲ್ಲ. 
 

ಸಿಂಪಲ್ ಹುಡುಗಿ ಪ್ರೇರಣಾ, ಉಪನ್ಯಾಸಕಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಧ್ರುವ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟನಾಗಿ ಬೆಳೆದ್ರು. ಧ್ರುವ ಸೂಪರ್ ಸ್ಟಾರ್ ಆದ್ರೂ ನಾನಿನ್ನು ಸಿಂಪಲ್ ಹುಡುಗಿಯೇ ಎನ್ನುವ ಪ್ರೇರಣಾ, ಇದ್ಯಾವುದೂ ನಮ್ಮ ಸಂಬಂಧಕ್ಕೆ ಅಡ್ಡಿಯಾಗಿಲ್ಲ ಎನ್ನುತ್ತಾರೆ. 15 ವರ್ಷದ ಪ್ರೀತಿ ಮಾಡಿದ ವ್ಯಕ್ತಿಯನ್ನೆ ಜೀವನ ಸಂಗಾತಿಯಾಗಿ ಪಡೆದ ಈ ಜೋಡಿ ನಿಜಕ್ಕೂ ಸೂಪರ್. 
 

Latest Videos

click me!