ಫೋಟೋಗಳನ್ನು ಹಂಚಿಕೊಂಡಿರುವ ನಿಖಿಲ್, ಮಹಾಮಹಿಮರಾದ ಶ್ರೀ ಶಿರಡಿ ಸಾಯಿಬಾಬಾ (Shirdi Saibab) ಅವರ ದರ್ಶನ ಪಡೆದು ಧನ್ಯನಾದೆ.. ಪೂಜ್ಯ ತಂದೆ, ತಾಯಿ ಅವರು ಮತ್ತು ನನ್ನ ಧರ್ಮಪತ್ನಿ, ಪುತ್ರನ ಜೊತೆಯಲ್ಲಿ ಬಾಬಾ ದರ್ಶನ ಸಿಕ್ಕಿದ್ದು ನನ್ನ ಮಹಾಭಾಗ್ಯವೇ ಹೌದು. ಸರ್ವರಿಗೂ ಒಳ್ಳೆಯದಾಗಲಿ ಎಂದು ಆ ದೈವ ಸ್ವರೂಪನಲ್ಲಿ ಬೇಡಿಕೊಂಡೆ ಎಂದು ಬರೆದುಕೊಂಡಿದ್ದಾರೆ.