ಭಾವತೀರಯಾನದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಲಕ್ಷ್ಮೀ ನಿವಾಸ ನಟಿ ಚಂದನಾ ಅನಂತಕೃಷ್ಣ

Published : May 14, 2024, 06:01 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿಯಾಗಿ ಮಿಂಚುತ್ತಿರುವ ಚಂದನ ಅನಂತಕೃಷ್ಣ ಇದೀಗ ಭಾವ ತೀರ ಯಾನದ ಮೂಲಕ ಸ್ಯಾಂಡಲ್ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ದಿದ್ದಾರೆ.  

PREV
18
ಭಾವತೀರಯಾನದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಲಕ್ಷ್ಮೀ ನಿವಾಸ ನಟಿ ಚಂದನಾ ಅನಂತಕೃಷ್ಣ

ಕಿರುತೆರೆ ನಟಿಯಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ, ಗಾಯಕಿಯಾಗಿ, ಡ್ಯಾನ್ಸರ್ ಆಗಿ, ನಿರೂಪಕಿಯೂ ಆಗಿ ಗುರುತಿಸಿಕೊಂಡಿರುವ ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಇದೀಗ ಹೊಸ ಹೆಜ್ಜೆಯನ್ನಿಡುತ್ತಿದ್ದು, ಕಿರುತೆರೆಯಿಂದ ಹಿರಿತೆರೆಗೆ ಲಗ್ಗೆ ಇಟ್ಟಿದ್ದಾರೆ. 
 

28

ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಲಕ್ಷ್ಮೀ ಮತ್ತು ಶ್ರೀನಿವಾಸರ ಕಿರಿಯ ಮಗಳು ಮತ್ತು ಜಯಂತ್ ನ ಪತ್ನಿ ಜಾಹ್ನವಿಯಾಗಿ ಅದ್ಭುತವಾಗಿ ನಟಿಸುತ್ತಿರುವ ಚಂದನಾ ತಮ್ಮ ಸ್ಯಾಂಡಲ್ ವುಡ್ ಡೆಬ್ಯೂಗೆ ರೆಡಿಯಾಗ್ತಿದ್ದಾರೆ. 

38

ಕನ್ನಡದ ‘ಶಾಖಾಹಾರಿ’ ಚಿತ್ರಕ್ಕೆ ಸಂಗೀತ ನೀಡಿದ್ದ ಮಯೂರ ಅಂಬೇಕಲ್ಲು ಹಾಗೂ ಅವರ ಸ್ನೇಹಿತ ತೇಜಸ್‌ ಕಿರಣ್‌ ಜೊತೆ ಸೇರಿ ಹೊಸ ಸಿನಿಮಾ ನಿರ್ದೇಶಿಸುತ್ತಿದ್ದು, ಈ ಸಿನಿಮಾಕ್ಕೆ ‘ಭಾವ ತೀರ ಯಾನ’ (Bhava Teera Yana) ಎಂಬ ಟೈಟಲ್‌ ಇಡಲಾಗಿದೆ. 
 

48

ಯುವ ಪ್ರತಿಭೆಗಳೇ ಸೇರಿ ಮಾಡಿದ ಚಿತ್ರದಲ್ಲಿ ನಟಿ ಚಂದನಾ ಅನಂತಕೃಷ್ಣ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದಲ್ಲಿನ ಚಂದನಾ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ಸಿನಿಮಾದಲ್ಲಿ ಧೃತಿ ಎಂಬ ಪಾತ್ರದಲ್ಲಿ  ಚಂದನಾ ನಟಿಸುತ್ತಿದ್ದಾರೆ. 
 

58

ನನ್ನ ಆಸೆನೂ ಒಂದು ದಿನ ಸಮುದ್ರನೇ ಆಗಿತ್ತು, ಆದ್ರೆ ಸಮುದ್ರದ ನೀರು ಕುಡಿಯೋಕೆ ಎಲ್ಲಾಗುತ್ತೆ ಹೇಳಿ! ಎನ್ನುತ್ತ ಗಂಭೀರ ಭಾವನೆಯೊಂದಿಗೆ ಕುಳಿತ ಚಂದನ ಅನಂತಕೃಷ್ಣ ಅವರ ಫಸ್ಟ್ ಲುಕ್ ಕಳೆದ ಕೆಲ ದಿನಗಳಿಂದ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ. 

68

ಹೊಸ ಸಿನಿಮಾ ಮತ್ತು ಕಥೆಯ ಬಗ್ಗೆ ಮಾತನಾಡಿರುವ ಚಂದನಾ ಇಲ್ಲಿವರೆಗೆ ಸೀರಿಯಲ್‌ಗಳಲ್ಲಿ ನನ್ನ ಸ್ವಭಾವಕ್ಕೆ ತಕ್ಕಂತ ಪಾತ್ರಗಳೇ ಸಿಕ್ಕಿತ್ತು, ಆದರೆ ಈ ಸಿನಿಮಾದಲ್ಲಿ ಪ್ರಬುದ್ಧ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರತಿಯೊಂದೂ ಬೇರೆ ಬೇರೆ ಪಾತ್ರಗಳು ನನ್ನ ಸುತ್ತ ಸುತ್ತುತ್ತವೆ ಎಂದಿದ್ದಾರೆ. 

78

ಇನ್ನು ತಾನು ಒಂದೇ ರೀತಿಯ ಪಾತ್ರಗಳನ್ನು ಮಾಡೋದಿಲ್ಲ ಎಂದಿರುವ ಚಂದನಾ ಚಾಲೆಂಜಿಂಗ್ ಆಗಿರುವ ಪಾತ್ರಗಳಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿದ್ದಾರೆ. ಹಾಗೆಯೇ ತಾವು ಡ್ಯಾನ್ಸರ್ ಮತ್ತು ಸಿಂಗರ್ ಆಗಿರೋದರಿಂದ ಅದಕ್ಕೆ ಸಂಬಂಧಿಸಿದ ಸಿನಿಮಾಗಳಲ್ಲಿ ನಟಿಸುವ ಬಗ್ಗೆಯೂ ನಟಿ ಆಸಕ್ತಿ ಹೊಂದಿದ್ದಾರೆ. 

88

ಕಿರುತೆರೆಯಲ್ಲಿ ಹೂಮಳೆ, ರಾಜಾರಾಣಿ, ಡ್ಯಾನ್ಸ್ ರಿಯಾಲಿಟಿ ಶೋ, ಸಿಂಗಿಂಗ್ ಶೋದಲ್ಲಿ ನಿರೂಪಕಿಯಾಗಿ ಸೈ ಎನಿಸಿಕೊಂಡಿರುವ ಚಂದನ ಕನ್ನಡ ಚಿತ್ರರಂಗದ (Sandalwood) ಭರವಸೆಯ ನಟಿಯಾಗಿ ಮೂಡಿ ಬರುತ್ತಾರೆಯೇ? ಅನ್ನೋದನ್ನು ಸಿನಿಮಾ ಬಿಡುಗಡೆಯಾದ ಮೇಲೆ ಕಾದು ನೋಡಬೇಕು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories